ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಲೋಕಾರ್ಪಣೆ: 20 ಕಿ.ಮೀ. ದೂರದಿಂದಲೇ ಕಾಣುವ ಮೂರ್ತಿ ರಾಜಸ್ಥಾನದ ರಾಜಸಮಂದ್‌ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಹಾಗೂ ವಿಶ್ವದ ಅತಿ ಎತ್ತರದ್ದು ಎಂದು ಹೇಳಲಾದ 369 ಅಡಿ ಎತ್ತರದ ಶಿವನ ಪ್ರತಿಮೆ ಇಂದು ಲೋಕಾರ್ಪಣೆಗೊಳ್ಳಲಿದೆ. ‘ವಿಶ್ವಾಸ್‌ ಸ್ವರೂಪಂ’ ಹೆಸರಿನ ಈ ಪ್ರತಿಮೆಯನ್ನು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅನಾವರಣಗೊಳಿಸಲಿದ್ದಾರೆ. ಜೈಪುರ: ರಾಜಸ್ಥಾನದ ರಾಜಸಮಂದ್‌ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಹಾಗೂ ವಿಶ್ವದ ಅತಿ ಎತ್ತರದ್ದು ಎಂದು ಹೇಳಲಾದ 369 ಅಡಿ ಎತ್ತರದ ಶಿವನ ಪ್ರತಿಮೆ ಇಂದು ಲೋಕಾರ್ಪಣೆಗೊಳ್ಳಲಿದೆ. ‘ವಿಶ್ವಾಸ್‌ ಸ್ವರೂಪಂ’ ಹೆಸರಿನ ಈ ಪ್ರತಿಮೆಯನ್ನು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅನಾವರಣಗೊಳಿಸಲಿದ್ದಾರೆ. ಇದು ಉದಯಪುರದಿಂದ () 45 ಕಿ.ಮೀ. ದೂರದಲ್ಲಿದ್ದು, ಇದನ್ನು ‘ತತ್‌ ಪದಮ್‌ ಸಂಸ್ಥಾನ’ ( ) ಎಂಬ ಸಂಸ್ಥೆ ನಿರ್ಮಾಣ ಮಾಡಿದೆ. ಪ್ರತಿಮೆಯ ಉದ್ಘಾಟನೆಯ ಬಳಿಕ ಅ.29ರಿಂದ ನ.6ರವರೆಗೆ 9 ದಿನಗಳ ಕಾಲ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳು ( ) ನಡೆಯಲಿವೆ. ಈ ವೇಳೆ ಧಾರ್ಮಿಕ ಬೋಧಕ ಮುರಾರಿ ಬಾಪು ( ) ಅವರು ರಾಮಕಥೆಯನ್ನು ಬೋಧನೆ ಮಾಡಲಿದ್ದಾರೆ ಎಂದು ಸಂಸ್ಥಾನದ ಟ್ರಸ್ಟಿಮತ್ತು ಮೀರಜ್‌ ಗ್ರೂಪ್‌ನ ಅಧ್ಯಕ್ಷ ಮದನ್‌ ಪಾಲಿವಾಲ್‌ ( ) ತಿಳಿಸಿದ್ದಾರೆ. ಈ ಮೂರು ದೇವರನ್ನು ಪೂಜಿಸೋರಿಗೆ ಯಾವ ಶನಿ ಕಾಟವೂ ಕಾಡೋದಿಲ್ಲ! ಪ್ರತಿಮೆ ವಿಶೇಷತೆ: ಧ್ಯಾನಭಂಗಿಯಲ್ಲಿ( ) ಕುಳಿತಿರುವ ಮೂರ್ತಿಯನ್ನು ಬೆಟ್ಟದ ಮೇಲೆ 51 ಬಿಘಾ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ. ಇದು 20 ಕಿ.ಮೀ. ದೂರದಿಂದಲೂ ಗೋಚರಿಸುತ್ತದೆ. ರಾತ್ರಿ ವೇಳೆಯೂ ಮೂರ್ತಿ ಕಾಣುವಂತೆ ದೀಪದ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದು ವಿಶ್ವದ ಅತಿ ದೊಡ್ಡ ಶಿವನ ಪ್ರತಿಮೆಯಾಗಿದ್ದು, ಭಕ್ತರಿಗಾಗಿ ಲಿಫ್ಟ್ /ಮೆಟ್ಟಿಲುಗಳು ಮತ್ತು ಸಭಾಂಗಣಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಮೆಯ ನಿರ್ಮಾಣಕ್ಕೆ 3 ಸಾವಿರ ಟನ್‌ ಕಬ್ಬಿಣ ಮತ್ತು 2.5 ಲಕ್ಷ ಕ್ಯೂಬಿಕ್‌ ಟನ್‌ ಸಿಮೆಂಟ್‌ ಬಳಕೆ ಮಾಡಲಾಗಿದೆ. ಇದರ ನಿರ್ಮಾಣವನ್ನು ಪೂರ್ಣಗೊಳಿಸಲು 10 ವರ್ಷ ಸಮಯ ತೆಗೆದುಕೊಳ್ಳಲಾಗಿದೆ. : ಹೆಜ್ಜೆಹೆಜ್ಜೆಯಲ್ಲೂ ಮೂಡುತ್ತೆ ಶಿವಭಕ್ತಿ: ಹೇಗಿತ್ತು 5 ವರ್ಷದ ತಯಾರಿ? ಮುರ್ಡೇಶ್ವರ ಶಿವನಿಗಿಂತ ದೊಡ್ಡದು: ಕರ್ನಾಟಕದ ಮುರ್ಡೇಶ್ವರದಲ್ಲಿರುವ () ಶಿವನ ಪ್ರತಿಮೆ 123 ಅಡಿ ಎತ್ತರವಾಗಿದೆ. ಈ ಪ್ರತಿಮೆಯನ್ನು ರಾಜಸ್ಥಾನ ಶಿವನ ಪ್ರತಿಮೆ ಮೀರಿಸಿದೆ.