ರುದ್ರಾಕ್ಷಿಯಿಂದ ಬಯಸಿದ ಲಾಭ ಬೇಕಂದ್ರೆ ಈ ನಿಯಮ ಪಾಲಿಸಿ ಯಾರಾದರೂ ತಮ್ಮ ಜೀವನದಲ್ಲಿ ರೂಪಾಂತರವನ್ನು ಬಯಸಿದರೆ ಮತ್ತು ವಿಷಯಗಳನ್ನು ಸಾಧಿಸುವುದು ಕಷ್ಟವಾಗುತ್ತಿದ್ದರೆ ಅಂಥವರ ಪಾಲಿಗೆ ವರಮಾಲೆ ರುದ್ರಾಕ್ಷಿ ಮಾಲೆ. ರುದ್ರಾಕ್ಷಿ ಧರಿಸುವ ಮುನ್ನ ಯಾವೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ತಿಳಿಸಿದ್ದೇವೆ. ಹೆಸರೇ ಹೇಳುವಂತೆ ರುದ್ರನ ಅಕ್ಷಿ ಎಂದರೆ, ಭಗವಾನ್ ಶಿವನ ಕಣ್ಣೀರಿನಿಂದ ಸೃಷ್ಟಿಯಾಗಿದೆ ರುದ್ರಾಕ್ಷಿ. ಈ ರುದ್ರಾಕ್ಷಿಯನ್ನು ಎಲ್ಲ ನೇಮನಿಷ್ಠೆಯಿಂದ ಧರಿಸುವ ವ್ಯಕ್ತಿಗೆ ಯಶಸ್ಸು ಸಿದ್ಧಿಯಾಗುತ್ತದೆ. ಜೊತೆಗೆ, ಜೀವನದ ಕಠಿಣ ಹಾದಿಗಳನ್ನು ಆತ ಸುಲಭವಾಗಿ ಸಾಗಲು ಸಾಧ್ಯವಾಗುತ್ತದೆ. ರುದ್ರಾಕ್ಷಿಯನ್ನು ಧರಿಸುವ ಮತ್ತು ಪೂಜಿಸುವವನು ಸಮೃದ್ಧಿ, ಶಾಂತಿ ಮತ್ತು ಆರೋಗ್ಯದಂತಹ ಸಾಕಷ್ಟು ಧನಾತ್ಮಕ ವಿಷಯಗಳನ್ನು ಗಳಿಸುತ್ತಾನೆ. ರುದ್ರಾಕ್ಷಿಯು ಯಾವುದೇ ರತ್ನಗಳು, ಯಂತ್ರ, ತಂತ್ರ, ಮಂತ್ರಗಳಿಗಿಂತ ಹೆಚ್ಚು ಶಕ್ತಿಯುತವಾಗಿದೆ. ಆದರೂ ರುದ್ರಾಕ್ಷಿಯ ಎಲ್ಲ ಪ್ರಯೋಜನಗಳನ್ನು ಮತ್ತು ಆಶೀರ್ವಾದವನ್ನು ಸಾಧಿಸಲು ರುದ್ರಾಕ್ಷಿ()ಯನ್ನು ಧರಿಸುವ ಮೊದಲು ಕೆಲ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ರುದ್ರಾಕ್ಷಿ ವಿಷಯವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು