ಕನಸಲ್ಲಿ ಇವೆಲ್ಲ ಕಾಣ್ಸಿದ್ರೆ ಶೀಘ್ರ ಹೆಚ್ಚು ಹಣ ಸಿಗೋದು ಪಕ್ಕಾ ತಜ್ಞರು ಹೇಳುವ ಪ್ರಕಾರ ಕನಸುಗಳು ಸುಮ್ಮನೆ ಬೀಳುವುದಿಲ್ಲ, ಅವು ನಮ್ಮ ಮುಂಬರುವ ಸಮಯದ ಬಗ್ಗೆ ಸುಳಿವು ನೀಡುತ್ತವೆ. ಅಂತೆಯೇ ಈ ರೀತಿಯ ವಸ್ತುಗಳನ್ನು, ಸನ್ನಿವೇಶಗಳನ್ನು ನೀವು ಕನಸಲ್ಲಿ ಕಂಡ್ರೆ ಲಾಟರಿ ಹೊಡ್ಯೋ ಸೂಚನೆಯೇ ಅದು. ತಜ್ಞರು ಹೇಳುವ ಪ್ರಕಾರ ಕನಸುಗಳು ಸುಮ್ಮನೆ ಬೀಳುವುದಿಲ್ಲ, ಅವು ನಮ್ಮ ಮುಂಬರುವ ಸಮಯದ ಬಗ್ಗೆ ಸುಳಿವು ನೀಡುತ್ತವೆ. ಅಂತೆಯೇ ಈ ರೀತಿಯ ವಸ್ತುಗಳನ್ನು, ಸನ್ನಿವೇಶಗಳನ್ನು ನೀವು ಕನಸಲ್ಲಿ ಕಂಡ್ರೆ ಲಾಟರಿ ಹೊಡ್ಯೋ ಸೂಚನೆಯೇ ಅದು. ಮಲಗಿದಾಗ ಕನಸುಗಳು ಬೀಳುವುದು ಸಾಮಾನ್ಯ. ಹೀಗೆ ಕನಸಿನಲ್ಲಿ ಅರ್ಥವಿರುವುದು, ಇಲ್ಲದ್ದು ಸಾವಿರಾರು ಕಾಣಿಸುತ್ತಿರುತ್ತದೆ. ಆದರೆ, ಕೆಲ ಕನಸುಗಳು ಮಾತ್ರ ನೆನಪಿನಲ್ಲುಳಿಯುತ್ತವೆ. ಅವು ಸಾಮಾನ್ಯ ಕನಸುಗಳಿಗಿಂತ ವಿಭಿನ್ನವಾಗಿ ಕಾಣಿಸುತ್ತವೆ. ಮತ್ತೆ ಕೆಲ ಕನಸುಗಳು ಪದೇ ಪದೆ ಬಿದ್ದು ಅಚ್ಚರಿ ಮೂಡಿಸುತ್ತವೆ. ಇನ್ನೂ ಕೆಲ ಕನಸುಗಳು ದಿಗಿಲಾಗಿಸಿ ಮೈ ಬೆವರಿಸಿ ಎಬ್ಬಿಸುತ್ತವೆ.. ಹೀಗೆ ವಿಶೇಷವಾಗಿ ಕಾಣುವಂಥ ಕನಸುಗಳು ಸುಮ್ಮನೆ ಬರುವುದಿಲ್ಲ, ಅವು ನಮ್ಮ ಮುಂಬರುವ ಸಮಯದ ಬಗ್ಗೆ ಸುಳಿವು ನೀಡುತ್ತವೆ ಎನ್ನುತ್ತದೆ ಜ್ಯೋತಿಷ್ಯ. ಕನಸುಗಳು ಒಳ್ಳೆಯ ಅಥವಾ ಕೆಟ್ಟ ಅರ್ಥಗಳನ್ನು ಹೊಂದಿರಬಹುದು. ಇಂದು ನಾವು ಆ ಮಂಗಳಕರ ಕನಸುಗಳ ಬಗ್ಗೆ ಮಾತನಾಡೋಣ. ಯಾವ ರೀತಿಯ ಕನಸು ಬಿದ್ದರೆ ಶೀಘ್ರದಲ್ಲೇ ಹಣ ಬರುತ್ತದೆ ಎಂಬ ಸೂಚನೆ ಎಂದು ತಿಳಿಯೋಣ. ಚಿಕ್ಕ ಮಕ್ಕಳ ನಗು ಮತ್ತು ನೃತ್ಯ( )ನಿಮ್ಮ ಕನಸಿನಲ್ಲಿ ಚಿಕ್ಕ ಮಕ್ಕಳು ನಗುವುದು ಮತ್ತು ನೃತ್ಯ ಮಾಡುವುದನ್ನು ನೀವು ನೋಡಿದರೆ, ಶೀಘ್ರದಲ್ಲೇ ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ ಎಂದರ್ಥ. ಕನಸಿನಲ್ಲಿ ನಿಮ್ಮ ಹಲ್ಲುಗಳು ಒಡೆಯುವುದನ್ನು ನೀವು