ಟೊಯೊಟಾ ಗ್ಲಾಂಝಾ ಕಾರು ಬಿಡುಗಡೆ; ಬೆಲೆ 6.98 ಲಕ್ಷ! ಟೊಯೊಟಾ ಗ್ಲಾಂಝಾ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದೆ. ಎಂಟ್ರಿ ಲೆವೆಲ್ ಕಾರು ಬಿಡುಗಡೆ ಮಾಡಿರುವು ಟೊಯೊಟಾ, ಈ ಹಿಂದಿನ ಕಾರಿಗಿಂತ 24,000 ರೂಪಾಯಿ ಕಡಿತಗೊಳಿಸಿದೆ. ನವದೆಹಲಿ(ಅ.05):ಮಾರುತಿ ಸುಜುಕಿ ಬಲೆನೊ ಕಾರು ಈಗಾಗಲೇ ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಟೊಯೊಟಾ ಗ್ಲಾಂಝಾ ಕಾರಾಗಿ ಬಿಡುಗಡೆಯಾಗಿದೆ. ಬೆಲೆನೊ ಮಾಡಿದ ಮಾಡಿದ ಮೋಡಿ ಗ್ಲಾಂಝಾ ಮಾಡಿಲ್ಲ ಅನ್ನೋದು ತಳ್ಳಿ ಹಾಕುವಂತಿಲ್ಲ. ಇದೀಗ ಗ್ಲಾಂಝಾ ವೇರಿಯೆಂಟ್ ಕಾರು ಬಿಡುಗಡೆಯಾಗಿದೆ. ಬೇಸ್ ಲೆವೆಲ್ ಕಾರಿನ ಬೆಲೆ 6.98 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದನ್ನೂ ಓದಿ:ಮೋದಿ ಕನಸಿಗೆ ಕೈಜೋಡಿಸಿದ ಟೊಯೊಟಾ, ಮಹೀಂದ್ರ! ಎಂಟ್ರಿ ಲೆವೆಲ್ ಕಾರಾಗಿರುವ ಗ್ಲಾಂಝಾ ಕಾರು ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರಾಗಿದೆ. ಈ ಹಿಂದೆ ಗ್ಲಾಂಝಾ (ಹೈಬ್ರಿಡ್) ಕಾರು ಬಿಡುಗಡೆಯಾಗಿದೆ. ಈ ಕಾರಿಗಿಂತ ನೂತನ ಬಿಡುಗಡೆಯಾಗಿರುವ (ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್) ಕಾರಿನ ಬೆಲೆ 24,000 ರೂಪಾಯಿ ಕಡಿಮೆ. ಇದನ್ನೂ ಓದಿ:ರೇಂಜ್ ರೋವರ್ ಬದಲು ಟೊಯೊಟಾ, ಪ್ರಧಾನಿ ಮೋದಿ ಕಾರು ಬದಲಾವಣೆ! ನೂತನ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, BS6 ನಿಯಮ ಪಾಲಿಸಿದೆ. 1197 , 4 ಸಿಲಿಂಡರ್ಹೊಂದಿರು ಗ್ಲಾಂಝಾ 82 ಪವರ್ ಹಾಗೂ 113 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5- ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 21.01 ಕಿ.ಮಿ ಮೈಲೇಜ್ ನೀಡಲಿದೆ. ಟೊಯೊಟಾ ಗ್ಲಾಂಝಾ ಕಾರಿನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು ಹಾಗೂ ಟ್ರಿಮ್ ವೇರಿಯೆಂಟ್‌ನಲ್ಲಿ ಲಭ್ಯವಿದೆ.