ಮನೆಯ ವಾಸ್ತು ದೋಷಕ್ಕೆ ಹೆಚ್ಚು ಖರ್ಚಿಲ್ಲದ ಪರಿಹಾರಗಳು.. ಎಷ್ಟೇ ಕೋಟಿ ಖರ್ಚು ಮಾಡಿ ಮನೆ ನಿರ್ಮಿಸಿದರೂ ಅಲ್ಲಿ ವಾಸ್ತು ದೋಷವಿದ್ದರೆ ನೆಮ್ಮದಿ ಸಾಧ್ಯವಿಲ್ಲ. ಹೀಗಾಗಿ, ಸಾಮಾನ್ಯವಾಗಿ ನೀವು ವಾಸ್ತು ದೋಷ ತಪ್ಪಿಸಲು, ದೋಷದಿಂದ ಮುಕ್ತರಾಗಲು ಮಾಡಬಹುದಾದ ಪರಿಹಾರಗಳಿಲ್ಲಿವೆ.. ಮನೆಯಲ್ಲಿ ವಾಸ್ತು ದೋಷ( )ವಿದ್ದರೆ ಅದು ಅಲ್ಲಿನ ಸದಸ್ಯರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ದೋಷವಿದ್ದಾಗ ಕುಟುಂಬದಲ್ಲಿ ಹೆಚ್ಚಿನ ಒತ್ತಡ ಮತ್ತು ಆರ್ಥಿಕ ಸಮಸ್ಯೆ( )ಗಳಿರುತ್ತವೆ. ಇದರ ಪರಿಣಾಮವಾಗಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಕೆಲಸಕ್ಕೂ ಅಡ್ಡಿ ಆತಂಕಗಳು ಹೆಚ್ಚಾಗುತ್ತವೆ. ವಾಸ್ತುವಿನ ನ್ಯೂನತೆಗಳು ನಮ್ಮ ಗಮ್ಯಸ್ಥಾನವನ್ನು ಪಡೆಯಲು ನಮಗೆ ಎಂದಿಗೂ ಸಹಾಯ ಮಾಡುವುದಿಲ್ಲ; ಬದಲಾಗಿ, ಅವು ರಸ್ತೆ ತಡೆಯನ್ನು ಸೃಷ್ಟಿಸುತ್ತವೆ. ಮನೆಯೇನೋ ನಿರ್ಮಿಸಿಯಾಗಿದೆ. ಇನ್ನು ಸಂಪೂರ್ಣ ಕೆಡವಿ ಕಟ್ಟುವುದು ಆಗದ ಮಾತು. ಆದರೆ, ವಾಸ್ತು ದೋಷಕ್ಕಂತೂ ಪರಿಹಾರ ಮಾಡಿಕೊಳ್ಳಲೇ ಬೇಕಲ್ಲಾ.. ಅದಕ್ಕಾಗಿ ಈ ರೀತಿಯ ಪರಿಹಾರಗಳನ್ನು() ಕೈಗೊಳ್ಳಿ.