ಅಷಾಢ ಅಮಾವಾಸ್ಯೆ 2022 ಯಾವಾಗ? ಏನು ಮಾಡಿದರೆ ಪುಣ್ಯ ಫಲ? ಹಿಂದೂ ಕ್ಯಾಲೆಂಡರ್ ಪ್ರಕಾರ, ಆಷಾಢ ಮಾಸದ ಅಮವಾಸ್ಯೆಯನ್ನು ಧಾರ್ಮಿಕ ಗ್ರಂಥಗಳಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಪುಣ್ಯ ನದಿ, ಸರೋವರಗಳಲ್ಲಿ ಸ್ನಾನ ಮಾಡಿ ಪೂರ್ವಜರಿಗೆ ದಾನ, ನೈವೇದ್ಯ ಸಲ್ಲಿಸಬೇಕೆಂಬ ನಿಯಮವಿದೆ. ಆಷಾಢ() ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ()ಗೆ ಎಲ್ಲ ಅಮಾವಾಸ್ಯೆಯಂತೆ ಅದರದೇ ಆದ ವಿಶೇಷತೆ, ಪ್ರಾಮುಖ್ಯತೆ ಇದೆ. ಅಮಾವಾಸ್ಯೆ ತಿಥಿ ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ದಿನ. ಈ ದಿನ ಪಿತೃ ದೋಷವನ್ನು ತೊಡೆದುಹಾಕಲು ಕೆಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಆಷಾಢ ಅಮಾವಾಸ್ಯೆ ಅಥವಾ ಹಲಹರಿಣಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಈ ಅಮಾವಾಸ್ಯೆಯು ಜೂನ್ 28ರ ಮಂಗಳವಾರ ಬರಲಿದೆ. ಸಮಯ()ಅಮಾವಾಸ್ಯೆಯು ಜೂನ್ 28 ರಂದು ಬೆಳಿಗ್ಗೆ 05:52 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜೂನ್ 29ರ ಬೆಳಗ್ಗೆ 08:22ಕ್ಕೆ ಕೊನೆಗೊಳ್ಳುತ್ತದೆ. ಇದರ ನಂತರದ ದಿನದಿಂದಲೇ ಪ್ರತಿಪಾದ ತಿಥಿಯಂದು ಅಷಾಢ ಗುಪ್ತ್ ನವರಾತ್ರಿ ಆರಂಭವಾಗುತ್ತದೆ. ರಾಶಿ ಆಧಾರದಲ್ಲಿ ದಾಂಪತ್ಯದಲ್ಲಿ ಕಡಿಮೆಯಿಂದ ಹೆಚ್ಚು ಮೋಸ ಮಾಡುವವರು ಇವರೇ ನೋಡಿ.. ಈ ಕೆಲಸಗಳನ್ನು ಮಾಡಿ()