ಮಹೀಂದ್ರ ಕಾರು ಬೆಲೆ ಹೆಚ್ಚಳ- ಇಲ್ಲಿದೆ ನೂತನ ದರ! ಮಹೀಂದ್ರ ಕಾರುಗಳ ಬೆಲೆ ಹೆಚ್ಚಾಗುತ್ತಿದೆ. ಜುಲೈ 1 ರಿಂದ ನೂತನ ದರ ಅನ್ವಯವಾಗಲಿದೆ. ಮಹೀಂದ್ರ ದಿಢೀರ್ ಕಾರಿನ ಬೆಲೆ ಹೆಚ್ಚಿಸಲು ಕಾರಣವೇನು? ಇಲ್ಲಿದೆ ವಿವರ. ನವದೆಹಲಿ(ಜೂ.23):ಭಾರತದ ಆಟೋಮೊಬೈಲ್ ಕ್ಷೇತ್ರ ಬದಲಾವಣೆ ಕಾಣುತ್ತಿದೆ. ಹಳೇ ನಿಯಮಗಳು ತಿದ್ದುಪಡಿಯಾಗಿ ಹೊಸದಾಗಿ ಜಾರಿಯಾಗುತ್ತಿದೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಹೆಚ್ಚಾಗಿದೆ. ಮಾಲಿನ್ಯ ತಡೆಗೆ ಗರಿಷ್ಠ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಜುಲೈ 1 ರಿಂದ ಮತ್ತಷ್ಟು ಹೊಸ ನಿಯಮಗಳು ಜಾರಿಯಾಗುತ್ತಿದೆ. ಹೀಗಾಗಿ ಬಹುತೇಕ ಎಲ್ಲಾ ಕಾರು ಕಂಪನಿಗಳು ಬೆಲೆ ಹೆಚ್ಚಳ ಮಾಡುತ್ತಿದೆ. ಇದನ್ನೂ ಓದಿ: ಹೆಕ್ಟರ್ ಕಾರಿನಲ್ಲಿದೆ 5 ವಿಶೇಷತೆ-ಇತರ ಕಾರಿಗಿಂತ ಭಿನ್ನ! ಮಹೀಂದ್ರ ಮೋಟಾರ್ಸ್ ಜುಲೈ 1 ರಿಂದ ಕಾರು ಬೆಲೆ ಹೆಚ್ಚಳ ಮಾಡುತ್ತಿದೆ. ಮಹೀಂದ್ರ ಕಾರುಗಳ ಬೆಲೆ ಗರಿಷ್ಠ 36,000 ರೂಪಾಯಿ ಹೆಚ್ಚಾಗಲಿದೆ. ಡ್ರೈವರ್ ಏರ್‌ಬ್ಯಾಗ್, ಡ್ರೈವರ್ -ಕೋ ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್, ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಅತೀ ವೇಗದ ಅಲರ್ಟ್ ಫೀಚರ್ಸ್ ಎಲ್ಲಾ ಮಾಡೆಲ್ ಕಾರುಗಳಲ್ಲಿ ಕಡ್ಡಾಯ. ಹೀಗಾಗಿ ಮಹೀಂದ್ರ ತನ್ನ ಕಾರುಗಳ ಬೆಲೆ ಹೆಚ್ಚಿಸಿದೆ. ಇದನ್ನೂ ಓದಿ:ಮಾರಾಟಕ್ಕಿದೆ ಸಲ್ಮಾನ್ ಖಾನ್ ಖರೀದಿಸಿದ 7 ಸೀರಿಸ್ ಕಾರು! ಮಹೀಂದ್ರ ಕಂಪನಿಯ ಎಲ್ಲಾ ಕಾರುಗಳ ಬೆಲೆ ಹೆಚ್ಚಾಗಲಿದೆ. ಜುಲೈ 1 ರಿಂದ ನೂತನ ದರ ಅನ್ವಯವಾಗಲಿದೆ. ಬೇಸ್ ಮಾಡೆಲ್, ಮಿಡ್ ವೇರಿಯೆಂಟ್ ಹಾಗೂ ಟ್ರಿಮ್ ಮಾಡೆಲ್ ಬೆಲೆ ಹೆಚ್ಚಾಗಲಿದೆ. ಆದರೆ ಟಾಪ್ ವೇರಿಯೆಂಟ್ ಕಾರಿನ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳಾಗೋ ಸಾಧ್ಯತೆ ಕಡಿಮೆ.