ವೃಷಭ ರಾಶಿಯವರನ್ನು ಪ್ರೀತಿಸ್ತಿದೀರಾ? ಅವರ ಬಗ್ಗೆ ತಿಳ್ಕೋಬೇಕಾ? ವೃಷಭ ರಾಶಿಯ ಹುಡುಗಿ ಅಥವಾ ಹುಡುಗನನ್ನು ಡೇಟ್ ಮಾಡ್ತಿದ್ದೀರಾ? ಅವರ ಬಗ್ಗೆ ಮತ್ತಷ್ಟು ತಿಳಿಯೋ ಕುತೂಹಲ ಇದ್ಯಾ? ರಾಶಿ ಆಧಾರದಲ್ಲಿ ಅವರು ಹೇಗಿರುತ್ತಾರೆ ಅಂತ ನಾವು ತಿಳಿಸ್ತೀವಿ.. ಆಹಾರ, ವೈನ್, ಸಂಗೀತ ಎಲ್ಲದರಲ್ಲೂ ಅತ್ಯುತ್ತಮವಾದದನ್ನು ಆಯ್ಕೆ ಮಾಡಿದ ಯಾರೊಂದಿಗಾದರೂ ನೀವು ಎಂದಾದರೂ ಡೇಟ್ ಮಾಡಿದ್ದೀರಾ? ನಿಮ್ಮ ಡೇಟಿಂಗ್ ಪಾರ್ಟ್‌ನರ್ ಹೊರಗಿನಿಂದ ಕಠಿಣ ಎನಿಸಿದರೂ ಒಳಗೆ ಮೃದು ಹೃದಯದವರು ಎನಿಸುತ್ತದೆಯೇ? ವಾದವನ್ನು ರಬ್ಬರ್ ಹಾಗೆ ಎಳೆದರೂ ಪ್ರೀತಿ ಹೆಚ್ಚೇ ಎನಿಸುತ್ತೆಯೇ, ಹಾಗಿದ್ದರೆ ಅವರು ವೃಷಭ ರಾಶಿ( )ಯವರಿರಬೇಕು.. ಪ್ರೀತಿಯ ವಿಷಯಕ್ಕೆ ಬಂದಾಗ ವೃಷಭ ರಾಶಿಯವರ ಸ್ವಭಾವ ಹೇಗೆ ಅಂತ ಹೇಳ್ತೀವಿ ಕೇಳಿ.. 1. ಹಟಮಾರಿಅವರು ಹೊಸತನ್ನು ಟ್ರೈ ಮಾಡಲು ಕೇಳುವುದು ಕಷ್ಟ. ಆದರೆ, ತುಂಬಾ ಪ್ರೀತಿಪಾತ್ರರು ಬಲವಂತಪಡಿಸಿದರೆ, ಅವರಿಗಿಷ್ಟದ ಆಹಾರ, ಪಾನೀಯ ಇತ್ಯಾದಿಯ ಲಂಚದ ಆಮಿಷ ಒಡ್ಡಿ ಹೊಸತನ್ನು ಟ್ರೈ ಮಾಡಿಸಿದರೆ ಖಂಡಿತಾ ಅವರು ಕ್ರಮೇಣ ಅವೆಲ್ಲದಕ್ಕೂ ಒಗ್ಗಿಕೊಳ್ಳುತ್ತಾರೆ. ಎಷ್ಟೇ ಹಟಮಾರಿಗಳಾದರೂ ಪ್ರೀತಿಯಿಂದ ಬಗ್ಗಿಸಬಹುದು. ಅವರಿಗೆ ಹೊಂದಿಕೊಳ್ಳಲು ಕೊಂಚ ಹೆಚ್ಚು ಸಮಯ ಕೊಡಬೇಕು. 2. ಕುಟುಂಬಜೀವಿಗಳು( )ವೃಷಭ ರಾಶಿಯವರು ಸ್ಥಿರವಾದ ಸಂಬಂಧ ಮತ್ತು ಪಾಲುದಾರರೊಂದಿಗೆ ಸಂತೋಷದ ಮನೆಯ ಜೀವನವನ್ನು ಗೌರವಿಸುವ ಕುಟುಂಬ ಜೀವಿಗಳು. ಅವರು ತಮ್ಮ ಕುಟುಂಬಗಳನ್ನು ಪ್ರೀತಿಸುತ್ತಾರೆ ಮತ್ತು ಅವರನ್ನು ರಕ್ಷಿಸಲು ಎಲ್ಲವನ್ನೂ ಮಾಡುತ್ತಾರೆ. ಕುಟುಂಬದ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಾಣುವವರಿವರು. 3. ನಿಷ್ಠಾವಂತ ಪಾಲುದಾರರುವೃಷಭ ರಾಶಿಯವರು ಸದಾ ಜೀವಮಾನದ ಪ್ರೀತಿಯ ಹುಡುಕಾಟದಲ್ಲಿರುತ್ತಾರೆ. ಅವರು ಸ್ಥಿರ, ನಿಷ್ಠಾವಂತ ಮತ್ತು ಕ್ಲಾಸಿಯಾಗಿರುವ ಪಾಲುದಾರರನ್ನು ಬಯಸುತ್ತಾರೆ. ಹಾಗೊಬ್ಬರು ಸಿಕ್ಕಿದ ಮೇಲೆ ಅವರಿಗೆ ಸಂಪೂರ್ಣ ನಿಷ್ಠರಾಗಿರುತ್ತಾರೆ. ಒಮ್ಮೆ ಪ್ರೀತಿಯ ಜೀವನದೊಳಗೆ ಕಾಲಿಟ್ಟರೆ ಹೊರ ಹೋಗುವವರಲ್ಲ. 4. ಅವಲಂಬಿತರು()ವೃಷಭ ರಾಶಿಯವರು ಒಮ್ಮೆ ನಿಮ್ಮನ್ನು ನಂಬಿದರೆ ನಂತರ ಅವಲಂಬಿತರಾಗುತ್ತಾರೆ. ನಿಮಗೆ ಪೂರ್ತಿ ಅಂಟಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ನೀವು ಅವರನ್ನು ಕಣ್ಣು ಮುಚ್ಚಿ ಅವಲಂಬಿಸಬಹುದು ಕೂಡಾ. ನಿಮ್ಮ ಅವಲಂಬನೆ ಅವರಿಗೆ ಆತ್ಮವಿಶ್ವಾಸ ನೀಡುತ್ತದೆ. : ಮಳೆಗಾಗಿ ಗೋರಿಯಲ್ಲಿರೋ ಶವದ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು! 5. ಕಣ್ಣು ಮುಚ್ಚಿ ಮದುವೆಯಾಗಬಹುದು..ಅವರು ನಿಷ್ಠಾವಂತರು ಮತ್ತು ಶ್ರದ್ಧೆಯುಳ್ಳವರು. ವೃಷಭದ ಪುರುಷರು ನಿರ್ದಿಷ್ಟವಾಗಿ ಸಾಂಪ್ರದಾಯಿಕ ಜೀವನಶೈಲಿ ಬಗ್ಗೆ ನಂಬಿಕೆ ಇಟ್ಟವರು. ಮದುವೆ, ಮಕ್ಕಳು ಇತ್ಯಾದಿಗೆ ಒಗ್ಗುವವರು. ಹೀಗಾಗಿ, ಅವರನ್ನು ಮದುವೆಯಾಗುವ ನಿರ್ಧಾರಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳುವ ಅಗತ್ಯವಿಲ್ಲ. 6. ಭಾವೋದ್ರಿಕ್ತರು()ವೃಷಭ ರಾಶಿಯನ್ನು ಪ್ರೀತಿಯ ದೇವತೆಯಾದ ಶುಕ್ರ ಆಳುತ್ತಾನೆ. ಆದ್ದರಿಂದ ನಿಸ್ಸಂಶಯವಾಗಿ ಅವರು ಪ್ರೀತಿಯ ವಿಷಯದಲ್ಲಿ ಒಂದು ಹೆಜ್ಜೆ ಮುಂದೆಯೇ. ರೊಮ್ಯಾಂಟಿಕ್ ಆಗಿರುತ್ತಾರೆ ಮತ್ತು ಭಾವನಾತ್ಮಕ ಉಡುಗೊರೆಯೊಂದಿಗೆ ನಿಮ್ಮನ್ನು ಆಶ್ಚರ್ಯಗೊಳಿಸುತ್ತಾರೆ. 7. ಅಪಕ್ವ ಹಾಸ್ಯಪ್ರಜ್ಞೆ( )ಒಂದು ಸೂಕ್ಷ್ಮವಾದ ಅಥವಾ ವಿಡಂಬನಾತ್ಮಕ ಹಾಸ್ಯವು ನಿಜವಾಗಿಯೂ ವೃಷಭ ರಾಶಿಯವರ ವಿಷಯವಲ್ಲ, ಅವರ ಹಾಸ್ಯಪ್ರಜ್ಞೆ ಅಪಕ್ವವಾಗಿರುತ್ತದೆ. ಆದರೂ ಅವರ ತಮಾಷೆ ಪೆದ್ದು ಮುದ್ದೆನಿಸಬಹುದು.. 8. ವೈಯಕ್ತಿಕ ಸಂಬಂಧಗಳನ್ನು ಗೌರವಿಸುತ್ತಾರೆವೃಷಭ ರಾಶಿಯವರಿಗೆ ಸಂಬಂಧಗಳೆಂದರೆ ಎಂದಿಗೂ ಸಡಿಲವಲ್ಲ, ಅದರೊಂದಿಗೆ ಆಡುವವರೂ ಅಲ್ಲ. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಾಮರಸ್ಯವನ್ನು ಗೌರವಿಸುತ್ತಾರೆ ಮತ್ತು ತಮ್ಮ ಪಾಲುದಾರರನ್ನು ಸಂತೋಷವಾಗಿರಿಸಲು ತಮ್ಮ ಅತ್ಯುತ್ತಮ ಕೆಲಸ ಮಾಡುತ್ತಾರೆ. ಸಂಬಂಧಗಳನ್ನು ಜೀವನದಲ್ಲಿ ಬಹಳ ಮೇಲಿಟ್ಟು ನೋಡುವ ಸ್ವಭಾವ ಇವರದು. : ಕನ್ಯಾಗೆ ಸಾಲ ವಾಪಸ್, ವೃಶ್ಚಿಕಕ್ಕೆ ಭಾವೋದ್ವೇಗದಿಂದ ಸಮಸ್ಯೆ ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.