ಟ್ರಾಫಿಕ್ ಪೊಲೀಸರಿಗೆ ಹೊಸ ಮಾಡಿಫಿಕೇಶನ್ ಸುಜುಕಿ ಜಿಕ್ಸರ್ ! ರಸ್ತೆ ಸುರಕ್ಷೆತೆ ಕುರಿತು ಸುಜುಕಿ ಮೋಟಾರ್ ಇಂಡಿಯಾ ಹಲವು ಅಭಿಯಾನ ಮಾಡಿದೆ. ಇದೀಗ ಸೂರತ್ ಟ್ರಾಫಿಕ್ ಪೊಲೀಸರಿಗೆ 5 ಸುಜುಕಿ ಜಿಕ್ಸರ್ ಬೈಕ್ ನೀಡೋ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. ಸೂರತ್(ಜ.10):ಪೊಲೀಸ್ ವ್ಯವಸ್ಥೆ ಬಲಪಡಿಸಲು ಆಯಾ ರಾಜ್ಯಗಳು ಹೆಚ್ಚಿನ ಶ್ರಮ ವಹಿಸುತ್ತಿದೆ. ಪೊಲೀಸರಿಗೆ ಹೊಸ ಹಾಗೂ ಆಧುನಿಕ ವಾಹನಗಳನ್ನು ನೀಡುತ್ತಿದೆ. ಇದೀಗ ಸುಜುಕಿ ಇಂಡಿಯಾ ಸೂರತ್ ಪೊಲೀಸರಿಗೆ ಜಿಕ್ಸರ್ ಬೈಕ್ ನೀಡೋ ಮೂಲಕ ಪೊಲೀಸರಿಗೆ ನೆರವಾಗಿದೆ. ಇದನ್ನೂ ಓದಿ:10 ಸಾವಿರ ರೂಗೆ ಬುಕ್ ಮಾಡಿ ಜಾವಾ ಪೆರಾಕ್ ಬೈಕ್! ಸೂರತ್ ಪೊಲೀಸ್ ಕಮೀಷನ್ ಆರ್ ಬಿ ಬ್ರಹ್ಮಭಟ್ ಅವರಿಗೆ 5 ಸುಜುಕಿ ಜಿಕ್ಸರ್ 250 ಮಾಡಿಫಿಕೇಶ್ ಬೈಕ್ ಕೀ ಹಸ್ತಾಂತರಿಸಲಾಗಿದೆ. ಗುರುಗಾಂವ್ ಪೊಲೀಸರ ಬಳಿಕ ಇದೀಗ ಸೂರತ್ ಪೂಲೀಸರು ಕೂಡ ಸುಜುಕಿ ಜಿಕ್ಸರ್ 250 ಬೈಕ್ ಬಳಕೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ:ಹೊಸ ವರ್ಷಕ್ಕೆ 60 ವರ್ಷ ಹಳೇ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಮತ್ತೆ ಬಿಡುಗಡೆ! ಸೂರತ್ ಪೊಲೀಸರಿಗೆ ನೀಡಲಾಗಿರುವ ಸುಜುಕಿ ಜಿಕ್ಸರ್ 250 ಬೈಕ್ 49cc, ಸಿಂಗಲ್ ಕಾಲ್ ಆಯಿಲ್ ಕೂಲಿಂಗ್ ಸಿಸ್ಟಮ್, 4 ಸ್ಟ್ರೋಕ್, ಫ್ಯುಯೆಲ್ ಇಂಜೆಕ್ಷನ್ ಎಂಜಿನ್ ಹೊಂದಿದೆ. 26.5ps ಪವರ್ ಹಾಗೂ 22.6Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹಾಗೂ ಡ್ಯುಯೆಲ್ ಚಾನೆಲ್ ಹೊಂದಿದೆ. ಪೊಲೀಸರಿಗೆ ನೀಡಲಾಗಿರುವ ಬೈಕ್‌ನಲ್ಲಿ ಕೆಲ ಫೀಚರ್ಸ್ ಸೇರಿಸಲಾಗಿದೆ. ವಾಕಿ ಟಾಕ್, ಪೊಲೀಸ್ ಸೈರನ್, ಲೈಟ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ.