ಕಡಿಮೆ ಬೆಲೆಯಲ್ಲಿ ದಾಟ್ಸನ್ ಗೋ ಆಟೋಮ್ಯಾಟಿಕ್ ಕಾರು ಬಿಡುಗಡೆ! ಕಡಿಮೆ ಬೆಲೆ ಆರಾಮದಾಯಕ ಕಾರು ಎಂದೇ ಹೆಸರುವಾಸಿಯಾಗಿರುವ ದಾಟ್ಸನ್ ಹೊಸ ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. ಆಟೋಮ್ಯಾಟಿಕ್ ಕಾರು ಬಿಡುಗಡೆ ಮಾಡಿರುವು ದಾಟ್ಸನ್, ಗ್ರಾಹಕರ ಆರಮದಾಯಕ ಡ್ರೈವಿಂಗ್‌ಗೆ ಹೆಚ್ಚು ಒತ್ತು ನೀಡಿದೆ. ನವದೆಹಲಿ(ಅ.12):ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದ್ದರೂ, ದಾಟ್ಸನ್ ಹೊಸ ವೇರಿಯೆಂಟ್ ಕಾರು ಬಿಡುಗಡೆ ಮಾಡಿದೆ. ದಾಟ್ಸನ್ ಗೋ ಹಾಗೂ ದಾಟ್ಸನ್ ಗೋ + ಆಟೋಮ್ಯಾಟಿಕ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಎಂದಿನಂತೆ ದಾಟ್ಸನ್ ಕಡಿಮೆ ಬೆಲೆಯಲ್ಲಿ ಈ ವೇರಿಯೆಂಟ್ ಬಿಡುಗಡೆ ಮಾಡಿದೆ. ಇದನ್ನೂ ಓದಿ:10 ದಿನದಲ್ಲಿ 10 ಸಾವಿರ ಬುಕಿಂಗ್; ದಾಖಲೆ ಬರೆದ ಮಾರುತಿ ಪ್ರೆಸ್ಸೋ! ದಾಟ್ಸನ್ ಗೋ ಕಾರಿನ ಬೆಲೆ(ಎಕ್ಸ್ ಶೋ ರೂಂ)ದಾಟ್ಸನ್ = 5.94 ಲಕ್ಷ ರೂದಾಟ್ಸನ್ () = 6.18 ದಾಟ್ಸನ್ ಪ್ಲಸ್ ಕಾರಿನ ಬೆಲೆ(ಎಕ್ಸ್ ಶೋ ರೂಂ)ದಾಟ್ಸನ್ = 6.58 lakhsದಾಟ್ಸನ್ () = 6.8 ಇದನ್ನೂ ಓದಿ:ಹೆಚ್ಚು ಮೈಲೇಜ್, ಕಡಿಮೆ ಬೆಲೆ; ಟಾಟಾ ಬಿಡುಗಡೆ ಮಾಡಿದೆ ಹೊಸ ಕಾರು! ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ದಾಟ್ಸನ್ ಗೋ ಆಟೋಮ್ಯಾಟಿಕ್ ಕಾರು ಬಿಡುಗಡೆ ಮಾಡಲಾಗಿದೆ. ನಗರ ಪ್ರದೇಶ ಸೇರಿದಂತೆ ಯಾವುದೇ ಮೂಲೆಯಲ್ಲೂ ಆರಾಮದಾಯಕ ಡ್ರೈವಿಂಗ್‌ಗಾಗಿ ಆಟೋಮ್ಯಾಟಿಕ್ ಕಾರು ಬಿಡುಗಡೆಯಾಗಿದೆ. ಇತರ ವೇರಿಯೆಂಟ್ ಕಾರುಗಳಿಗೆ ಹೋಲಿಸಿದರೆ, ದಾಟ್ಸನ್ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ ಎಂದು ದಾಟ್ಸನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾತ್ಸವ್ ಹೇಳಿದ್ದಾರೆ. ಇದನ್ನೂ ಓದಿ:ಟಾಟಾ ಟಿಯಾಗೋ ಕಾರು ಲಾಂಚ್; ಬೆಲೆ ಕೇವಲ 5.40 ಲಕ್ಷ! ದಾಟ್ಸನ್ ಗೋ ಹಾಗೂ ದಾಟ್ಸನ್ ಪ್ಲಸ್ ಆಟೋಮ್ಯಾಟಿಕ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 76 ಪವರ್ ಹಾಗೂ 104 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ವೇರಿಯೆಂಟ್ ಮೈಲೇಜ್ 20.07 .