ಜಗನ್ನಾಥ ರಥಯಾತ್ರೆ 2022: ಬೆರಗು ಮೂಡಿಸೋ 10 ವಿಶೇಷಗಳು.. 145ನೇ ಜಗನ್ನಾಥ ಯಾತ್ರೆಗೆ ಪುರಿ ಸಜ್ಜಾಗಿದೆ. ಜುಲೈ 1ರಂದು ಈ ವಿಶ್ವಪ್ರಸಿದ್ಧ ಜಗನ್ನಾಥ ಯಾತ್ರೆ ಶುರುವಾಗಲಿದ್ದು, ಈ ಕುರಿತು ನೀವು ತಿಳಿದಿರಬೇಕಾದ ವಿಷಯಗಳು ಇಲ್ಲಿವೆ. ಆಶಾಢ ಮಾಸ ಶುಕ್ಲ ಪಕ್ಷದ ಎರಡನೇ ದಿನ ಎಂದರೆ ಒರಿಸ್ಸಾ ರಾಜ್ಯಕ್ಕೆ ಇನ್ನಿಲ್ಲದ ಸಡಗರ. ಇಲ್ಲಿನ ಜನಪ್ರಿಯ ಪುರಿ ಜಗನ್ನಾಥ( )ನ ವಿಶ್ವಪ್ರಸಿದ್ಧ ರಥಯಾತ್ರೆ ಆರಂಭವಾಗುವ ದಿನವದು. ಜಗನ್ನಾಥನು ಸಕಲ ವೈಭೋಗಗಳೊಂದಿಗೆ ತನಗಾಗಿ ವಿಶೇಷವಾಗಿ ತಯಾರಾದ ಮರದ ರಥದಲ್ಲಿ ಕುಳಿತು ತನ್ನ ಚಿಕ್ಕಮ್ಮ ಗುಂಡಿಚಾ() ಮನೆಗೆ ತೆರಳುತ್ತಾನೆ ಎಂಬ ನಂಬಿಕೆ ಇದೆ. ಈ ಸಂದರ್ಭದಲ್ಲಿ ಜಗನ್ನಾಥನ ಅಣ್ಣ ಬಲಭದ್ರ ಮತ್ತು ತಂಗಿ ಸುಭದ್ರಾ ಕೂಡಾ ಒಂದೊಂದು ರಥದಲ್ಲಿ ಕುಳಿತು ಯಾತ್ರೆ ತೆರಳುತ್ತಾರೆ. ಈ ಮೂರೂ ರಥಗಳನ್ನು ನೆರೆದ ಲಕ್ಷಾಂತರ ಜನ ಎಳೆಯುತ್ತಾ ಡಮರು, ನಗಾರಿ, ಶಂಖಗಳ ನಾದ ಮೊಳಗಿಸುತ್ತಾ ಸಂಭ್ರಮದ ಘೋಷ ಕೂಗುತ್ತಾರೆ. ಈ ಬಾರಿ ಜುಲೈ 1, ಶುಕ್ರವಾರ ರಥಯಾತ್ರೆ( ) ಆರಂಭವಾಗುತ್ತದೆ. ರಥ()ದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು( ) ಇಲ್ಲಿವೆ: