20 ಲಕ್ಷ ಸ್ಫಟಿಕದಿಂದ ಕಾರು ಮಾಡಿಫೈ ಮಾಡಿದ ಸೆಲೆಬ್ರೆಟಿ -ಬೇಕಾ ಬಿಟ್ಟಿ ಖರ್ಚಿಗೆ ತರಾಟೆ! ಕಾರಿನ ಬಣ್ಣ ಬದಲಾಯಿಸಲು ಹಾಗೂ ಝಗಮಗಿಸುವ ಮಾಡಿಫೈಗಾಗಿ ಬರೋಬ್ಬರಿ 20 ಲಕ್ಷ ಸ್ಫಟಿಕ ಬಳಸಲಾಗಿದೆ. ಇದರ ಬೆಲೆ ಸುಮಾರು 10 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸೆಲೆಬ್ರೆಟಿ ಕಾರು ಮಾಡಿಫಿಕೇಶನ್‌ಗೆ ವಿರೋಧ ವ್ಯಕ್ತವಾಗಿದೆ. ಲಂಡನ್(ಏ.13):ಐಷಾರಾಮಿ ಹಾಗೂ ದುಬಾರಿ ಲ್ಯಾಂಬೋರ್ಗಿನಿ ಅವೆಂಟಡೂರ್ ಕಾರನ್ನು ಮಾಡಿಫಿಕೇಶನ್ ಮಾಡಿ ಎಲ್ಲರ ