ಟಾಟಾದ 3 ಕಾರುಗಳು ಸ್ಥಗಿತ- ಇಲ್ಲಿದೆ ಕಾರಣ! ಟಾಟಾ ಮೋಟಾರ್ಸ್ ಮೂರು ಕಾರುಗಳು ಕೆಲ ವೇರಿಯೆಂಟ್ ಸ್ಥಗಿತಗೊಳಿಸಿದೆ. ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ ಟಾಟಾ ಕೆಲ ಕಾರುಗಳನ್ನು ಸ್ಥಗಿತಗೊಳಿಸಿದ್ದೇಕೆ? ಇಲ್ಲಿದೆ ವಿವರ. ನವದಹೆಲಿ(ಮೇ.25):ಟಾಟಾ ಮೋಟಾರ್ಸ್ 3 ಕಾರುಗಳ ಕೆಲ ವೇರಿಯೆಂಟ್ ಕಾರುಗಳನ್ನು ಸ್ಥಗಿತಗೊಳಿಸಿದೆ. ಕನಿಷ್ಠ ಸುರಕ್ಷತೆ ಇಲ್ಲದ ಕಾರಗಳನ್ನು ಸ್ಥಗಿತಗೊಳಿಸಲು ಟಾಟಾ ನಿರ್ಧರಿಸಿದೆ. ಹೀಗಾಗಿ ಟಾಟಾ ಜೆಸ್ಟ್, ಟಾಟಾ ಬೋಲ್ಟ್, ಹಾಗೂ ಟಾಟಾ ಸಫಾರಿ 4X4 ಇಲ್ಲದ ವೇರಿಯೆಂಟ್ ಕಾರುಗಳು ಸ್ಥಗಿತಗೊಳ್ಳುತ್ತಿದೆ. ಆದರೆ ಈ ಮೂರು ಕಾರುಗಳು ಟಾಪ್ ವೇರಿಯೆಂಟ್ ಹಾಗೂ ತಂತ್ರಜ್ಞಾನವಿರುವ ಕಾರುಗಳು ಲಭ್ಯವಿದೆ. ಸದ್ಯ ಡೀಲರ್‌ಗಳ ಬಳಿ ಇರುವ ಸ್ಟಾಕ್ ಕಾರುಗಳು ಲಭ್ಯವಿದೆ. ಆದರೆ ಈ ಮೂರು ಕಾರುಗಳ ನಿರ್ಮಾಣವನ್ನು ಟಾಟಾ ಸ್ಥಗಿತಗೊಳಿಸಿದೆ. ಟಾಟಾ ಬೋಲ್ಟ್, ಜೆಸ್ಟ್ ಹಾಗೂ ಸಫಾರಿ , ಕಾರುಗಳು ಲಭ್ಯವಿದೆ. ಲಭ್ಯವಿರು ಟಾಪ್ ಮಾಡೆಲ್ ಕಾರುಗಳು ನೂತನ - ಎಮಿಶನ್ ಎಂಜಿನ್ ನಿಯಮ ಹಾಗೂ ಕ್ರಾಶ್ ಟೆಸ್ಟ್‌ಗಾಗಿ ಅಪ್‌ಗ್ರೇಡ್ ಆಗಲಿದೆ. ಟಾಟಾ ಸ್ಥಗಿತಗೊಳಿಸಿದ ಕಾರುಗಳು:ಬೋಲ್ಟ್ ಡೀಸೆಲ್ XMಬೋಲ್ಟ್ ಪೆಟ್ರೋಲ್ XMಜೆಸ್ಟ್ ಡೀಸೆಲ್ XMಜೆಸ್ಟ್ ಪೆಟ್ರೋಲ್ XMಸಫಾರಿ ಸ್ಟ್ರೋಮ್ 4X4