ಬಿಡುಗಡೆಯಾಯ್ತು ಲ್ಯಾಂಬೋರ್ಗಿನಿ ಕಾರು: ಬೆಲೆ 4 ಕೋಟಿಗೂ ಮೇಲು! ದುಬಾರಿ ಸ್ಪೋರ್ಟ್ಸ್ ಕಾರು ಲ್ಯಾಂಬೋರ್ಗಿನಿ ನೂತನ ಕಾರು ಬಿಡುಗಡೆ ಮಾಡಿದೆ. ಹುರಾಕಾನ್ ಸ್ಪೈಡರ್ ಕಾರು ಹಲವು ವಿಶೇಷತೆಗಳೊಂದಿಗೆ ಭಾರತಕ್ಕೆ ಕಾಲಿಟ್ಟಿದೆ. ಈ ಕಾರಿನ ಸಂಪೂರ್ಣ ವಿವರ ಇಲ್ಲಿದೆ. ಮುಂಬೈ(ಅ.10):ದುಬಾರಿ ಹಾಗೂ ಐಷಾರಾಮಿ ಸ್ಪೋರ್ಟ್ಸ್ ಕಾರುಗಳಲ್ಲಿ ಲ್ಯಾಂಬೋರ್ಗಿನಿಗೆ ಮೊದಲ ಸ್ಥಾನ. ಇದರ ಪರ್ಫಾಮೆನ್ಸ್, ಲುಕ್, ಎಂಜಿನ್‌ಗೆ ಸರಿಸಾಟಿ ಇಲ್ಲ. ಇದೀಗ ಲ್ಯಾಂಬೋರ್ಗಿನಿ ಹುರಾಕಾನ ಸ್ಪೈಡರ್ ಸೂಪರ್ ಕಾರು ಬಿಡುಗಡೆಯಾಗಿದೆ. ಈ ಕಾರಿನ ಬೆಲೆ 4.1 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಸಾಫ್ಟ್ ರೂಪ್ ಕನ್‌ವರ್ಟೇಬಲ್ ಆಯ್ಕೆ ಕೂಡ ಲಭ್ಯವಿದೆ. ಇದನ್ನೂ ಓದಿ:ಪಾಂಡ್ಯ ಖರೀದಿಸಿದ 4 ಕೋಟಿ ಮೌಲ್ಯದ ನೂತನ ಕಾರಿನ ಮೈಲೇಜ್ 7 ಕಿ.ಮೀ! ಲ್ಯಾಂಬೋರ್ಗಿನಿ ಹುರಾಕಾನ್ ಸ್ಪೈಡರ್ ಕಾರು 0-100 ಕಿ.ಮೀ ವೇಗ ತಲುಪಲು 3.1 ಸೆಕೆಂಡ್‌ಗಳು ತೆಗೆದುಕೊಳ್ಳುತ್ತೆ. ಈ ಕಾರಿನ ಗರಿಷ್ಠ ವೇಗ 325 .ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಲ್ಯಾಂಬೋರ್ನಿಗಿ ಹುರಾಕಾನ್ ಕಾರಿನ ಎಂಜಿನ್ ಬಳಸಲಾಗಿದೆ. ಇದನ್ನೂ ಓದಿ:ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ! 5.2-ಲೀಟರ್ V10 ಮೋಟಾರ್ ಹೊಂದಿದ್ದು, 631 (@8,000 ) ಪವರ್ 600 (@6,500 ) ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 7 ಸ್ಪೀಡ್ ಲ್ಯಾಂಬೋರ್ಗಿನಿ ಫ್ರಿಜಿಯೊನ್() ಡ್ಯುಯೆಲ್ ಕ್ಲಚ್ ಟ್ರಾನ್ಸ್‌ಮಿಶನ್ ಹೊಂದಿದೆ. ಇದನ್ನೂ ಓದಿ:ಖರೀದಿಸಿದ 2 ನಿಮಿಷದಲ್ಲಿ ಕಾಪೌಂಡ್‌ಗೆ ಡಿಕ್ಕಿ- 2.2 ಕೋಟಿ ಲ್ಯಾಂಬೋರ್ಗಿನಿ ಪುಡಿ ಪುಡಿ! 20 ಇಂಚಿನ ಆಲೋಯ್ ವೀಲ್ಹ್ , ಝಿರೋ ಟೈಯರ್ಸ್ ಹೊಂದಿದೆ. 8.4 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಈ ಮೂಲಕ ಕಾರನ್ನು ಕಂಟ್ರೋಲ್ ಮಾಡಬಹುದು. ಕ್ಲೈಮೇಟ್ ಕಂಟ್ರೋಲ್, ಸೆಲ್ ಫೋನ್ ಕೆನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.