: ಎದುರಾಗುವ ಅಪಾಯವನ್ನು ಮುಂಚಿತವಾಗಿ ತಿಳಿಸುತ್ತೆ ತುಳಸಿ! ಶಾಸ್ತ್ರಗಳ ಪ್ರಕಾರ, ತುಳಸಿ ಗಿಡವು ಮನೆಗೆ ಬರುವ ಅನಾಹುತಗಳನ್ನು ತಡೆಗಟ್ಟಲು ಹಾಗೂ ರೋಗಗಳ ನಾಶಕ್ಕೆ ಉತ್ತಮ ಪರಿಹಾರವಾಗಿದೆ. ಮನೆಗೆ ಎದುರಾಗುವ ಅಪಾಯದ ಮುನ್ಸೂಚನೆ ನೀಡುತ್ತೆ ಈ ಸಸ್ಯ. ಶಾಸ್ತ್ರಗಳ ಪ್ರಕಾರ ತುಳಸಿ ಗಿಡವು ಮನೆಯಲ್ಲಿ ಬರುವ ಅನಾಹುತಗಳನ್ನು ತಡೆಯಲು ಹಾಗೂ ರೋಗಗಳ ನಾಶಕ್ಕೆ ಉತ್ತಮ ಪರಿಹಾರವಾಗಿದೆ. ಕುಟುಂಬದ ಆರ್ಥಿಕ ಸ್ಥಿತಿಗೂ ಇದು ಮಂಗಳಕರ. ಮನೆಯಲ್ಲಿ ತುಳಸಿ ಗಿಡವಿರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ತುಳಸಿಗೆ ಸಂಬಂಧಿಸಿದ ವಾಸ್ತುವಿನ ಬಗ್ಗೆ ತಿಳಿಯೋಣ. ತುಳಸಿ ಸಸ್ಯವು ತೊಂದರೆಗಳ ಬಗ್ಗೆ ಮುಂಚಿತವಾಗಿ ನಿಮ್ಮನ್ನು ಎಚ್ಚರಿಸುತ್ತದೆ. ಧಾರ್ಮಿಕ ಗ್ರಂಥಗಳಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ. ಹೌದು, ತುಳಸಿಯನ್ನು ಲಕ್ಷ್ಮಿ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯನ್ನು ಸಮೃದ್ಧಿಯ ದೇವತೆ ಎಂದು ನೋಡಲಾಗುತ್ತದೆ. ಹಾಗಾಗಿ ಮನೆಯಲ್ಲಿ ತುಳಸಿ ಒಣಗುತ್ತಿದೆ ಎಂದರೆ ಲಕ್ಷ್ಮಿ ದೇವಿ ಮನೆಯಿಂದ ದೂರ ಹೋಗುತ್ತಿದ್ದಾಳೆ, ಹಣಕಾಸಿನ ಸಮಸ್ಯೆಗಳು ಶುರುವಾಗುತ್ತವೆ ಎಂಬ ಸೂಚನೆ ಇದಾಗಿದೆ ಎಂದು ಪರಿಗಣಿಸಲಾಗುತ್ತದೆ. ಸೌಮ್ಯವಾಗಿ ಕಾಣುವ ಈ ತುಳಸಿ ಗಿಡ ನಮ್ಮ ಮನೆಯ ಎಲ್ಲಾ ದೋಷಗಳನ್ನು ದೂರ ಮಾಡುತ್ತದೆ. ತುಳಸಿಯು ಹಬ್ಬಿ ಹರಡುತ್ತಿದೆ ಎಂದರೆ ಮನೆಯು ಸಮೃದ್ಧಿ, ಆರೋಗ್ಯ, ಸಂತೋಷದಿಂದ ತುಂಬಿರುತ್ತದೆ ಎಂದರ್ಥ. ವಾಸ್ತುವಿನಲ್ಲಿ ತುಳಸಿಗಾಗಿ ಏನೆಲ್ಲ ನಿಯಮಗಳಿವೆ ನೋಡೋಣ. ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.