ಬ್ರಿಜ್ಜಾ, ವೆನ್ಯೂ ಪ್ರತಿಸ್ಪರ್ಧಿ, ಬರುತ್ತಿದೆ ಹೊಂಡಾ ಕಾರು! ಸಬ್ ಕಾಂಪಾಕ್ಟ್ ಕಾರುಗಳಿಗೆ ಇತರೆಲ್ಲಾ ಕಾರುಗಳಿಗಿಂತ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಪ್ರತಿ ಕಾರು ಕಂಪನಿಗಳು ಸೆಗ್ಮೆಂಟ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ ಕಾರು ಹೆಚ್ಚಿನ ಯಶಸ್ಸು ಸಾಧಿಸಿದೆ. ಇದೀಗ ಈ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹೊಂಡಾ ಹೊಸ ಕಾರು ಬಿಡುಗಡೆ ಮಾಡುತ್ತಿದೆ. ನವದೆಹಲಿ(ಫೆ.24):ಹೊಂಡಾ ಮೋಟಾರ್ಸ್ ಭಾರತದಲ್ಲಿ ಸಬ್ ಕಾಂಪಾಕ್ಟ್ ಕಾರು ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ. ಅತ್ಯಂತ ಆಕರ್ಷಕ ಲುಕ್ ಹಾಗೂ ಬಲಿಷ್ಠ ಎಂಜಿನ್ ಮೂಲಕ ಹೊಂಡಾ ಕಾರು ಬಿಡುಗಡೆಯಾಗಲಿದೆ. ಇದನ್ನೂ ಓದಿ:BS6 ಹೊಂಡಾ ಅಮೇಜ್ ಬಿಡುಗಡೆ; ಬೆಲೆ 6.10 ಲಕ್ಷ ರೂ! ನೂತನ ಕಾರಿನ ವಿನ್ಯಾಸ ಹೊಂಡಾ - ಕಾರನ್ನು ಹೋಲುತ್ತಿದೆ. ಹೆಡ್‌ಲ್ಯಾಂಪ್ಸ್, ಟೈಲ್‌ಲ್ಯಾಂಪ್ಸ್ ಸೇರಿದಂತೆ ಹಲವು ಹೊಸತನಗಳು - ಕಾರಿಗಿಂತ ಭಿನ್ನವಾಗಿದೆ. ನೂತನ ಕಾರು ಭಾರತದಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ. ಇದನ್ನೂ ಓದಿ:ಆಕರ್ಷಕ ಲುಕ್ ಹಾಗೂ ವಿನ್ಯಾಸ, ಹೊಸ ಅವತಾರದಲ್ಲಿ ಹೊಂಡಾ ಜಾಝ್! 2020ರ ಮಧ್ಯಭಾಗದಲ್ಲಿ ಹೊಂಡಾ ಅನಾವರಣಗೊಳ್ಳಲಿದೆ. 2021ರ ಆರಂಭದಲ್ಲೇ ಕಾರು ಬಿಡುಗಡೆಯಾಗಲಿದೆ. ನೂತನ ಕಾರಿನ ಬೆಲೆ ಮಾಹಿತಿ ಬಹಿರಂಗವಾಗಿಲ್ಲ. ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗುವುದು ಎಂದು ಹೊಂಡಾ ಹೇಳಿದೆ. ಇದನ್ನೂ ಓದಿ:30 ನಿಮಿಷ ಚಾರ್ಜ್, 201 ಕಿ.ಮಿ ಮೈಲೇಜ್- ಬರುತ್ತಿದೆ ಹೊಂಡಾ ಜಾಝ್ ಎಲೆಕ್ಟ್ರಿಕ್ ಕಾರು! ಹೊಂಡಾ ನೂನತ ಕಾರು, ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ, ಮಹೀಂದ್ರ XUV300, ಫೋರ್ಡಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಸೇರಿದಂತೆ ಸಬ್‌ಕಾಂಪಾಕ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.