: ಕನ್ಯಾ ರಾಶಿಗೆ ಕಚೇರಿಯಲ್ಲಿ ಬದಲಾವಣೆ, ವೃಶ್ಚಿಕಕ್ಕೆ ಸಂಬಂಧದಲ್ಲಿ ದ್ರೋಹ 17 ಅಕ್ಟೋಬರ್ 2022, ಈ ರಾಶಿಯವರು ಮಕ್ಕಳ ಸಮಸ್ಯೆ ನೀಗಿಸುವತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ಮಕ್ಕಳ ಬೆಳವಣಿಗೆ ಕುಂಠಿತವಾಗುವ ಜೊತೆಗೆ, ಮನೆಯ ವಾತಾವರಣವೂ ಹದಗೆಡುತ್ತದೆ ಎಂಬ ಅರಿವಿರಲಿ.. ಮೇಷ():ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ರಕ್ತದೊತ್ತಡ, ತಲೆನೋವು ಇತ್ಯಾದಿ ಬಾಧೆ ಕಾಡಬಹುದು. ಕಚೇರಿಯಲ್ಲಿ ಯಾರ ಮೇಲೂ ಯಜಮಾನಿಕೆ ಮಾಡಬೇಡಿ. ಯಾರ ಸ್ವಾಭಿಮಾನವನ್ನೂ ಕೆಣಕುವ ಪ್ರಯತ್ನ ಬೇಡ. ಸ್ನೇಹದಿಂದ ಮಾತಾಡಿಯೂ ಕೆಲಸ ಮಾಡಿಸಿಕೊಳ್ಳಬಹುದು. ವೃಷಭ():ಸರ್ಕಾರಿ ಕೆಲಸಗಳು ವಿಳಂಬವಾಗಿ ಕಿರಿಕಿರಿಯಾಗುತ್ತದೆ. ಸಂಸಾರ ಜೀವನ ನೀರಸವಾಗಿದ್ದರೆ ಅದನ್ನು ವಿಶೇಷವಾಗಿಸಲು ನೀವೇ ಪ್ರಯತ್ನ ಹಾಕಿ. ಒಂದು ಪ್ರವಾಸ ಆಯೋಜಿಸಿ. ರೊಮ್ಯಾಂಟಿಕ್ ಮಾತುಗಳನ್ನಾಡಿ. ಹಲ್ಲಿನ ಸಮಸ್ಯೆಗಳು ಕಾಡಬಹುದು. ಮಿಥುನ():ಮಕ್ಕಳು ಯಾವುದೋ ಸಮಸ್ಯೆಯಲ್ಲಿ ಸಿಲುಕಿರಬಹುದು. ಆ ಬಗ್ಗೆ ವಿಚಾರಿಸಿ, ಅವರಿಗೆ ಮುಕ್ತವಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಿ. ಅವರಿಗೆ ಜೊತೆಯಲ್ಲಿ ನೀವಿರುವ ಧೈರ್ಯ ತುಂಬಿ. ಮಾತಿನಲ್ಲಿ ಎಡವಟ್ಟು ಮಾಡಿಕೊಳ್ಳುವ ಸಾಧ್ಯತೆ ಇದ್ದು ಕಡಿಮೆ ಮಾತನಾಡಿ. ಕಟಕ():ಮಕ್ಕಳಿಗೆ ಉತ್ತಮ ಪ್ರತಿಭಾನ್ವೇಷಣೆ ಅವಕಾಶಗಳು ಸಿಗುವುವು. ಅವರನ್ನು ಹುರಿದುಂಬಿಸಿ. ಸ್ನೇಹಿತರು ನಿಮ್ಮ ಗುಟ್ಟನ್ನು ರಟ್ಟು ಮಾಡಿ ನಂಬಿಕೆ ಕಳೆದುಕೊಳ್ಳುವರು. ನಿಮ್ಮ ಬದುಕಿನಲ್ಲಿ ಯಾರು ಕಷ್ಟದಲ್ಲೂ ನಿಲ್ಲುವವರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸಂಬಂಧದ ಕುರಿತ ನಿಮ್ಮ ವ್ಯಾಖ್ಯಾನವೇ ಬದಲಾಗುತ್ತದೆ. : ಬ್ರೇಕಪ್‌ನಿಂದ ಈ ರಾಶಿ ಕಂಗಾಲು.. ಸಿಂಹ():ವ್ಯಾಪಾರದಲ್ಲಿ ಅಲ್ಪ ಲಾಭವಿರಲಿದೆ. ಸ್ವ ಉದ್ಯಮಗಳಲ್ಲಿ ಆದಾಯ ಹೆಚ್ಚಲಿದೆ. ಸಂಗಾತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಅವರ ಕೆಲಸಕ್ಕೆ ಮೆಚ್ಚುಗೆ ನೀಡಿ. ಉತ್ತಮ ಆಹಾರ ಸವಿಯುವ ಅವಕಾಶ ಒದಗಬಹುದು. ಪ್ರಯಾಣದಿಂದ ಆಯಾಸ ಹೆಚ್ಚಲಿದೆಯಾದರೂ ಹೋದ ಕೆಲಸ ಸಿದ್ಧಿ. ಕನ್ಯಾ():ಕಚೇರಿ ಕೆಲಸಗಳಲ್ಲಿ ಮಹತ್ತರ ಬದಲಾವಣೆ ಅಸಮಾಧಾನ ತರಬಹುದು. ನೀವೂ ಕಿರಿಕಿರಿಗೊಂಡು ಇತರರ ಮನಸ್ಸನ್ನೂ ಹಾಳು ಮಾಡುವ ಕೆಲಸ ಮಾಡಬೇಡಿ. ತಣ್ಣಗಿರಲು ಪ್ರಯತ್ನಿಸಿ. ನಿಮಗಾಗದವರೆಲ್ಲ ಕೆಟ್ಟವರೆಂಬ ಮನೋಭಾವ ಬೇಡ. ಹವ್ಯಾಸಗಳಿಗಾಗಿ ಕೊಂಚ ಸಮಯ ಕೊಡಿ. ತುಲಾ():ಕಚೇರಿ ಕಾರ್ಯಾಲಯಗಳ ಕೆಲಸಗಳಿಂದ ತಾಳ್ಮೆಗೆಡುವಂತಾಗಬಹುದು. ದಿನದ ಬಹುತೇಕ ಸಮಯವನ್ನು ಬೇಡದ ಕೆಲಸ ತಿನ್ನಬಹುದು. ನಿರುದ್ಯೋಗಿಗಳಿಗೆ ಸಂದರ್ಶನಕ್ಕೆ ಕರೆ ಬರಬಹುದು. ಚೆನ್ನಾಗಿ ತಯಾರಿ ನಡೆಸಿಕೊಳ್ಳಿ. ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಬಗ್ಗೆ ಯೋಚಿಸಬೇಕು. ವೃಶ್ಚಿಕ():ಸಂಬಂಧದಲ್ಲಿ ದ್ರೋಹ ಕಾಡಬಹುದು. ಕ್ರೀಡಾ ಚಟುವಟಿಕೆಗಳು ಸಂತಸ ತರಲಿವೆ. ಭಾವುಕತೆ ಮತ್ತು ಸೋಮಾರಿತನವು ನಿಮ್ಮನ್ನು ಆಳಲು ಬಿಡಬೇಡಿ. ಅವುಗಳಿಂದಾಗಿ ಸಣ್ಣಪುಟ್ಟ ಸಾಧನೆಗಳು ಕೈ ತಪ್ಪಬಹುದು. ಸ್ವಾರ್ಥವು