: ರಾಶಿಗನುಗುಣವಾಗಿ ಮಾಡಿ ದಾನ ಕೃಷ್ಣನ ಭಕ್ತರ ಸಂಭ್ರಮ ಈಗಿನಿಂದ್ಲೇ ಮನೆ ಮಾಡಿದೆ. ಕೃಷ್ಣನ ಆರಾಧನೆಗೆ ತಯಾರಿ ನಡೆದಿದೆ. ಇದೇ ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ. ಭಕ್ತರು ಆ ದಿನ ದಾನದ ಬಗ್ಗೆ ಕೆಲ ವಿಷ್ಯ ನೆನಪಿಟ್ಟುಕೊಂಡ್ರೆ ಶುಭ ಲಾಭ ಪಡೆಯಬಹುದು. ಶ್ರೀ ಕೃಷ್ಣ ಜನ್ಮಾಷ್ಟಮಿ ಹತ್ತಿರ ಬರ್ತಿದೆ. ಪ್ರತಿ ವರ್ಷ ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ದಿನಾಂಕದಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಈ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಆಗಸ್ಟ್ 18 ರಂದು ಬಂದಿದೆ. ಆಗಸ್ಟ್ 18ರಂದು ಕೃಷ್ಣ ಜನ್ಮಾಷ್ಟಮಿಗೆ ಭಕ್ತರು ತಯಾರಿ ನಡೆಸಿದ್ದಾರೆ. ಆ ದಿನ ಬಾಲ ಗೋಪಾಲನ ಪೂಜೆ ನಡೆಯಲಿದೆ. ಬಾಲ ಕೃಷ್ಣನಿಗೆ ಬೆಣ್ಣೆ, ಲಡ್ಡನ್ನು ನೀಡಿ ಭಕ್ತರು ಭಕ್ತಿಯಿಂದ ಪೂಜೆ ಮಾಡ್ತಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೆಲ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ನಂಬಲಾಗಿದೆ. ಆ ದಿನ ಯಾವ ರಾಶಿಯವರು ಯಾವ ವಸ್ತುವನ್ನು ದಾನ ಮಾಡಿದ್ರೆ ಶುಭ ಫಲ ದೊರೆಯುತ್ತದೆ ಹಾಗೆ ಏನು ಕೆಲಸ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ. ಕೃಷ್ಣ ಜನ್ಮಾಷ್ಟಮಿ ( ) ದಿನ ದಾನ : ಮೇಷ () ರಾಶಿ :ಜ್ಯೋತಿಷ್ಯ () ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ಕೃಷ್ಣ ಜನ್ಮಾಷ್ಟಮಿಯ ದಿನದಂದು ಗೋಧಿಯನ್ನು ದಾನ ಮಾಡುವುದು ಮಂಗಳ. ಇದರೊಂದಿಗೆ ವಿಷ್ಣು ಸಹಸ್ರನಾಮ () ವನ್ನು ಪಠಿಸುವುದರಿಂದಲೂ ಶುಭ ಫಲ ಪ್ರಾಪ್ತಿಯಾಗುತ್ತದೆ. ವೃಷಭ () ರಾಶಿ :ವೃಷಭ ರಾಶಿಯವರು ಜನ್ಮಾಷ್ಟಮಿಯ ದಿನ ಸಕ್ಕರೆಯನ್ನು ದಾನ ಮಾಡುವುದು ಒಳ್ಳೆಯದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೀಗೆ ಮಾಡುವುದರಿಂದ ಶ್ರೀಕೃಷ್ಣನ ವಿಶೇಷ ಕೃಪೆಗೆ ವೃಷಭ ರಾಶಿಯವರು ಪಾತ್ರರಾಗುತ್ತಾರೆ. ಮಿಥುನ () ರಾಶಿ :ಮಿಥುನ ರಾಶಿಯವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೃಷ್ಣ ಜನ್ಮಾಷ್ಟಮಿಯಂದು ಧಾನ್ಯಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಬೇಕು. ಇದು ಅದೃಷ್ಟ ತಂದುಕೊಡಲಿದೆ. ಕರ್ಕಾಟಕ () ರಾಶಿ. :ಕರ್ಕಾಟಕ ರಾಶಿಯವರು ಕೃಷ್ಣ ಜನ್ಮಾಷ್ಟಮಿಯ ದಿನದಂದು ಬಡವರಿಗೆ ಅಕ್ಕಿ ಮತ್ತು ಖೀರ್ ಅನ್ನು ವಿತರಿಸಬೇಕು. ಹೀಗೆ ಮಾಡಿದಲ್ಲಿ ಕರ್ಕಾಟಕ ರಾಶಿಯವರ ಆಸೆಗಳು ಈಡೇರುತ್ತವೆ. ಸಿಂಹ () ರಾಶಿ :ಸಿಂಹ ರಾಶಿಯವರು ಜನ್ಮಾಷ್ಟಮಿಯ ದಿನದಂದು ಬೆಲ್ಲವನ್ನು ದಾನ ಮಾಡಬೇಕು. ಹಾಗೆಯೇ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದು ಬಹಳ ಶುಭಕರ. ಕನ್ಯಾ () ರಾಶಿ :ಕನ್ಯಾ ರಾಶಿ ಜನರು ಜನ್ಮಾಷ್ಟಮಿಯ ದಿನದಂದು ಅಗತ್ಯವಿರುವವರಿಗೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕು. ಇದ್ರಿಂದ ಶುಭ ಫಲ ಪ್ರಾಪ್ತಿಯಾಗಲಿದೆ. ತುಲಾ () ರಾಶಿ :ಈ ರಾಶಿಯ ಜನರು ಜನ್ಮಾಷ್ಟಮಿಯ ದಿನದಂದು ಬಡವರಿಗೆ ತಮ್ಮ ಅಗತ್ಯಕ್ಕೆ ಅನುಗುಣವಾಗಿ ವಸ್ತುಗಳನ್ನು ದಾನ ಮಾಡಬೇಕು. ಬಡವರಿಗೆ ವಸ್ತ್ರದಾನ ಮಾಡಿದ್ರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ. ವೃಶ್ಚಿಕ () ರಾಶಿ :ವೃಶ್ಚಿಕ ರಾಶಿಯವರು ಕೃಷ್ಣ ಜನ್ಮಾಷ್ಟಮಿಯಂದು ಗೋಧಿಯನ್ನು ನಿರ್ಗತಿಕರಿಗೆ ದಾನ ಮಾಡಿದರೆ ಉತ್ತಮ ಎನ್ನಲಾಗಿದೆ. ಗರುಡ ಪುರಾಣ ಕಲಿಸೋ 10 ಅಸಾಧಾರಣ ಪಾಠಗಳಿವು.. ಧನು () ರಾಶಿ :ಧನು ರಾಶಿ ಜನರು ಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ಕೊಳಲು ಮತ್ತು ನವಿಲು ಗರಿಗಳನ್ನು ಅರ್ಪಿಸಬೇಕು. ಬಡ ಮಕ್ಕಳಿಗೆ ಹಣ್ಣುಗಳನ್ನು ದಾನ ಮಾಡಬೇಕು. ಇದ್ರಿಂದ ಶುಭ ಫಲ ದೊರಕುತ್ತದೆ. ಮಕರ () ರಾಶಿ :ಕೃಷ್ಣ ಜನ್ಮಾಷ್ಟಮಿಯ ದಿನದಂದು ಆಹಾರ ಧಾನ್ಯಗಳು ಮತ್ತು ಎಳ್ಳನ್ನು ದಾನ ಮಾಡಬಹುದು. ಇದ್ರ ಜೊತೆ ಭಗವದ್ಗೀತೆ ಓದಬೇಕು ಇಲ್ಲವೆ ಕೇಳಬೇಕು. ಕುಂಭ ()) ರಾಶಿ :ಕುಂಭ ರಾಶಿಯ ಜನರು ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ನವಿಲು ಗರಿಗಳನ್ನು ಅರ್ಪಿಸಬೇಕು. ಅಲ್ಲದೆ ಅಗತ್ಯವಿರುವವರಿಗೆ ಹಣ್ಣುಗಳು ಮತ್ತು ಧಾನ್ಯಗಳನ್ನು ದಾನ ಮಾಡಬೇಕು. ಇದ್ರಿಂದ ಯಶಸ್ಸು ದೊರೆಯುತ್ತದೆ. ಈ ಸಣ್ಣ ಮಂತ್ರದಲ್ಲಿದೆ ಅಗಾಧ ಶಕ್ತಿ, ಹೇಳಿಕೊಳ್ಳುತ್ತಿದ್ದರೆ ಧೈರ್ಯ ಹೆಚ್ಚೋದು ಗ್ಯಾರಂಟಿ ಮೀನ () ರಾಶಿ :ಮೀನ ರಾಶಿಯವರು ಜನ್ಮಾಷ್ಟಮಿಯ ದಿನದಂದು ದೇವಸ್ಥಾನಕ್ಕೆ ಧಾರ್ಮಿಕ ಪುಸ್ತಕಗಳನ್ನು ದಾನ ಮಾಡಬೇಕು. ಧಾರ್ಮಿಕ ಪುಸ್ತಕಗಳನ್ನು ಸಹ ಅಗತ್ಯವಿರುವವರಿಗೆ ದಾನ ಮಾಡಿದ್ರೆ ಒಳ್ಳೆಯದಾಗಲಿದೆ.