ಮಾರುತಿ ಸುಜುಕಿ ಅಲ್ಟೋ + ಕಾರು ಬಿಡುಗಡೆ! ಮಾರುತಿ ಸುಜುಕಿ ಟಾಪ್ ಮಾಡೆಲ್ ಅಲ್ಟೋ ಕಾರು ಬಿಡುಗಡೆ ಮಾಡಿದೆ. ಹೆಚ್ಚುವರಿ ಫೀಚರ್ಸ್ ಒಳಗೊಂಡಿರುವ ಅಲ್ಟೋ + ಆಕರ್ಷಕ ಬೆಲೆ ಹೊಂದಿದೆ. ಮಾರುಕಟ್ಟೆಯಲ್ಲಿರುವ ಅಲ್ಟೋ ಕಾರಿಗೂ ಸದ್ಯ ಬಿಡುಗಡೆಯಾಗಿರುವ ಟಾಪ್ ಮಾಡೆಲ್ ಕಾರಿಗೂ ಇರುವ ವ್ಯತ್ಯಾಸವೇನು? ಇಲ್ಲಿದೆ ವಿವರ. ನವದೆಹಲಿ(ಡಿ.23):ಮಾರುತಿ ಸುಜುಕಿ ಜನಪ್ರೀಯ ಕಾರು ಅಲ್ಟೋ ಟಾಪ್ ಮಾಡೆಲ್ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಅಲ್ಟೋ + ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಬೆಲೆ 3.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ). ಸದ್ಯ ಮಾರುಕಟ್ಟೆಯಲ್ಲಿರುವ ಅಲ್ಟೋ ಹಾಗೂ ನೂತನ ಅಲ್ಟೋ + ಕಾರಿನಲ್ಲಿ ಕೆಲ ಬದಲಾವಣೆಗಳಿವೆ. ಇದನ್ನೂ ಓದಿ:2019ರಲ್ಲಿ ಮಿಂಚಿದ ಕಾರು ಲಿಸ್ಟ್; ಅಗ್ರಸ್ಥಾನದಲ್ಲಿ ವೆನ್ಯು, ಸೆಲ್ಟೋಸ್! ಅಲ್ಟೋ ಕಾರಿನಲ್ಲಿರುವ ಎಲ್ಲಾ ಫೀಚರ್ಸ್ ಅಲ್ಟೋ + ಕಾರಿನಲ್ಲಿದೆ. ಜೊತೆಗೆ 7 ಇಂಚಿನ ಸ್ಮಾರ್ಟ್ ಪ್ಲೇ ಸ್ಟುಡಿಯೋ ಟಚ್ ಸ್ಕ್ರೀನ್ ಸಿಸ್ಟಮ್ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಆ್ಯಪಲ್ ಕಾರ್ ಪ್ಲೇ ಹಾಗೂ ಆ್ಯಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡಲಿದೆ. ಮಾರುತಿ ಅಲ್ಟೋ ವೇರಿಯೆಂಟ್ ಹಾಗೂ ಬೆಲೆಮಾರುತಿ ಅಲ್ಟೋ - 2.89 ಲಕ್ಷ ರೂಮಾರುತಿ ಅಲ್ಟೋ () - 2.92 ಲಕ್ಷ ರೂಮಾರುತಿ ಅಲ್ಟೋ - 3.45 ಲಕ್ಷ ರೂಮಾರುತಿ ಅಲ್ಟೋ () - 3.50 ಲಕ್ಷ ರೂಮಾರುತಿ ಅಲ್ಟೋ - 3.67 ಲಕ್ಷ ರೂಮಾರುತಿ ಅಲ್ಟೋ + - 3.80 ಲಕ್ಷ ರೂಮಾರುತಿ ಅಲ್ಟೋ - 4.05 ಲಕ್ಷ ರೂಮಾರುತಿ ಅಲ್ಟೋ () - 4.09 ಲಕ್ಷ ರೂ ಇದನ್ನೂ ಓದಿ:ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ! ನೂತನ ಅಲ್ಟೋ bs6 ಎಂಜಿನ್ಅಪ್‌ಗ್ರೇಡ್ ಮಾಡಲಾಗಿದೆ. 3-ಸಿಲಿಂಡರ್, 796 ಪೆಟ್ರೋಲ್ ಎಂಜಿನ್ ಹೊಂದಿದ್ದು, 48 ಪವರ್ ಹಾಗೂ 69 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ವೇರಿಯೆಂಟ್ ಕಾರು 41 ಪವರ್ ಹಾಗೂ 60 ಪೀಕ್ ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ.