ಈ ರಾಶಿ ಹುಡುಗಿಯರ ಮೇಲೆ ತಾಯಿ ಲಕ್ಷ್ಮಿ ಕೃಪೆ ಸದಾ ಇರುತ್ತೆ ! ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಯು ತನ್ನದೇ ಆದ ವಿಶೇಷ ಸ್ವಭಾವ ಹೊಂದಿದೆ. ವ್ಯಕ್ತಿಯ ಯಶಸ್ಸು ಮತ್ತು ವೈಫಲ್ಯವನ್ನು ರಾಶಿಯಿಂದ ಸಹ ಕಂಡು ಹಿಡಿಯಬಹುದು. ಇಲ್ಲಿ ಕೆಲವು ರಾಶಿಯ ಬಗ್ಗೆ ಹೇಳಲಿದ್ದೇವೆ, ಈ ರಾಶಿಯ ಹುಡುಗಿಯರು ತುಂಬಾನೆ ಅದೃಷ್ಟವಂತರೂ ಎನ್ನಲಾಗಿದೆ. ಈ ರಾಶಿಯ ಹುಡುಗಿಯರು ಹಣದ ವಿಷಯದಲ್ಲಿ ಕೂಡ ಅದೃಷ್ಟವಂತರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಯು ತನ್ನದೇ ಆದ ವಿಶೇಷ ಸ್ವಭಾವ ಹೊಂದಿದೆ. ವ್ಯಕ್ತಿಯ ಯಶಸ್ಸು ಮತ್ತು ವೈಫಲ್ಯವನ್ನು ರಾಶಿಯಿಂದ ಸಹ ಕಂಡು ಹಿಡಿಯಬಹುದು. ಇಲ್ಲಿ ಕೆಲವು ರಾಶಿಯ ಬಗ್ಗೆ ಹೇಳಲಿದ್ದೇವೆ, ಈ ರಾಶಿಯ ಹುಡುಗಿಯರು ತುಂಬಾನೆ ಅದೃಷ್ಟವಂತರೂ ಎನ್ನಲಾಗಿದೆ. ಈ ರಾಶಿಯ ಹುಡುಗಿಯರು ಹಣದ ವಿಷಯದಲ್ಲಿ ಕೂಡ ಅದೃಷ್ಟವಂತರು. ವೃಷಭ ()- ವೃಷಭ ರಾಶಿಯಹುಡುಗೀರು ಎಲ್ಲವನ್ನೂ ಬಹಳ ಉತ್ಸಾಹದಿಂದ ಮಾಡುತ್ತಾರೆ. ಇವರ ಕೆಲಸದ ವೇಗ ಇತರರಿಗಿಂತ ವೇಗವಾಗಿರುತ್ತೆ. ಅದಕ್ಕಾಗಿಯೇ ಇವರು ತಮ್ಮ ಗುರಿಗಳನ್ನು ಸಮಯಕ್ಕೆ ಸರಿಯಾಗಿ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಇವರು ಪ್ಲಾನಿಂಗ್‌ನಲ್ಲಿ ಎಕ್ಸ್ಪರ್ಟ್. ಇವರು ಮನೆ, ಕಚೇರಿ, ಎರಡರ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಾರೆ. ಅವರ ಸ್ವಭಾವ ಚಂಚಲವಾಗಿದ್ದರು, ತಾಯಿಲಕ್ಷ್ಮಿಯ ( ) ಆಶೀರ್ವಾದ ಯಾವಾಗಲೂ ಇವರ ಮೇಲಿರುತ್ತೆ. ಇವರು ತಮ್ಮ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯದಿಂದ ತಮ್ಮ ಕನಸುಗಳನ್ನು ನನಸಾಗಿಸ್ತಾರೆ. ಇವರು ಜೀವನದಲ್ಲಿ ಎಲ್ಲಾ ರೀತಿಯ ಸುಖ, ಸೌಕರ್ಯ ಪಡೆಯುತ್ತಾರೆ. ಈ ರಾಶಿಯ ಹುಡುಗಿಯರುಕೋಪ() ಮತ್ತು ಅಹಂಕಾರ ಬಿಡಬೇಕು. