ಹ್ಯುಂಡೈ ಸ್ಯಾಂಟ್ರೋ ಆ್ಯನಿವರ್ಸರಿ ಎಡಿಷನ್‌ ಬಿಡುಗಡೆ! ಸಣ್ಣ ಕಾರಿನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಹ್ಯುಂಡೈ ಸ್ಯಾಂಟ್ರೋ ಇದೀಗ ಆ್ಯನಿವರ್ಸಿ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಈ ಕಾರಿನ ವಿಶೇಷತೆ ಹಾಗೂ ಬೆಲೆ ವಿವರ ಇಲ್ಲಿದೆ. ನವದೆಹಲಿ(ಅ.26):ಹ್ಯುಂಡೈ ಮೋಟಾರ್‌ ಇಂಡಿಯಾ ತನ್ನ ಆ್ಯನಿವರ್ಸರಿ ಪ್ರಯುಕ್ತ ಎರಡು ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಯಾಂಟ್ರೋ ಸ್ಪೋರ್ಟ್ಸ್ ಹಾಗೂ ಆವೃತ್ತಿಗಳು ಮಾರುಕಟ್ಟೆಗೆ ಬಂದಿವೆ. ಆ್ಯನಿವರ್ಸರಿಯ ಲಾಂಛನ ಇದರಲ್ಲಿರೋದು ವಿಶೇಷ. ಇದು ಸೀಮಿತ ಆವೃತ್ತಿ ಮಾಡೆಲ್‌ಗಳು ಇದರಲ್ಲಿವೆ. ಇದನ್ನೂ ಓದಿ:ಸ್ಯಾಂಟ್ರೋ ಕಾರು ದರ ಪರಿಷ್ಕರಣೆ; ಇಲ್ಲಿದೆ ನೂತನ ಬೆಲೆ! ಈ ಮಾಡೆಲ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹ್ಯುಂಡೈ ಮೋಟಾರ್‌ ಇಂಡಿಯಾ ಲಿಮಿಟೆಡ್‌ನ ನ್ಯಾಷನಲ್‌ ಸೇಲ್ಸ್‌ ಹೆಡ್‌ ವಿಕಾಸ್‌ ಜೈನ್‌, ‘ಸ್ಯಾಂಟ್ರೋದ ಈ ವಿಶೇಷ ಆವೃತ್ತಿಯಲ್ಲಿ ಜಾಗತಿಕ ತಂತ್ರಜ್ಞಾನ, ಸ್ಟೈಲಿಶ್‌ ವಿನ್ಯಾಸ ಹಾಗೂ ಇನ್ನಿತರ ಫೀಚರ್‌ಗಳನ್ನು ಅಳವಡಿಸಲಾಗಿದೆ’ ಎಂದರು. ಇದನ್ನೂ ಓದಿ:ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್! ಬೆಲೆ: ಸ್ಪೋರ್ಟ್ಸ್ (ಆನಿವರ್ಸರಿ ಆವೃತ್ತಿ) : 5,16,890 ರು. ಸ್ಪೋರ್ಟ್ಸ್ (ಆನಿವರ್ಸರಿ ಆವೃತ್ತಿ) : 5,74,890 ರು.