ನೋಡಿದರೆ, ಹೆದರಬೇಡಿ. ಬದಲಿಗೆ ಖುಷಿ ಪಡಿ. ಈ ಕನಸನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕನಸು ಶೀಘ್ರದಲ್ಲೇ ನೀವು ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುತ್ತೀರಿ ಎಂಬುದನ್ನು ಸೂಚಿಸುತ್ತದೆ. ಹಲ್ಲುಜ್ಜುವುದು( )ಕನಸಿನಲ್ಲಿ ಹಲ್ಲುಜ್ಜುವುದನ್ನು ನೀವು ನೋಡಿದರೆ, ಅದನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಈ ಕನಸು ಪ್ರಯಾಣದಿಂದ ಹಣವನ್ನು ಗಳಿಸುವುದನ್ನು ಸೂಚಿಸುತ್ತದೆ. ನೀವು ಕನಸಿನಲ್ಲಿ ಯಾವುದೇ ರೀತಿಯ ರಕ್ತಪಾತವನ್ನು ನೋಡಿದರೆ, ಅದಕ್ಕೂ ಭಯ ಪಡಬೇಡಿ. ಏಕೆಂದರೆ ಈ ಕನಸನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಕನಸು ಮುಂಬರುವ ಸಮಯದಲ್ಲಿ ನೀವು ಎಲ್ಲಿಂದಲಾದರೂ ಸಾಕಷ್ಟು ಹಣವನ್ನು ಪಡೆಯಲಿದ್ದೀರಿ ಎಂದು ತಿಳಿಸುತ್ತದೆ. ಬಟ್ಟೆ ಹೊಲಿಯುವುದು( )ಕನಸಿನಲ್ಲಿ ಹೊಲಿದ ಅಥವಾ ಹೊಲಿಯುವ ಬಟ್ಟೆಗಳನ್ನು ನೋಡುವುದು ಸಂಪತ್ತಿನ ಹೆಚ್ಚಳದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇನ್ನು ನೀವು ಕೆಲಸ ಹುಡುಕಾಡುತ್ತಿದ್ದಂತೆ ಕಂಡರೆ ಅಥವಾ ಯಾರೊಬ್ಬರಿಂದ ಏನನ್ನಾದರೂ ಕಸಿದುಕೊಳ್ಳುತ್ತಿರುವಂತೆ ಅಥವಾ ಒಂದೇ ಏಟಿನಲ್ಲಿ ಏನನ್ನಾದರೂ ಕಸಿದುಕೊಂಡು ಓಡಿಹೋಗುವಂತೆ ಕಂಡು ಹಾಗೇಕೆ ಮಾಡಿದೆ ಎಂದು ಆಮೇಲೆ ದಿಗಿಲು ಪಡುತ್ತಿದ್ದರೆ, ಚಿಂತೆ ಬೇಡ. ಇದು ಕೂಡ ಒಳ್ಳೆಯ ಸಂಕೇತವಾಗಿದೆ. ಇದರರ್ಥ ನೀವು ಯಾವುದಾದರೂ ಒಳ್ಳೆಯ ಮೂಲದಿಂದ ಹಣವನ್ನು ಪಡೆಯಲಿದ್ದೀರಿ. ದೇವಸ್ಥಾನ()ನಿಮ್ಮ ಕನಸಿನಲ್ಲಿ, ನೀವು ಎತ್ತರಕ್ಕೆ ಏರುತ್ತಿರುವುದನ್ನು ಅಥವಾ ಕನಸಿನಲ್ಲಿ ದೇವಸ್ಥಾನವನ್ನು ನೋಡಿದರೆ, ಅದ್ಭುತ ಪ್ರಗತಿಯನ್ನು ಪಡೆಯಲಿದ್ದೀರಿ ಎಂದರ್ಥ. ಕನಸಿನಲ್ಲಿ ಬಿಳಿ ಹಾವಿನ ಕಡಿತವನ್ನು ಆರ್ಥಿಕ ವಿಷಯಗಳಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.