: ಉಪ್ಪು ತೆರೆದಿಟ್ಟರೆ ಹೆಚ್ಚುತ್ತೆ ಸಾಲ.. ಅಡುಗೆಮನೆಯಲ್ಲಿ ಈ ಮಿಸ್ಟೇಕ್ಸ್ ಮಾಡ್ಬೇಡಿ ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಯ ವಾಸ್ತುವಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಡುಗೆ ಮನೆ ಸ್ವಚ್ಛವಾಗಿಲ್ಲದಿದ್ದರೆ ಮನೆಯವರು ಆರ್ಥಿಕವಾಗಿ ತೊಂದರೆ ಅನುಭವಿಸುವುದಲ್ಲದೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಡುಗೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಇಡೀ ಕುಟುಂಬಕ್ಕೆ ತೊಂದರೆಯಾಗಬಹುದು, ಕುಟುಂಬದ ಸದಸ್ಯರ ಆರೋಗ್ಯ ಹದಗೆಡುತ್ತದೆ. ಅವರಲ್ಲಿ ಪ್ರೀತಿಯ ಕೊರತೆ ಉಂಟಾಗುತ್ತದೆ. ಅಡುಗೆ ಮಾಡುವವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವೂ ಬೀರುತ್ತದೆ. ಹಾಗಾಗಿ ಯಾವಾಗಲೂ ಅಡುಗೆಮನೆಯ ವಾಸ್ತು ಸರಿಯಾಗಿರಬೇಕು. ಇಂದು ನಾವು ನಿಮಗೆ ವಾಸ್ತುವಿನ ಕೆಲವು ನಿಯಮಗಳ ಬಗ್ಗೆ ಹೇಳಲಿದ್ದೇವೆ- ಅವನ್ನು ಅನುಸರಿಸುವ ಮೂಲಕ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಮತ್ತು ಆರ್ಥಿಕ ಸಮೃದ್ಧಿಯನ್ನು ಕಾಣಬಹುದು. ಅಡುಗೆ ಮನೆಗೆ ವಾಸ್ತು ಸಲಹೆಗಳು