ಭಾರತ್ ಟ್ರೈಲರ್ ಬಿಡುಗಡೆ: ಟ್ರಿಯಂಪ್ ಬೊನ್ನೆವಿಲ್ಲಿ ಬೈಕ್‌ನಲ್ಲಿ ಸಲ್ಮಾನ್ ಸ್ಟಂಟ್! ಸಲ್ಮಾನ್ ಖಾನ್ ಅಭಿನಯದ ಭಾರತ ಟ್ರೈಲರ್ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಚಿತ್ರದಲ್ಲಿ ಸಲ್ಮಾನ್ ಖಾನ್ ಬೈಕ್ ಸ್ಟೆಂಟ್ ಎಲ್ಲರ ಗಮನಸೆಳೆದಿದೆ. ಈ ಸ್ಟಂಟ್‌ಗಾಗಿ ಸಲ್ಮಾನ್ ಖಾನ್ ಟ್ರಿಯಂಪ್ ಬೊನ್ನೆವಿಲ್ಲಿ ಬೈಕ್ ಬಳಸಾಲಿದೆ. ಸಲ್ಮಾನ್ ಸ್ಟೆಂಟ್ ಹಾಗೂ ಈ ಬೈಕ್ ವಿಶೇಷತೆ ಇಲ್ಲಿದೆ. ಮುಂಬೈ(ಏ.22):ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ಭಾರತ್, ಜೂನ್ 5 ರಂದು ಬಿಡುಗಡೆಯಾಗಲಿದೆ. ಈದ್ ಹಬ್ಬದ ದಿನ ಬಹುಕೋಟಿ ಚಿತ್ರ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅದ್ಬುತವಾಗಿ ಮೂಡಿ ಬಂದಿರುವ ಈ ಟ್ರೈಲರ್‌ನಲ್ಲಿ ಸಲ್ಮಾನ್ ಖಾನ್ ಟ್ರಿಯಂಪ್ ಬೊನ್ನೆವಿಲ್ಲಿ T120 ಬೈಕ್ ಸ್ಟಂಟ್ ಎಲ್ಲರ ಗಮನೆಸೆಳೆದಿದೆ. ಇದನ್ನೂ ಓದಿ:ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಬ್ರಿಟೀಷ್ ಬೈಕ್- ಬೆಲೆ ಎಷ್ಟು? ಭಾರತ್ ಟ್ರೈಲರ್‌ನಲ್ಲಿ ಸಲ್ಮಾನ್ ಖಾನ್ ಆರಂಭಿಕ ದಿನಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರದಲ್ಲಿ ಸಲ್ಮಾನ್ ಖಾನ್ ಟ್ರಿಯಂಪ್ ಬೊನ್ನೆವಿಲ್ಲಿ T120 ಬೈಕ್ ಮೇಲೆ ಮರಣ ಭಾವಿಯಲ್ಲಿ ರೌಂಡ್ ಹೊಡೆಯೋ ದೃಶ್ಯವಿದೆ. ಬಳಿಕ 2 ಕಾರುಗಳ ಮಧ್ಯೆ ಸಲ್ಮಾನ್ ಸ್ಟಂಟ್ ಮಾಡುವ ದೃಶ್ಯ ಬಳಸಲಾಗಿದೆ. ಈ ಸ್ಟೆಂಟ್‌ಗಳಲ್ಲಿ ಸಲ್ಮಾನ್ ಖಾನ್ ಟ್ರಿಯಂಪ್ ಬೊನ್ನೆವಿಲ್ಲಿ T120 ಬೈಕ್ ಬಳಸಲಾಗಿದೆ. ಇದನ್ನೂ ಓದಿ: ಡ್ಯೂಕ್ - ಬೆಲೆ ಹೆಚ್ಚಳ- ಇಲ್ಲಿದೆ ನೂತನ ದರ ಪಟ್ಟಿ! ಟ್ರಿಯಂಪ್ ಬೊನ್ನೆವಿಲ್ಲಿ T120 ಬೈಕ್ ಬೆಲೆ 10.37 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಬೈಕ್ ಪ್ರತಿ ಲೀಟರ್ ಪೆಟ್ರೋಲ್‌ಗೆ 18 ಲೀಟರ್ ಮೈಲೇಜ್ ನೀಡಲಿದೆ. 1200.0 , 2 ಸಿಲಿಂಡರ್ ಹೊಂದಿದ್ದು, 79 (@ 6550 ) ಪವರ್ ಹಾಗೂ 105 (@ 3100 ) ಪೀಕ್ ಟಾರ್ಕ್ ಉತ್ಪಾದಿಸಲಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ. ಇದನ್ನೂ ಓದಿ:ಎಪ್ರಿಲಿಯಾ ಸ್ಟ್ರೋಮ್ 125 ಆಟೋಮ್ಯಾಟಿಕ್ ಸ್ಕೂಟರ್ ಲಾಂಚ್! ಡ್ಯುಯೆಲ್ ಚಾನೆಲ್ (ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್), 17 ಇಂಚಿನ ಆಲೋಯ್ ವೀಲ್ಹ್, 14.5 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಗರಿಷ್ಠ ಸ್ಪೀಡ್ 261 . ಬಾಲಿವುಡ್ ಹಲವು ಸೆಲೆಬ್ರೆಟಿಗಳು ಟ್ರಿಯಂಪ್ ಬೈಕ್ ಹೊಂದಿದ್ದಾರೆ.