2022: ಗಣೇಶ ವಿಸರ್ಜನೆಗೆ ಶುಭ ದಿನ, ಶುಭ ಮುಹೂರ್ತ ಯಾವುದು? ಗಣೇಶ ಬಂದು ಎಲ್ಲ ಮನೆಯಲ್ಲೂ ಪ್ರತಿಷ್ಠಾಪನೆಯಾಗಿದ್ದಾನೆ. ಅವನನ್ನು ವಿಸರ್ಜಿಸಲು ಇಂದೂ ಸೇರಿದಂತೆ 10 ದಿನಗಳ ಕಾಲ ಸಮಯವಿದೆ. ವಿಸರ್ಜನೆಗೆ ಯಾವ ದಿನ ಯಾವ ಮುಹೂರ್ತವಿದೆ ತಿಳಿಯಿರಿ. ಗಣೇಶ ಚತುರ್ಥಿಯ ಹಬ್ಬ ಶುರುವಾಗಿದೆ. ಇದರೊಂದಿಗೆ ಮುಂದಿನ 10 ದಿನಗಳ ಕಾಲ ಅಂದರೆ ಸೆಪ್ಟೆಂಬರ್ 9ರವರೆಗೆ ಗಣೇಶ ಉತ್ಸವ ನಡೆಯಲಿದೆ. ದೇಶ-ವಿದೇಶಗಳಲ್ಲಿ ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿಯ ದಿನದಂದು ಗಣಪತಿಯು ಬಪ್ಪನನ್ನು ಬಹಳ ವಿಜೃಂಭಣೆಯಿಂದ ಮನೆಗೆ ಕರೆತಂದು ಪ್ರತಿಷ್ಠಾಪಿಸುತ್ತೇವೆ. ನಂತರ ಪೂಜಿಸಿ, ಭಕ್ತಿಯಿಂದ ಆರಾಧಿಸಿ, ಪ್ರೀತಿ ತೋರಿ ವಿಸರ್ಜನೆ ಮಾಡುತ್ತೇವೆ. ಕೆಲವರು ಗಣೇಶ ಚತುರ್ಥಿಯ ದಿನದಂದೇ ಗಣೇಶ ವಿಸರ್ಜನೆ ಮಾಡಿದರೆ ಮತ್ತೆ ಕೆಲವರು ಒಂದೂವರೆ ದಿನಗಳಲ್ಲಿ ಅಥವಾ ಮೂರು, ಐದು, ಏಳು ದಿನಗಳಲ್ಲಿ ಗಣಪತಿಯ ಧಾರ್ಮಿಕ ವಿಸರ್ಜನೆಯನ್ನು ಮಾಡುತ್ತಾರೆ. ಇನ್ನೂ ಕೆಲವರು ಅನಂತ ಚತುರ್ದಶಿಯಂದು ಅಂದರೆ 10 ದಿನದ ಬಳಿಕ ವಿಸರ್ಜಿಸುತ್ತಾರೆ. ನೀವು ಸಹ ಮನೆಯಲ್ಲಿ ಗಣೇಶನನ್ನು ತಂದು ಪ್ರತಿಷ್ಠಾಪಿಸಿದ್ದರೆ, ಆತನ ವಿಸರ್ಜನೆಗೆ ಶುಭ ದಿನ, ಶುಭ ಮುಹೂರ್ತ ತಿಳಿಯಿರಿ. ಗಣೇಶನನ್ನು ಕರೆತಂದಷ್ಟೇ ಪ್ರೀತಿಯಿಂದ ಕಳುಹಿಸಿಕೊಡಬೇಕು. ಈ ಸಂದರ್ಭದಲ್ಲಿ ಸಕಲ ಪೂಜಾ ವಿಧಾನ ಪಾಲಿಸಿ, ಗಣೇಶ ವಿಸರ್ಜನೆ ಮಾಡಬೇಕು. ಗಣೇಶ ವಿಸರ್ಜನೆ 2022( 2022) ದಿನಾಂಕಗಳ ಪ್ರಕಾರ ಶುಭ ಸಮಯ ಅನಂತ ಚತುರ್ದಶಿಯು ಸೆಪ್ಟೆಂಬರ್ 9ರಂದು. ಅಂದು ಗಣೇಶನ ವಿಸರ್ಜನೆಗೆ ಮುಹೂರ್ತಗಳು ಇಂತಿವೆ..ಬೆಳಗಿನ ಮುಹೂರ್ತ - 06:03ರಿಂದ 10:44ರವರೆಗೆಮಧ್ಯಾಹ್ನ ಮುಹೂರ್ತ - ಮಧ್ಯಾಹ್ನ 12:18ರಿಂದ 01:52ರವರೆಗೆಸಂಜೆಯ ಮುಹೂರ್ತ - ಸಂಜೆ 5ರಿಂದ 06:34ರವರೆಗೆರಾತ್ರಿ ಮುಹೂರ್ತ ರಾತ್ರಿ-09:26 ನಿಮಿಷದಿಂದ 10:52 ನಿಮಿಷದವರೆಗೆ.ಇದಲ್ಲದೆ ಸೆಪ್ಟೆಂಬರ್ 10ರಂದು ಬೆಳಿಗ್ಗೆ ಅಂದರೆ ಮಧ್ಯರಾತ್ರಿ 12.18ರಿಂದ ತಡರಾತ್ರಿ 04.37ರವರೆಗೆ ಶುಭ ಮುಹೂರ್ತವಿದೆ. 2022: ಬಪ್ಪನನ್ನು ವಿಸರ್ಜಿಸುವ ಸರಿಯಾದ ವಿಧಾನವಿದು.. ಗಣೇಶ ಚತುರ್ಥಿಯಂದು ಗಣೇಶ ವಿಸರ್ಜನೆ - 31 ಆಗಸ್ಟ್ 2022, ಬುಧವಾರಮಧ್ಯಾಹ್ನ ಮುಹೂರ್ತ- ಮಧ್ಯಾಹ್ನ 03:33ರಿಂದ 06:44ರವರೆಗೆರಾತ್ರಿ ಮುಹೂರ್ತ- 08:08ರಿಂದ 12:21ರವರೆಗೆ ಒಂದೂವರೆ ದಿನದ ನಂತರ ಗಣೇಶ ವಿಸರ್ಜನೆ- 1 ಸೆಪ್ಟೆಂಬರ್ 2022ಉಷಾಕಾಲ ಮುಹೂರ್ತ- ಬೆಳಗಿನ ಜಾವ 03.10ರಿಂದ 04.35ರವರೆಗೆಮಧ್ಯಾಹ್ನ ಮುಹೂರ್ತ- ಮಧ್ಯಾಹ್ನ 12.21ರಿಂದ 03.32ರವರೆಗೆಸಂಜೆ ಮುಹೂರ್ತ- ಸಂಜೆ 05:07ರಿಂದ 06:43ರವರೆಗೆರಾತ್ರಿ ಮುಹೂರ್ತ- 06:43 ರಿಂದ 09:32 ಗಣೇಶ ವಿಸರ್ಜನೆ ಮೂರನೇ ದಿನ - ಸೆಪ್ಟೆಂಬರ್ 2ಉಷಾಕಾಲ ಮುಹೂರ್ತ- ಬೆಳಿಗ್ಗೆ 03:10 ರಿಂದ 05:59 ರವರೆಗೆಮಧ್ಯಾಹ್ನ 12:21ರಿಂದ 01:46ರವರೆಗೆರಾತ್ರಿ ಮುಹೂರ್ತ- 09:31 ರಿಂದ 10.56 ರವರೆಗೆ ಸೆಪ್ಟೆಂಬರ್ 3,ಮಧ್ಯರಾತ್ರಿ 12.21ರಿಂದ 04.35 ರವರೆಗೆ. ಕಳಂಕ ಚತುರ್ಥಿ 2022: ಇಂದು ಚಂದ್ರನನ್ನು ನೋಡಿದ್ರೆ ಅಪವಾದ ತಪ್ಪಿಸೋಕೆ ಈ ಕೆಲಸ ಮಾಡಿ ಗಣೇಶ ವಿಸರ್ಜನೆ ಐದನೇ ದಿನ - 4 ಸೆಪ್ಟೆಂಬರ್ 2022, ಭಾನುವಾರಬೆಳಗಿನ ಮುಹೂರ್ತ- ಬೆಳಿಗ್ಗೆ 07:35ರಿಂದ ಮಧ್ಯಾಹ್ನ 12.20 ರವರೆಗೆಮಧ್ಯಾಹ್ನ ಮುಹೂರ್ತ- 01:55 ರಿಂದ 03:30 PMಸಂಜೆ ಮುಹೂರ್ತ- ಸಂಜೆ 06:39 ರಿಂದ ರಾತ್ರಿ 10:55 ರವರೆಗೆ ಸೆಪ್ಟೆಂಬರ್ 5 ರಂದುಮಧ್ಯರಾತ್ರಿ 01:45 ರಿಂದ 03.11 ರವರೆಗೆಉಷಾಕಾಲ ಮುಹೂರ್ತ (ಶುಭ) - ಬೆಳಿಗ್ಗೆ 04:36 ರಿಂದ 06.01 ರವರೆಗೆ. ಗಣೇಶ ವಿಸರ್ಜನೆ ಏಳನೇ ದಿನ - 6 ಸೆಪ್ಟೆಂಬರ್ 2022ಬೆಳಗಿನ ಮುಹೂರ್ತ- ಬೆಳಿಗ್ಗೆ 09:10ರಿಂದ ಮಧ್ಯಾಹ್ನ 01:54ರವರೆಗೆಮಧ್ಯಾಹ್ನ ಮುಹೂರ್ತ - 03.28ರಿಂದ 05.03ರವರೆಗೆಸಂಜೆ ಮುಹೂರ್ತ- 08:03ರಿಂದ 09.28ರವರೆಗೆ ಸೆಪ್ಟೆಂಬರ್ 7ರಂದುರಾತ್ರಿ 10:54 ರವರೆಗೆ ಬೆಳಿಗ್ಗೆ 03.11 ರವರೆಗೆ