ಮಾರುತಿ ಸುಜುಕಿ ಕ್ರಾಸ್ ಪೆಟ್ರೋಲ್ ಕಾರು ಅನಾವರಣ; ಡೀಸೆಲ್‌ಗಿಂತ ಕಡಿಮೆ ಬೆಲೆ! ಮಾರುತಿ ಸುಜುಕಿ ಕ್ರಾಸ್ ಡೀಸೆಲ್ ಕಾರು ಭಾರತದಲ್ಲಿ ಜನಪ್ರಿಯವಾಗಿದೆ. ಇದೀಗ ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆಯಾಗಿದೆ. ನೂತನ ಕಾರು ಡೀಸೆಲ್ ಕಾರಿಗಿಂತ ಕಡಿಮೆ ಬೆಲೆ ಹೊಂದಿದ್ದು, ಹೆಚ್ಚುವರಿ ಫೀಚರ್ಸ್ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿದೆ. ಗ್ರೇಟರ್ ನೋಯ್ಡಾ(ಫೆ.07):ಭಾರತದ ಅತೀ ದೊಡ್ಡ ಆಟೋ ಎಕ್ಸ್ಪೋ 2020ಯಲ್ಲಿ ಮಾರುತಿ ಸುಜುಕಿ ಕ್ರಾಸ್ ಪೆಟ್ರೋಲ್ ಕಾರು ಅನಾವರಣ ಮಾಡಿದೆ. ಕ್ರಾಸ್‌ನಲ್ಲಿ 2 ವೇರಿಯೆಂಟ್ ಲಭ್ಯವಿದೆ. ಪೆಟ್ರೋಲ್ ಹಾಗೂ ಮೈಲ್ಡ್ ಹೈಬ್ರಿಡ್ ಕಾರು ಅನಾವರಣ ಮಾಡಲಾಗಿದೆ. ನೂತನ ಕಾರು BS6 ಎಮಿಶನ್ ಎಂಜಿನ್ ಹೊಂದಿದೆ. ಇದನ್ನೂ ಓದಿ:ಅತ್ಯುತ್ತಮ ವಿನ್ಯಾಸದ ಮಾರುತಿ ಸುಜುಕಿ ಫ್ಯೂಚರೋ ಇ ಕಾರು ಅನಾವರಣ! ನೂತನ ಕ್ರಾಸ್‌ ಕಾರು 1.5-ಲೀಟರ್, 4 ಸಿಲಿಂಡರ್, ಪೆಟ್ರೋಲ್ ಮೋಟಾರ್ ಹೊಂದಿದ್ದು, 104 ಪವರ್ ಹಾಗೂ 138 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ಕ್ರಾಸ್‌ ಡೀಸೆಲ್ ಕಾರಿನ ಬೆಲೆ 8.8 ಲಕ್ಷ ರೂಪಾಯಿಂದ ಆರಂಭವಾಗುತ್ತಿದೆ. ಇದನ್ನೂ ಓದಿ:ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರು ಅನಾವರಣ; 32 ಕಿ.ಮೀ ಮೈಲೇಜ್ ದಾಖಲೆ! ನೂತನ ಕ್ರಾಸ್‌ ಪೆಟ್ರೋಲ್ ಕಾರಿನ ಬೆಲೆ ಡೀಸೆಲ್ ಕಾರಿಗಿಂತ 50,000 ರೂಪಾಯಿಂದ 1 ಲಕ್ಷ ರೂಪಾಯಿ ವರೆಗೆ ಕಡಿಮೆಯಾಗಲಿದೆ. ಅಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿರುವ ಕ್ರಾಸ್‌ ಪೆಟ್ರೋಲ್ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.