ಜನ ಓಲಾ, ಉಬರ್ ಬಳಸುತ್ತಾರೆ: ಹಿನ್ನಡೆ ಸಮಸ್ಯೆಗೆ ‘ನಿರ್ಮಲ’ ಉತ್ತರ! ದೇಶದ ಆಟೋಮೊಬೈಲ್ ಕ್ಷೇತ್ರದ ಹಿನ್ನಡೆಗೆ ಸಿಕ್ತು ಕಾರಣ| ನಾವು, ನೀವೆಲ್ಲಾ ಓಲಾ, ಉಬರ್ ಬಳಸುತ್ತಿರುವುದೇ ಆಟೋಮೊಬೈಲ್ ಕ್ಷೇತ್ರದ ಹಿನ್ನಡೆಗೆ ಕಾರಣ| ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಅದ್ಭುತ ಕಾರಣ’| ‘ ತಪ್ಪಿಸಲು ಓಲಾ, ಉಬರ್ ಬಳಸುತ್ತಿರುವುದರಿಂದ ಹೊಸ ಕಾರು ಕೊಳ್ಳುವವರಿಲ್ಲ’| ನಿರ್ಮಲಾ ಸೀತಾರಾಮನ್ ಉತ್ತರಕ್ಕೆ ವ್ಯಂಗ್ಯವಾಡಿದ ಕಾಂಗ್ರೆಸ್| ನವದೆಹಲಿ(ಸೆ.10):ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೋದಿ 2.0 ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಸಂದಿವೆ. ಈ ಮಧ್ಯೆ ಕೇಂದ್ರ ಸರ್ಕಾರದ ಇಲಾಖಾವಾರು ಸಚಿವರು ತಮ್ಮ ಇಲಾಖೆಯ ಸಾಧನೆಯ ಕುರಿತು ಮಾಹಿತಿ ನೀಡುತ್ತಿದ್ದಾರೆ. ಅದರಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ತಮ್ಮ ಇಲಾಖೆಯ ಕುರಿತು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಈ ನೂರು ದಿನಗಳಲ್ಲಿ ಆರ್ಥಿಕ ಕುಸಿತದ ಅತೀ ದೊಡ್ಡ ಸವಾಲು ಎದುರಿಸುತ್ತಿದ್ದು, ವಿತ್ತ ಸಚಿವಾಲಯದ ಹೊಣೆ ಹೊತ್ತಿರುವ ನಿರ್ಮಲಾ ಸೀತಾರಾಮನ್ ಬಿಡುವಿಲ್ಲದ ಕಾರ್ಯಭಾರದ ಹೊರೆ ಹೊತ್ತಿದ್ದಾರೆ. ಈ ಮಧ್ಯೆಆಟೋಮೊಬೈಲ್ಕ್ಷೇತ್ರಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಉಡಾಫೆಯ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್, ಈ ದೇಶದಲ್ಲಿ ಲಕ್ಷಾಂತರ ಜನರು ತಮ್ಮEMIಉಳಿಸಲು ಓಲಾ ಮತ್ತು ಉಬರ್ ಕಾರುಗಳಲ್ಲಿ ಓಡಾಡುತ್ತಾರೆ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ವಿಚಿತ್ರ ಉತ್ತರ ನೀಡಿದ್ದಾರೆ. ಭರಿಸುವುದನ್ನು ತಪ್ಪಿಸಲು ಜನ ಓಲಾ, ಉಬರ್’ಗಳಲ್ಲಿ ಓಡಾಡುತ್ತಿದ್ದು,ಹೊಸ ಕಾರುಗಳನ್ನು ಕೊಳ್ಳಲು ಮುಂದೆ ಬರುತ್ತಿಲ್ಲ. ಈ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ಸೀತಾರಾಮನ್ ನುಡಿದಿದ್ದಾರೆ. ಇನ್ನುವಿತ್ತ ಸಚಿವೆಯ ಹೇಳಿಕೆಗೆ ವ್ಯಂಗ್ಯವಾಡಿರುವ ಪ್ರತಿಪಕ್ಷಕಾಂಗ್ರೆಸ್, ಹಾಗಾದರೆ ಬಸ್ ಮತ್ತು ಟ್ರಕ್ ಖರೀದಿಯಲ್ಲಿ ಆದ ಹಿನ್ನಡೆಗೂ ಜನ ಓಲಾ ಮತ್ತು ಉಬರ್’ಗಳಲ್ಲಿ ಓಡಾಡುವುದೇ ಕಾರಣವೇ ಎಂದು ಪ್ರಶ್ನಿಸಿದೆ.