ಮಾರುತಿ 800 : ವರ್ಷದಿಂದ ವರ್ಷಕ್ಕೆ ಬದಲಾಗುತ್ತೆ ಸಚಿನ್ ಕಾರು! ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪ್ರತಿ ವರ್ಷ ಕಾರುಗಳನ್ನು ಬದಲಾಯಿಸುತ್ತಾರೆ. ಸಚಿನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಸಚಿನ್ ಖರೀದಿಸಿದ ಕಾರುಗಳೆಷ್ಟು? ಇಲ್ಲಿದೆ ಸಚಿನ್ ಕಾರು ಪ್ರೀತಿ. ಮುಂಬೈ(ಏ.24): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂದು(ಏ.24) 46ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಚಿನ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸಚಿನ್ ಬರ್ತ್‌ಡೇ ಸಂಭ್ರಮ ಒಂದಡೆಯಾದರೆ ಸಚಿನ್ ಕುರಿತ ಹಲವು ಇಂಟ್ರೆಸ್ಟಿಂಗ್ ವಿಚಾರಗಳು ಮಾಹಿತಿ ಇಲ್ಲಿದೆ. ಇದನ್ನೂ ಓದಿ:ವಿರಾಟ್ ಕೊಹ್ಲಿ ಮನೆ ಸೇರಿತು 4 ಕೋಟಿ ರೂಪಾಯಿ ಕಾರು! ಸಚಿನ್ ತೆಂಡುಲ್ಕರ್ ಬಳಿ ,ಮರ್ಸಿಡೀಸ್ ಬೆಂಝ್, ನಿಸ್ಸಾನ್ -, ಫೆರಾರಿ ಸೇರಿದಂತೆ ದುಬಾರಿ ಕಾರುಗಳಿವೆ. ಆದರೆ ಸಚಿನ್ ಮೊದಲ ಕಾರು ಮಾರುತಿ 800. ಸಚಿನ್ ಬಹಳ ಇಷ್ಟಪಟ್ಟು ಹಾಗೂ ಕಷ್ಟಪಟ್ಟು ಖರೀದಿಸಿದ ಕಾರು ಈ ಮಾರುತಿ 800. ವಿಶೇಷ ಅಂದರೆ ಸಚಿನ್ ಬಳಿ ಈಗಲೂ ಮೊದಲು ಖರೀದಿಸಿದ ಮಾರುತಿ 800 ಕಾರಿದೆ. ಸಚಿನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಇದರಲ್ಲಿ ಕೆಲ ಕಾರುಗಳ ವಿವರ ಇಲ್ಲಿದೆ. ಇದನ್ನೂ ಓದಿ:ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್! ಫೆರಾರಿ 360 ಮೊಡೆನಾ:ಫೆರಾರಿ 360 ಮೊಡೆನಾ ಕಾರು ಭಾರತದಲ್ಲಿ ಸಂಚಲ ಮೂಡಿಸಿದ ಕಾರು. ಆಸಿಸ್ ಕ್ರಿಕೆಟ್ ದಿಗ್ಗ ಡಾನ್ ಬ್ರಾಡ್ಮನ್ 29 ಟೆಸ್ಟ್ ಶತಕ ದಾಖಲೆಯನ್ನು ಸಚಿನ್ ಮುರಿದ ಬೆನ್ನಲ್ಲೇ ಫಾರ್ಮುಲಾ 1 ರೇಸಲ್ ಮೈಕಲ್ ಶುಮಾಕರ್ ಫೆರಾರಿ 360 ಮೊಡೆನಾ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಕೆಲ ವರ್ಷಗಳ ಹಿಂದೆ ಸಚಿನ್ ಈ ಕಾರನ್ನು ಮಾರಾಟ ಮಾಡಿದ್ದಾರೆ. ನಿಸ್ಸಾನ್ -Rಫೆರಾರಿ ಬಳಿಕ ಸಚಿನ್ ತೆಂಡೂಲ್ಕರ್ ನಿಸ್ಸಾನ್ - ಕಾರನ್ನು ಖರೀದಿಸಿದರು. ಸರಿಸುಮಾರು 2.20 ಕೋಟಿ ರೂಪಾಯಿ ಮೌಲ್ಯದ ಈ ಕಾರಿಗೆ ಸಚಿನ್ ಆಲ್ಟರ್ ಕೂಡ ಮಾಡಿಸಿಕೊಂಡಿದ್ದರು. 2017ರಲ್ಲಿ ಸಚಿನ್ ಈ ಕಾರನ್ನು ಮಾರಾಟ ಮಾಡಿದ್ದಾರೆ. X5M2002ರ ಮಾಡೆಲ್ X5M ಕಾರು ಸಚಿನ್ ಹೆಚ್ಚು ಬಳಸಿದ್ದಾರೆ. ಈ ಕಾರಿನಲ್ಲೇ ಸಚಿನ್ ಹೆಚ್ಚು ಓಡಾಡಿದ್ದಾರೆ. ಈ ಕಾರು 72,000 ಕಿ.ಮೀ ಪ್ರಯಾಣ ಮಾಡಿದೆ. ಈ ಕಾರಿನ ಬೆಲೆ 80 ಲಕ್ಷ ರೂಪಾಯಿ. ಕಳೆದ ವರ್ಷ ಈ ಕಾರನ್ನೂ ಸಚಿನ್ ಮಾರಾಟ ಮಾಡಿದ್ದಾರೆ. i8ತೆಂಡುಲ್ಕರ್ ಬಳಿ ಡಿಸಿ ಡಿಸೈನ್ ಕಸ್ಟಮೈಸ್ ಮಾಡಿರುವ i8 ಕಾರಿದೆ. 2012ರಿಂದ ಸಚಿನ್ ಕಾರಿನ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ. ನೀಲಿ i8 ಕಾರು ಖರೀದಿಸಿದ ಸಚಿನ್ ಈ ಕಾರನ್ನು ಮಾಡಿಫೈ ಮಾಡಿದ್ದಾರೆ. ಇದೀಗ ರೆಡ್ ಹಾಗೂ ಬ್ಲಾಕ್ ಲುಕ್‌ನಲ್ಲಿ ಕಂಗೊಳಿಸುತ್ತಿದೆ. i8 ಕಾರಿನ ಜೊತೆ M6 ಗ್ರಾನ್ ಕಪ್, 7 ಸೀರಿಸ್, M5, ಮರ್ಸಡೀಸ್ ಬೆಂಝ್ c36 ಕಾರು ಕೊಡ ಹೊಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಸಚಿನ್ ತಮ್ಮ ಕಾರು ಬದಲಾಯಿಸಿದ್ದಾರೆ. ಕಾರಿನ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದಾರೆ.