ಅವಿವಾಹಿತೆಯರು ಶೀಘ್ರ ವಿವಾಹಕ್ಕಾಗಿ ಶ್ರಾವಣ ಸೋಮವಾರ ಈ ರೀತಿ ಮಾಡಿ.. ನಿಮ್ಮ ದಾಂಪತ್ಯದಲ್ಲಿ ಯಾವುದೇ ರೀತಿಯ ಅಡೆತಡೆಗಳು ಇದ್ದಲ್ಲಿ, ವಿವಾಹಕ್ಕೆ ಅಡ್ಡಿ ಆತಂಕಗಳು ಎದುರಾಗಿತ್ತಿದ್ದಲ್ಲಿ ಶ್ರಾವಣ ಸೋಮವಾರದಂದು ಇಲ್ಲಿ ತಿಳಿಸಲಾದ ಪರಿಹಾರಗಳನ್ನು ನೀವು ಪ್ರಯತ್ನಿಸಬಹುದು. ಶ್ರಾವಣ ಮಾಸ ಆರಂಭವಾಗಿದೆ. ಎಲ್ಲೆಡೆ ಜನರು ಶಿವನ ಭಕ್ತಿಯಲ್ಲಿ ಮುಳುಗಿದ್ದಾರೆ. ಎಲ್ಲೆಡೆ ಪೂಜೆ ಪುನಸ್ಕಾರ ಆರಂಭವಾಗಿದ್ದು,ದೇವರನ್ನು ಒಲಿಸಲು ಜನರು ನಾನಾ ರೀತಿಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಇಡೀ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಜನರು ಈ ತಿಂಗಳಲ್ಲಿ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುತ್ತಾರೆ. ಈ ಮಾಸದಲ್ಲಿ ಜನರು ಮುಖ್ಯವಾಗಿ ಶ್ರಾವಣ ಸೋಮವಾರದಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅವಿವಾಹಿತ ಹುಡುಗಿಯರು ಈ ತಿಂಗಳಲ್ಲಿ ಉಪವಾಸವನ್ನು ಆಚರಿಸಿದರೆ ಅವರಿಗೆ ಉತ್ತಮ ವರ ಸಿಗುತ್ತಾನೆ. ಆದರೆ ಕೆಲವೊಮ್ಮೆ ಕಾರಣಾಂತರಗಳಿಂದ ಮದುವೆಗೆ ಕೆಲವು ಅಡೆತಡೆಗಳು ಬರಲು ಪ್ರಾರಂಭಿಸುತ್ತವೆ, ಇದರಿಂದಾಗಿ ಮದುವೆ ವಿಳಂಬವಾಗುತ್ತದೆ. ಹೆಣ್ಣುಮಕ್ಕಳು ವಿವಾಹಕ್ಕಾಗಿ ಶ್ರಾವಣ ಸೋಮವಾರ ಉಪವಾಸವನ್ನು ಆಚರಿಸುವ ಜೊತೆಗೆ ಕೆಲವು ಸುಲಭವಾದ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಬಹುದು. ಶ್ರಾವಣ ಸೋಮವಾರದಂದು ಈ ಕ್ರಮಗಳನ್ನು ಮಾಡಿ..ಅವಿವಾಹಿತ ಹುಡುಗಿಯರು ಶ್ರಾವಣ ಸೋಮವಾರದಂದು ಮುಂಜಾನೆ ಎದ್ದು ತಮ್ಮ ಮನಸ್ಸಿನಲ್ಲಿ ಪರಿಶುದ್ಧತೆಯ ಭಾವನೆಯನ್ನು ಹೊಂದಬೇಕು. ನಂತರ ಬಕೆಟ್‌ ನೀರಿನಲ್ಲಿ ಸ್ವಲ್ಪ ಗಂಗಾಜಲವನ್ನು ಸೇರಿಸಿಕೊಂಡು ಸ್ನಾನ ಮಾಡಬೇಕು. ನಂತರ ದೇವರ ಕೋಣೆಯಲ್ಲಿ ಕುಳಿತು 'ಓಂ ನಮಃ ಶಿವಾಯ' ಪಠಿಸುತ್ತಾ ನಿಮ್ಮ ಮನೆಯ ದೇವತೆಗಳನ್ನು ಪೂಜಿಸಬೇಕು. ನೀವು ಶ್ರಾವಣ ಸೋಮವಾರದ ಉಪವಾಸವನ್ನು ಆಚರಿಸಲು ಹೋದರೆ, ಉಪವಾಸವನ್ನು ಮುಕ್ತಾಯಗೊಳಿಸುವ ಪೂಜೆಯಲ್ಲಿ ಇವನ್ನು ಬಳಸಿ. ಮೊದಲಿಗೆ ಅಕ್ಷತೆ, ಕುಂಕುಮ, ಹಳದಿ ಚಂದನ, ಹಾಲು, ಮೊಸರು, ತುಪ್ಪ, ಮಧು ಭಸ್ಮ, ಗಂಗಾಜಲ, ಸಕ್ಕರೆಯನ್ನು ಶಿವನಿಗೆ ಅರ್ಪಿಸಿ. ತೆಂಗಿನಕಾಯಿಯನ್ನು ಒಡೆದು ಶಿವನ ಮುಂದೆ ಅರ್ಪಿಸಬೇಕು. ತೆಂಗಿನಕಾಯಿಯನ್ನು ಅರ್ಪಿಸುವಾಗ, ಅದರೊಂದಿಗೆ ಒಂದು ದಾರವನ್ನು ಇರಿಸಿ ಮತ್ತು ದೀಪವನ್ನು ಸಹ ಇರಿಸಿ. ಶ್ರಾವಣ ಸೋಮವಾರ ಅವಿವಾಹಿತೆಯರು ಈ ಕೆಲ್ಸ ಮಾಡ್ಬೇಡಿ ಮದುವೆಯಾಗ ಬಯಸುವವರು ಹೀಗೆ ಮಾಡಿ ಶ್ರಾವಣ ಸೋಮವಾರದ ಪೂಜೆ ವಿಧಿ