ಜುಲೈ ತಿಂಗಳ ಹಬ್ಬ ಹರಿದಿನ, ವ್ರತ ಕತೆಗಳ ಪಟ್ಟಿ ಇಲ್ಲಿದೆ.. ಜುಲೈ ಆಷಾಢ ಮಾಸವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಮದುವೆ, ಮುಂಜಿಯಂಥ ಶುಭ ಕಾರ್ಯಗಳು ನಡೆಯುವುದಿಲ್ಲ. ಆದರೂ ಧಾರ್ಮಿಕ ದೃಷ್ಟಿಕೋನದಿಂದ ಈ ತಿಂಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳ ಹಬ್ಬ, ಹರಿದಿನ, ವ್ರತ ಉಪವಾಸಗಳ ಪಟ್ಟಿ ಇಲ್ಲಿದೆ. ಜುಲೈ() ಪ್ರಾರಂಭವಾಗಲಿದೆ. ಧಾರ್ಮಿಕ ದೃಷ್ಟಿಕೋನದಿಂದ ಈ ತಿಂಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಅನೇಕ ದೊಡ್ಡ ಹಬ್ಬಗಳು ನಡೆಯುತ್ತವೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಜುಲೈ ತಿಂಗಳು ಆಷಾಢ-ಸಾವನ್ ಆಗಿದೆ. ಧಾರ್ಮಿಕ ದೃಷ್ಟಿಕೋನದಿಂದ ಈ ಮಾಸವು ಶಿವನನ್ನು ಮೆಚ್ಚಿಸಲು ತುಂಬಾ ಒಳ್ಳೆಯದು. ಈ ಮಾಸದಲ್ಲಿ ಶಿವನನ್ನು ಪೂಜಿಸುವುದರಿಂದ ಆತನ ಕೃಪೆ ಸದಾ ಉಳಿಯುತ್ತದೆ. ಈ ತಿಂಗಳ ಹಬ್ಬಹರಿದಿನಗಳ ಸರಣಿ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯೊಂದಿಗೆ ಪ್ರಾರಂಭವಾಗುತ್ತದೆ. ಈ ಮಾಸದಲ್ಲಿ ಚಾತುರ್ಮಾಸವೂ ಆರಂಭವಾಗಲಿದ್ದು, ನಾಲ್ಕು ತಿಂಗಳ ಕಾಲ ವಿಷ್ಣುವು ನಿದ್ರಿಸುತ್ತಾನೆ. ಗುರು ಪೂರ್ಣಿಮೆಯ ಹಬ್ಬವೂ ಇದೇ ತಿಂಗಳಲ್ಲಿ. ಜುಲೈ ತಿಂಗಳಲ್ಲಿ ಬರುವ ಮುಖ್ಯ ವ್ರತ, ಉಪವಾಸಗಳು ಮತ್ತು ಹಬ್ಬಗಳ ಪಟ್ಟಿಯನ್ನು ನೋಡೋಣ. ಜುಲೈ 1, ಪುರಿ ಜಗನ್ನಾಥ ರಥ ಯಾತ್ರೆ( ):ವಿಶ್ವವಿಖ್ಯಾತ ಪುರಿ ಜಗನ್ನಾಥನ ರಥಯಾತ್ರೆಯು ಜುಲೈನ ಮೊದಲ ದಿನ ಅಂದರೆ ಜುಲೈ 1 ಶುಕ್ರವಾರದಂದು ಪ್ರಾರಂಭವಾಗುತ್ತದೆ. ಪುರಿ ರಥ ಯಾತ್ರೆಯಲ್ಲಿ, ಭಗವಾನ್ ಜಗನ್ನಾಥನು ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರಾ ಅವರೊಂದಿಗೆ ಶೋಭಾ ಯಾತ್ರೆ ಹೊರಡುತ್ತಾನೆ. ಜುಲೈ 3, ವರದ ಚತುರ್ಥಿ( ):ವರದ ಚತುರ್ಥಿ ಉಪವಾಸವನ್ನು 3ನೇ ಜುಲೈ 2022ರಂದು ಆಚರಿಸಲಾಗುತ್ತದೆ. ವರದ ಚತುರ್ಥಿಯು ಗಣೇಶನಿಗೆ ಸಮರ್ಪಿತವಾದ ಹಬ್ಬವಾಗಿದೆ. ಜಗನ್ನಾಥ ರಥಯಾತ್ರೆ 2022: ಬೆರಗು ಮೂಡಿಸೋ 10 ವಿಶೇಷಗಳು.. ಜುಲೈ 10, ದೇವಶಯನಿ ಏಕಾದಶಿ ಮತ್ತು ಬಕ್ರೀದ್( ):ಜುಲೈ 10ರಂದು ದೇವಶಯನಿ ಏಕಾದಶಿ. ದೇವಶಯನಿ ಏಕಾದಶಿಯಂದು ಭಗವಾನ್ ವಿಷ್ಣುವು ಕ್ಷೀರಸಾಗರದಲ್ಲಿ ತಾಯಿ ಲಕ್ಷ್ಮಿಯೊಂದಿಗೆ ನಾಲ್ಕು ತಿಂಗಳ ಕಾಲ ಮಲಗುತ್ತಾನೆ. ಆಷಾಢ ಮಾಸದಲ್ಲಿ ಬರುವುದರಿಂದ ಈ ಏಕಾದಶಿಯನ್ನು ಆಷಾಢ ಏಕಾದಶಿ ಎಂದೂ ಕರೆಯುತ್ತಾರೆ. ಇದಲ್ಲದೆ, ಇದನ್ನು ಹರಿಶಯನಿ ಏಕಾದಶಿ ಮತ್ತು ಪದ್ಮನಾಭ ಏಕಾದಶಿ ಎಂದೂ ಕರೆಯುತ್ತಾರೆ. ಜುಲೈ 11, ಪ್ರದೋಷ ವ್ರತ ಮತ್ತು ಜಯ ಪಾರ್ವತಿ ವ್ರತ( ):ಜುಲೈ 11ರಂದು ಪ್ರದೋಷ ವ್ರತದ ಜೊತೆಗೆ ಜಯ ಪಾರ್ವತಿ ವ್ರತವೂ ಆರಂಭವಾಗಲಿದೆ. ಜಯ ಪಾರ್ವತಿ ವ್ರತವು ಸತತ ಐದು ದಿನಗಳವರೆಗೆ ಇರುತ್ತದೆ. ಇದರಲ್ಲಿ ಪಾರ್ವತಿ ದೇವಿಯನ್ನು ಜಯ ಅವತಾರದ ರೂಪದಲ್ಲಿ ಪೂಜಿಸಲಾಗುತ್ತದೆ. ಈ ವ್ರತದಲ್ಲಿ ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಪಾರ್ವತಿಯನ್ನು ಪೂಜಿಸುತ್ತಾರೆ ಮತ್ತು ಆಶೀರ್ವಾದವನ್ನು ಪಡೆಯುತ್ತಾರೆ. 14 ಜುಲೈ, ಕಣ್ವರ್ ಯಾತ್ರೆ( ):ಜುಲೈ ತಿಂಗಳ ಆರಂಭದಿಂದಲೇ ಕಣ್ವಾರಿಯರು ಎಲ್ಲಾ ಪವಿತ್ರ ನದಿಗಳಿಂದ ಜಲವನ್ನು ತೆಗೆದುಕೊಂಡು 14ನೇ ತಾರೀಖಿನಂದಪ ಪ್ರಸಿದ್ಧ ಶಿವ ದೇವಾಲಯಗಳನ್ನು ತಲುಪುವ ಮೂಲಕ ಶಿವನ ಜಲಾಭಿಷೇಕವನ್ನು ಮಾಡುತ್ತಾರೆ. ಜುಲೈ 24, ಕಾಮಿಕಾ ಏಕಾದಶಿ( ):ಆಷಾಢ ಮಾಸದ ಏಕಾದಶಿಯನ್ನು ಕಾಮಿಕಾ ಏಕಾದಶಿ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಏಕಾದಶಿ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಏಕಾದಶಿ ವ್ರತದ ಸಮಯದಲ್ಲಿ, ದಿನವಿಡೀ ಉಪವಾಸವಿದ್ದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. : ಇವರು - ಸನ್ನಿವೇಶವನ್ನು ನಾಜೂಕಾಗಿ ನಿರ್ವಹಿಸುತ್ತಾರೆ! ಜುಲೈ 28, ಹರಿಯಾಲಿ ಅಮಾವಾಸ್ಯೆ( ):ಈ ವರ್ಷ ಜುಲೈ 28 ಹರಿಯಾಲಿ ಅಮವಾಸ್ಯೆ. ಶ್ರಾವಣ ಮಾಸದಲ್ಲಿ ಬರುವ ಅಮವಾಸ್ಯೆಯನ್ನು ಹರಿಯಾಲಿ ಅಮವಾಸ್ಯೆ 2022 ಎಂದು ಕರೆಯಲಾಗುತ್ತದೆ. ಜುಲೈ 31, ಹರಿಯಾಲಿ ತೀಜ್( ):ವಿವಾಹಿತ ಮಹಿಳೆಯರು ಆಚರಿಸುವ ಉಪವಾಸವನ್ನು ಜುಲೈ 31 ರಂದು ಆಚರಿಸಲಾಗುತ್ತದೆ. ಇದರಲ್ಲಿ ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಈ ಹಬ್ಬವನ್ನು ಶಿವ ಮತ್ತು ತಾಯಿ ಪಾರ್ವತಿ (ಹರಿಯಾಲಿ ತೀಜ್ 2022) ಮತ್ತೆ ಒಂದಾಗುವ ಸಂತೋಷದಲ್ಲಿ ಆಚರಿಸಲಾಗುತ್ತದೆ.