ಹೊಂಡಾ CBR650R ಸ್ಪೋರ್ಟ್ ಬೈಕ್ ಬಿಡುಗಡೆ! ಹೊಂಡಾ CBR650R ಸ್ಪೋರ್ಟ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಬಲಿಷ್ಠ ಎಂಜಿನ್, ಗರಿಷ್ಠ ಪವರ್ ಹೊಂದಿರುವ ನೂತನ ಬೈಕ್ ಆಧುನಿಕ ತಂತ್ರಜ್ಞಾನ ಒಳಗೊಂಡಿದೆ. ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ. ನವದೆಹಲಿ(ಏ.22):ಹೊಂಡಾ ಮೋಟರ್‌ಸೈಕಲ್ & ಸ್ಕೂಟರ್ ಇಂಡಿಯಾ ಇದೀಗ ನೂತನ ಸ್ಪೋರ್ಟ್ ಬೈಕ್ ಬಿಡುಗಡೆ ಮಾಡಿದೆ. ಹೊಂಡಾ CBR650R ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. 2 ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ. ಹೊಂಡಾ CBR650F ಬೈಕ್ ಬದಲು ಇದೀಗ ನೂತನ CBR650F ಬೇಕ್ ಬಿಡುಗಡೆಯಾಗಿದೆ. ಇದನ್ನೂ ಓದಿ:ಶೀಘ್ರದಲ್ಲೇ ಬಜಾಜ್ ಅವೆಂಜರ್ 160 ಬಿಡುಗಡೆ- 180 ಸ್ಥಗಿತ! ಭಾರತದಲ್ಲಿ ಬಿಡುಗಡೆಯಾಗಿರುವ ಹೊಂಡಾ CBR650R ಬೈಕ್ 649 , ಲಿಕ್ವಿಡ್ ಕೂಲ್ಡ್, ಇನ್‌ಲೈನ್ 4 ಸಿಲಿಂಡರ್ ಎಂಜಿನ್ ಹೊಂದಿದ್ದು, 87 ಪವರ್ (@11,500 ) ಹಾಗೂ 60.1 (@8000 ) ಪೀಕ್ ಟಾರ್ಕ್ ಉತ್ಪಾದಿಸಲಿದೆ. ವಿದೇಶಗಳಲ್ಲಿ ಬಿಡುಗಡೆಯಾಗಿರು ಹೊಂಡಾ CBR650R ಬೈಕ್ 94 ಪವರ್ ಹಾಗೂ 64 ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದನ್ನೂ ಓದಿ:ದ್ವಿಚಕ್ರ ವಾಹನದ ಜೊತೆಗೆ ಹೆಲ್ಮೆಟ್ ಖರೀದಿ ಕಡ್ಡಾಯ! ಹೊಂಡಾ CBR650R ಸ್ಪೋರ್ಟ್ ಬೈಕ್ ಬೆಲೆ 7.7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಡ್ಯುಯೆಲ್ ಚಾನೆಲ್ (ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್), ಹೊಂಡಾ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಈ ಬೈಕ್‌ನಲ್ಲಿದೆ. ಗ್ರ್ಯಾಂಡ್ ಪ್ರಿಕ್ಸ್ ರೆಡ್ ಹಾಗೂ ಗನ್‌ಪೌಡರ್ ಬ್ಲಾಕ್ ಕಲರ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ.