ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ವಾಹನ ಮಾರಾಟ ಕುಸಿತ ಕಾಣುತ್ತಿರುವ ಬೆನ್ನಲ್ಲೇ ಮಾರುತಿ ಸುಜುಕಿ ಕಾರುಗಳ ಮೇಲೆ ಕಂಪನಿ ಡಿಸ್ಕೌಂಟ್ ಘೋಷಿಸಿದೆ. ಮಾರುತಿ ಪ್ರತಿ ಕಾರಿನ ಮೇಲೂ ಭರ್ಜರಿ ರಿಯಾಯಿತಿ ನೀಡಲಾಗಿದೆ. ಇಲ್ಲಿದೆ ಡಿಸ್ಕೌಂಟ್ ಆಫರ್ ವಿವರ. ನವದೆಹಲಿ(ಆ.06):ಭಾರತದ ವಾಹನ ಮಾರಾಟ ಪಾತಳಕ್ಕೆ ಕುಸಿದಿದೆ. ಆಟೋಮೊಬೈಲ್ ಕಂಪನಿಗಳು ನಷ್ಟ ಅನುಭವಿಸುತ್ತಿದೆ. ಹೀಗಾಗಿ 30,000ಕ್ಕೂ ಹೆಚ್ಚಿನ ಉದ್ಯೋಗ ಕಡಿತಗೊಂಡಿದೆ. ಇದೀಗ ಮಾರಾಟ ಚೇತರಿಕೆ ಕಾಣಲು ಮಾರುತಿ ಸುಜುಕಿ ಮುಂದಾಗಿದೆ. ಮಾರುತಿ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಪ್ರತಿ ಕಾರಿನ ಮೇಲೆ ರಿಯಾಯಿತಿ ನೀಡಲಾಗಿದೆ. ಮಾರುತಿ ಸುಜುಕಿ ಸಿಯಾಝ್ಗರಿಷ್ಠ ರಿಯಾಯಿತಿ ಬೆಲೆ 70,000 ರೂ ಮಾರುತಿ ಸುಜುಕಿ -ಕ್ರಾಸ್ಗರಿಷ್ಠ ರಿಯಾಯಿತಿ ಬೆಲೆ 60,000 ರೂ ಮಾರುತಿ ಸುಜುಕಿ ಬಲೆನೋಮಾರುತಿ ಸುಜುಕಿ 45,000 ರೂ ಮಾರುತಿ ಸುಜುಕಿ ಸೆಲೆರಿಯೋಗರಿಷ್ಠ ರಿಯಾಯಿತಿ 60,000 ರೂ ಮಾರುತಿ ಸುಜುಕಿ ಅಲ್ಟೋ K10ಗರಿಷ್ಠ ರಿಯಾಯಿತಿ 55,000 ರೂ ಮಾರುತಿ ಸುಜುಕಿ ಡಿಸೈರ್ಗರಿಷ್ಠ ರಿಯಾಯಿತಿ 55,000 ರೂ ಮಾರುತಿ ಸುಜುಕಿ ಸ್ವಿಫ್ಟ್ಗರಿಷ್ಠ ರಿಯಾಯಿತಿ 50,000 ರೂ ಮಾರುತಿ ಸುಜುಕಿ ಅಲ್ಟೋಗರಿಷ್ಠ ರಿಯಾಯಿತಿ 45,000 ರೂ ಮಾರುತಿ ಸುಜುಕಿ ವಿಟಾರ ಬ್ರಿಜಾಗರಿಷ್ಠ ರಿಯಾಯಿತಿ 45,000 ರೂ ಮಾರುತಿ ಸುಜುಕಿ ಇಕೋಗರಿಷ್ಠ ರಿಯಾಯಿತಿ 30,000 ರೂ ಮಾರುತಿ ಸುಜುಕಿ ವ್ಯಾಗನ್ಆರ್ಗರಿಷ್ಠ ರಿಯಾಯಿತಿ 20,000 ರೂ ಮೇಲೆ ತಿಳಿಸಲಾದ ರಿಯಾಯಿತಿಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ನಿಮ್ಮ ಹತ್ತಿರದ ಡೀಲರ್‌ನ್ನು ಸಂಪರ್ಕಿಸಿ ರಿಯಾಯಿತಿ ಬೆಲೆ ಖಚಿತಪಡಿಸಿಕೊಳ್ಳಿ.