ಹೊಸ ಮೈಲಿಗಲ್ಲು ಸ್ಥಾಪಿಸಿದ ಹೊಂಡಾ ಡಿಯೋ ಸ್ಕೂಟರ್! ಹೊಂಡಾ ಡಿಯೋ ಸ್ಕೂಟರ್ ಹೊಸ ದಾಖಲೆ ಬರೆದಿದೆ. ಆಕ್ಟೀವಾ ಬಳಿಕ ಡಿಯೋ ನಿರ್ಮಿಸಿದ ದಾಖಲೆ ಏನು? ಇಲ್ಲಿದೆ ಸಂಪೂರ್ಣ ವಿವರ. ನವದೆಹಲಿ(ಮೇ.06):ಹೊಂಡಾ ಮೋಟರ್‌ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಕಂಪನಿಯ ಹೊಂಡಾ ಆಕ್ಟೀವಾ ಹಾಗೂ ಹೊಂಡಾ ಡಿಯೋ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಕ್ಟೀವಾ ಮಾರಾಟದಲ್ಲಿ ದಾಖಲೆ ಬರೆದ ಬೆನ್ನಲ್ಲೇ ಇದೀಗ ಡಿಯೋ ಕೂಡ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ಇದನ್ನೂ ಓದಿ:ಬಜಾಜ್‌ನಿಂದ ಹೊಸ ಆಫರ್- ಡೊಮಿನಾರ್ 400 ಬೈಕ್ ಬೆಲೆ ಕಡಿತ! ಹೊಂಡಾ ಡಿಯೋ ಒಟ್ಟು 30 ಲಕ್ಷ ಸ್ಕೂಟರ್‌ಗಳು ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. ಆರಂಭಿಕ 14 ವರ್ಷಗಳಲ್ಲಿ 15 ಲಕ್ಷ ಸ್ಕೂಟರ್ ಮಾರಾಟವಾಗಿತ್ತು. ಕಳೆದ 3 ವರ್ಷಗಳಲ್ಲಿ 15 ಲಕ್ಷ ಸ್ಕೂಟರ್ ಮಾರಾಟವಾಗಿದೆ. ಈ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದೆ. ಇದನ್ನೂ ಓದಿ:ಬಜಾಜ್ ಅವೆಂಜರ್ 160 ಬೈಕ್ ಬಿಡುಗಡೆ- ಬೆಲೆ ಎಷ್ಟು? ಹೊಂಡಾ ಡಿಯೋ 2018ರಲ್ಲಿ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಹೆಡ್‌ಲ್ಯಾಂಪ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ನೂತನ ಡಿಯೋ ಸ್ಕೂಟರ್ ಬೆಲೆ 52,938 ರೂಪಾಯಿ. 109 ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 8 ಪವರ್ ಹಾಗೂ 8.91 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.