ಸ್ನೇಹಿತರೊಂದಿಗಿನ ಸಂಬಂಧ ಹಾಳು ಮಾಡಲು ಕಾರಣವಾಗಬಹುದು. ಧನುಸ್ಸು():ಆಲಸ್ಯ ನಿಯಂತ್ರಿಸಿಕೊಂಡರೆ ದಿನವು ಉತ್ತಮವಾಗಿರುತ್ತದೆ. ಪ್ರೀತಿಸಿ ಮದುವೆಯಾಗಲು ಬಯಸುವವರು ಸ್ವಲ್ಪ ಕಾಯಬೇಕು. ಕಾನೂನು ಅಥವಾ ಸರ್ಕಾರಕ್ಕೆ ವಿರುದ್ಧವಾದ ಯಾವುದೇ ಚಟುವಟಿಕೆಯು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಮಕರ():ನಿಮ್ಮ ಸಾಧನೆಗೆ ಕುಟುಂಬದವರ ಮೆಚ್ಚುಗೆ ಕೇಳಿಬರಲಿದೆ. ಯಾವುದೇ ಸನ್ನಿವೇಶಕ್ಕೂ ತಕ್ಷಣ ಪ್ರತಿಕ್ರಿಯಿಸಬೇಡಿ. ಭೌತಿಕ ಸಂತೋಷದ ಸಂಪನ್ಮೂಲಗಳನ್ನು ಸಾಧಿಸುವ ಪ್ರಯತ್ನಗಳು ಯಶಸ್ವಿಯಾಗಬಹುದು. ಭೂಮಿ, ಕಟ್ಟಡ, ವಾಹನ ಇತ್ಯಾದಿಗಳೊಂದಿಗೆ ವ್ಯವಹರಿಸಿ. 27 ವರ್ಷಗಳ ನಂತರ ದೀಪಾವಳಿಯಂದು ಸೂರ್ಯಗ್ರಹಣ… ಪರಿಣಾಮವೇನು? ಕುಂಭ():ವೈಯಕ್ತಿಕ ಬದುಕಿನಲ್ಲಿ ಹಾಗೂ ವೃತ್ತಿ ರಂಗದಲ್ಲಿ ಅನಿರೀಕ್ಷಿತ ತಿರುವುಗಳು ಮಾನಸಿಕ ಗೊಂದಲಕ್ಕೆ ಕಾರಣವಾದಾವು. ಸುಸ್ತಿಗೆ ದೈಹಿಕವಾಗಿ ಪೋಷಕಾಂಶಗಳ ಕೊರತೆ ಕಾರಣವಿರಬಹುದು. ಐರನ್, ವಿಟಮಿನ್ ಕೊರತೆಯನ್ನು ನೀಗಿಸಿಕೊಳ್ಳುವತ್ತ ಗಮನ ಹರಿಸಿ. ಒತ್ತಡ ನಿವಾರಿಸಲು ಸಣ್ಣ ಪ್ರಣಯ ಪ್ರವಾಸಕ್ಕೆ ಹೋಗಬಹುದು. ಮೀನ():ಮನೆಯಲ್ಲಿ ಸಂತೋಷದ ಕೊರತೆ ಎಂಬ ಕೊರಗಿದ್ದರೆ ಸಾಕು ಪ್ರಾಣಿ ತರುವ ಬಗ್ಗೆ ಆಲೋಚಿಸಿ. ಕೌಟುಂಬಿಕವಾಗಿ ಅನಗತ್ಯ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಯಾವುದೇ ರೀತಿಯ ಹೂಡಿಕೆ ಮಾಡಲು ಬಯಸಿದರೆ, ಈ ಸಮಯದಲ್ಲಿ ನೀವು ಅದನ್ನು ಮಾಡಬಹುದು. ಸುಖಾಸುಮ್ಮನೆ ಶಾಪಿಂಗ್ ಮಾಡಬೇಡಿ. ಉಲಿತಾಯದತ್ತ ಗಮನ ಹರಿಸಿ.