ಮಾರುತಿ ಪ್ರೆಸ್ಸೋ ಪ್ರತಿಸ್ಪರ್ಧಿ, ಬರುತ್ತಿದೆ ಹ್ಯುಂಡೈ ಸಣ್ಣ ಕಾರು! ಮಾರುತಿ ಸುಜುಕಿ ಪ್ರೆಸ್ಸೋ ಸಣ್ಣ ಮಾಡೆಲ್ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಅಲ್ಟೋ ಎಂಜಿನ್ ಹಾಗೂ ಸಾಮರ್ಥ್ಯದ ಪ್ರೆಸ್ಸೋ ಕಾರು ಸಂಚಲನ ಮೂಡಿಸುತ್ತಿದ್ದಂತೆ, ಇದೀಗ ಹ್ಯುಂಡೈ ಸಣ್ಣ ಕಾರು ಬಿಡುಗಡೆ ಮಾಡುತ್ತಿದೆ. ಈ ಕಾರಿನ ವಿಶೇಷತೆ ಇಲ್ಲಿದೆ. ನವದೆಹಲಿ(ಜ.26): ಭಾರತ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿರು 2ನೇ ಅತೀ ದೊಡ್ಡ ಅಟೋಮೊಬೈಲ್ ಕಂಪನಿ ಹ್ಯುಂಡೈ ಇದೀಗ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಮೊದಲ ಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಗೆ ಹೆಜ್ಜೆ ಹೆಜ್ಜೆಗೂ ಪೈಪೋಟಿ ನೀಡುತ್ತಿರುವ ಹ್ಯುಂಡೈ ಇದೀಗ ಮತ್ತೊಂದು ಹೊಡೆತ ನೀಡಲು ಸಜ್ಜಾಗಿದೆ. ಮಾರುತಿ ಪ್ರೆಸ್ಸೋ ಕಾರಿಗೆ ಪ್ರತಿಸ್ಪರ್ಧಿಯಾಗಿ ಸ್ಯಾಂಟ್ರೋ ಸಣ್ಣ ಕಾರು ಬಿಡುಗಡೆಯಾಗಲಿದೆ. ಇದನ್ನೂ ಓದಿ:ಮಾರುತಿ ಸುಜುಕಿ ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ! 2020 ಆಟೋ ಎಕ್ಸ್ಪೋ ಮೋಟಾರು ಶೋದಲ್ಲಿ ಹ್ಯುಂಡೈ ಕಾನ್ಸೆಪ್ಟ್ ಕಾರನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ಮಾರುತಿ ಎಸ್ ಪ್ರೆಸ್ಸೋ, ಮಹೀಂದ್ರ KUV100, ಬಿಡುಗಡೆಯಾಗಲಿರುವ ಟಾಟಾ ಹಾರ್ನಬಿಲ್ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಇದನ್ನೂ ಓದಿ:10 ದಿನದಲ್ಲಿ 10 ಸಾವಿರ ಬುಕಿಂಗ್; ದಾಖಲೆ ಬರೆದ ಮಾರುತಿ ಪ್ರೆಸ್ಸೋ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾನ್ಸೆಪ್ಟ್ ಕಾರು 1.0 ಲೀಟರ್ ಪೆಟ್ರೋಲ್ ಟರ್ಬೋಚಾರ್ಜ್ಡ್ ಎಂಜಿನ್ ಬಳಕೆ ಮಾಡಲಿದೆ. ಸ್ಯಾಂಟ್ರೋ ಕಾರು 1.1 ಲೀಟರ್ ಪೆಟ್ರೋಲ್ ಎಂಜಿನ್, 67bhp ಪವರ್ 100Nm ಟಾರ್ಕ್ ಉತ್ಪಾದಿಸಲಿದೆ. 5 ಮಾನ್ಯುಯೆಲ್ ಟ್ಸಾನ್ಸ್‌ಮಿಶನ್ ಹಾಗೂ ಟ್ರಾನ್ಸ್‌ಮಿಶನ್ ಹೊಂದಿದೆ. ನೂತನ ಹ್ಯುಂಡೈಕಾರಿಗೆ 4 ರಿಂದ 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.