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತೆ. ಯಾವ ಹುಡುಗಿಯ ಹೆಸರು ಇ, ಊ, ಎ, ಓ, ವಾ, ವಿ, ವು, ವೆ,ವೊ ಇಂದ ಶುರುವಾಗುತ್ತದೋ ಅವರ ರಾಶಿ ವೃಷಭ. ಸಿಂಹ -() ಸಿಂಹ ರಾಶಿಯ ಹುಡುಗಿಯರು ಎಲ್ಲದರಲ್ಲೂ ಬ್ಯಾಲೆನ್ಸ್ ಮಾಡಿಕೊಂಡು ನಡೆಯುತ್ತಾರೆ. ಇವರು ಪ್ರತಿಯೊಂದು ಸಂದರ್ಭದಲ್ಲೂ ಒಂದೇ ರೀತಿ ಇರುತ್ತಾರೆ. ಇವರು ತಮ್ಮ ಗುರಿಗಳ ಬಗ್ಗೆ ಹೆಚ್ಚು ಗಂಭೀರವಾಗಿರ್ತಾರೆ. ಇವರು ಫೇಲ್ಯೂರ್ ಗೆ ಹೆದರೋದಿಲ್ಲ. ಯಾವುದನ್ನೂ ಸಹ ಇವರು ಸುಲಭವಾಗಿ ಬಿಟ್ಟುಕೊಡೊದಿಲ್ಲ. ಉದ್ಯೋಗ-ವ್ಯವಹಾರದಲ್ಲಿ ವಿಶೇಷಯಶಸ್ಸನ್ನು() ಸಾಧಿಸ್ತಾರೆ. ಮನೆಯ ಜವಾಬ್ದಾರಿಗೆ ಅನುಗುಣವಾಗಿ ಬದುಕ್ತಾರೆ. ತಮ್ಮ ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಬಹಳಷ್ಟು ಸಾಧಿಸ್ತಾರೆ. ಇವರಿಗೆ ತಮ್ಮ ಸಹೋದ್ಯೋಗಿಗಳಿಂದ ಹೇಗೆ ಕೆಲಸ ಮಾಡಿಕೊಳ್ಳಬೇಕು ಅನ್ನೋದು ತಿಳಿದಿದೆ. ಅದಕ್ಕಾಗಿಯೇ ಈ ರಾಶಿಯ ಹುಡುಗಿಯರು ಉತ್ತಮ ಗ್ರೂಪ್ ಲೀಡರ್ ಮತ್ತು ಬಾಸ್ ಗಳು ಆಗುತ್ತಾರೆ. ಸಿಂಹ ರಾಶಿಯ ಹುಡುಗಿಯರು ಇತರರನ್ನು ತುಂಬಾ ಬೇಗ ನಂಬೋದಿಲ್ಲ. ಆದರೆ ಈ ರಾಶಿಯವರು ಕೆಲಸ ಪೂರ್ಣಗೊಳಿಸುವ ಮೊದಲು ಪ್ಲಾನ್ ಶೇರ್( ) ಮಾಡುವುದನ್ನು ಸಹ ತಪ್ಪಿಸಬೇಕು.ಸಿಂಹ ರಾಶಿಗೆ ಸೇರಿದ ಹುಡುಗಿಯರ ಹೆಸರಿನ ಮೊದಲ ಅಕ್ಷರಗಳು ಮಾ, ಮಿ, ಮೊ, ತಾ, ಟಿ, ತೋ, ಟೆ ಯಿಂದ ಆರಂಭವಾಗುತ್ತದೆ. ಧನುಸ್ಸು ()- ಧನು ರಾಶಿಯ ಹುಡುಗಿಯರು ಪ್ರತಿಯೊಂದು ಕೆಲಸವನ್ನು ತುಂಬಾ ಗಂಭೀರವಾಗಿ ಮಾಡ್ತಾರೆ. ಇವರು ತಪ್ಪು ಮಾಡದಿರಲು ಪ್ರಯತ್ನಿಸ್ತಾರೆ. ಮುಂಬರುವ ಅಪಾಯವನ್ನು ಗ್ರಹಿಸುವ ಸಾಮರ್ಥ್ಯ ಇವರು ಸಹ ಹೊಂದಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕಾರ್ಯತಂತ್ರವನ್ನು ಬಹಳ ಬೇಗನೆ ಬದಲಾಯಿಸ್ತಾರೆ. ಈ ರಾಶಿಯವರು ತಮ್ಮ ಮನೆ ಮತ್ತು ಹೊರಗೆ ಯಶಸ್ಸನ್ನು ಸಾಧಿಸ್ತಾರೆ .ಪ್ಲಾನಿಂಗ್() ಮಾಡಿ ಕೆಲಸ ಮಾಡಲು ಇಷ್ಟಪಡ್ತಾರೆ. ಇವರು ಎಂದಿಗೂ ತಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿ ಕೊಳ್ಳೋದಿಲ್ಲ. ಇವರ ಸ್ವಭಾವದಲ್ಲಿ ನಮ್ರತೆ ಇದೆ, ಇದರಿಂದಾಗಿ ಶತ್ರುಗಳು ಸಹ ಇವರ ಬೆನ್ನಿನ ಹಿಂದೆ ಇವರನ್ನು ಮೆಚ್ಚುತ್ತಾರೆ. ಯೇ, ಯೋ, ಭಾ, ಭಿ, ಭು, ಧಾ, ಫಾ, ಧಾ, ಭೇ ಎಂಬ ಅಕ್ಷರಗಳಿಂದ ಪ್ರಾರಂಭವಾಗುವ ಹುಡುಗಿಯರು ಧನುಸ್ಸು ರಾಶಿಯವರಾಗಿತ್ತಾರೆ!