ಹೊಂಡಾ ಎಲೆಕ್ಟ್ರಿಕ್ ಕಾರು ಅನಾವರಣ- 340 ಕಿ.ಮಿ ಮೈಲೇಜ್! ಹಲವು ಕಾರು ಕಂಪನಿಗಳು ಇದೀಗ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಹೊಂಡಾ ಕೂಡ ನೂತನ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ಮಾಹಿತಿ. ನವದೆಹಲಿ(ಏ.21):ಹೊಂಡಾ ನೂತನ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಶಾಂಘೈ ಆಟೋ ಮೋಟಾರ್ ಶೋನಲ್ಲಿ ಹೊಂಡಾ ಕಾನ್ಸೆಪ್ಟ್ ಕಾರು ಅನಾವರಣ ಮಾಡಲಾಗಿದೆ. ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 340 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಕಾರು ಇದಾಗಿದ್ದು, ಇದೀಗ ಇತರ ಎಲೆಕ್ಟ್ರಿಕ್ ಕಾರಿಗೆ ಭಾರಿ ಪೈಪೋಟಿ ನೀಡಲಿದೆ. ಇದನ್ನೂ ಓದಿ:ಹೆಚ್ಚುವರಿ ಫೀಚರ್ಸ್, ಗರಿಷ್ಠ ಸುರಕ್ಷತೆ- ನೂತನ ಮಾರುತಿ ಅಲ್ಟೋ 800 ಫೇಸ್‌ಲಿಫ್ಟ್! ಹೊಂಡಾ ನೂತನ ಎಲೆಕ್ಟ್ರಿಕ್ ಕಾರನ್ನು ಚೀನಾ ಹೊಂಡಾ ಕಂಪನಿ ತಯಾರಿಸಿದೆ. 2019ರ ಅಂತ್ಯದಲ್ಲಿ ಚೀನಾದಲ್ಲಿ ಈ ಕಾರು ಮೊದಲು ಬಿಡುಗಡೆಯಾಗಲಿದೆ. ಬಳಿಕ ಭಾರತಕ್ಕೆ ಪ್ರವೇಶಸಿಲಿದೆ. ಇಷ್ಟೇ ಅಲ್ಲ ಹೊಂಡಾ ಕಂಪನಿ ಬರೊಬ್ಬರಿ 20 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಇದನ್ನೂ ಓದಿ:ಮಾರುತಿ ಡಿಸೈರ್ ಪ್ರತಿಸ್ಪರ್ಧಿ ವೋಕ್ಸ್‌ವ್ಯಾಗನ್ ಎಮೋ ಕಾರು ಬಿಡುಗಡೆ! ನೂತನ ಹೊಂಡಾ ಎಲೆಕ್ಟ್ರಿಕ್ ಕಾರಿನಲ್ಲಿ -1 ಎಂಜಿನ್ ಬಳಸಲಾಗಿದೆ. 161 ಪವರ್ ಹಾಗೂ 280 ಎಲೆಕ್ಟ್ರಿಕ್ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 53.6 ಬ್ಯಾಟರಿ ಬಳಸಲಾಗಿದೆ. ಈ ಕಾರಿನ ಬೆಲೆ ಇನ್ನೂ ಬಹಿರಂಗವಾಗಿಲ್ಲ.