ಹ್ಯುಂಡೈ ವೆನ್ಯು ಕಾರಿನ ಸುರಕ್ಷತಾ ಫಲಿತಾಂಶ ಬಹಿರಂಗ! ಭಾರತದ ಟಾಪ್ ಸೆಲ್ಲಿಂಗ್ ಸಬ್ ಕಾಪಾಕ್ಟ್ ಕಾರುಗಳ ಪೈಕಿ ಹ್ಯುಂಡೈ ವೆನ್ಯೂ ಹೊಸ ದಿಕ್ಕಿನತ್ತ ಹೆಜ್ಜೆ ಇಟ್ಟಿದೆ. ಮಾರಾಟದಲ್ಲಿ ದಾಖಲೆ ಬರೆದಿರುವ ವೆನ್ಯೂ ಕಾರಿನ ಸುರಕ್ಷತಾ ಫಲಿತಾಂಶ ಹೊರಬಿದ್ದಿದೆ. ನವದೆಹಲಿ(ಡಿ.20):ಸಬ್ ಕಾಂಪಾಕ್ಟ್ ಕಾರುಗಳ ಪೈಕಿ ಹ್ಯುಂಡೈ ವೆನ್ಯು ಕಾರು ಹಲವು ದಾಖಲೆ ಬರೆದಿದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರ XUV300 ಸೇರಿದಂತೆ ಕಾರುಗಳಿಗೆ ಪೈಪೋಟಿ ನೀಡುತ್ತಿರುವ ವೆನ್ಯು ಇದೀಗ ಸುರಕ್ಷಾ ಪರೀಕ್ಷೆಯಲ್ಲಿ ಪಾಸಾಗಿದೆ. ನಡೆಸಿದ ಕ್ರಾಶ್ ಟೆಸ್ಟ್‌ನಲ್ಲಿ ಹ್ಯುಂಡೈ ವೆನ್ಯೂ 4 ಸ್ಟಾರ್ ರೇಟಿಂಗ್ ಪಡೆದಿದೆ. ಇದನ್ನೂ ಓದಿ:2019ರಲ್ಲಿ ಮಿಂಚಿದ ಕಾರು ಲಿಸ್ಟ್; ಅಗ್ರಸ್ಥಾನದಲ್ಲಿ ವೆನ್ಯು, ಸೆಲ್ಟೋಸ್! 2019ರ ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾದ ಹ್ಯುಂಡೈ ವೆನ್ಯು ಕಾರು, ಸದ್ಯ ಗರಿಷ್ಠ ಮಾರಾಟ ಕಾಣುತ್ತಿರುವ ಕಾರುಗಳಲ್ಲೊಂದು. ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಮಾರುತಿ ಬ್ರೆಜಾ ಕಾರನ್ನೇ ಹಿಂದಿಕ್ಕಿದ ಹೆಗ್ಗಳಿಕೆ ವೆನ್ಯುಗಿದೆ. ಈ ಕಾರು ಸುರಕ್ಷತಾ ಪರೀಕ್ಷೆಯಲ್ಲಿ 4 ಸ್ಟಾರ್ ಪಡೆಯೋ ಮೂಲಕ ಸುರಕ್ಷತೆಯ ಕಾರು ಹೆಗ್ಗಳಿಕೆಗೂ ಪಾತ್ರವಾಗಿದೆ. ಇದನ್ನೂ ಓದಿ:ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ! ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ವೆನ್ಯೂ 91% ರೇಟಿಂಗ್ ಪಡೆದಿದ್ದರ, ಮಕ್ಕಳ ಸುರಕ್ಷತೆಯಲ್ಲಿ 81% ಹಾಗೂ ಕಾರಿನ ಸುರಕ್ಷತಾ ಫೀಚರ್ಸ್‌ನಿಂದ 62% ರೇಟಿಂಗ್ ಪಡೆಯೋ ಮೂಲಕ ಒಟ್ಟು 4 ಸ್ಟಾರ್ ರೇಟಿಂಗ್ ಪಡದಿದೆ. ಸುರಕ್ಷತಾ ಫಲಿತಾಂಶಗದಲ್ಲಿ ಗರಿಷ್ಠ ರೇಟಿಂಗ್ 5. ಇದನ್ನೂ ಓದಿ:ಟಿ ಸಪ್ಲೈ ಮಾಡುತ್ತಿದ್ದ ಬೆಂಗಳೂರಿಗ ಈಗ ನೂರಾರು ಕೋಟಿಯ ಲ್ಯಾಂಬೋರ್ಗಿನಿ ಡೀಲರ್!​​​​​​​ ವೆನ್ಯು ಪ್ರತಿಸ್ಪರ್ಧಿ ಮಾರುತಿ ಬ್ರೆಜಾ 4, ಫೋರ್ಡ್ ಇಕೋಸ್ಪೋರ್ಟ್ 4, ಮಹೀಂದ್ರ XUV300 4 ಸ್ಟಾರ್ ಪಡೆದಿದೆ. ಇದೇ ವಿಭಾಗದ ಟಾಟಾ ನೆಕ್ಸಾನ್ 5 ಸ್ಟಾರ್ ರೇಟಿಂಗ್ ಪಡೆಯೋ ಮೂಲಕ ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.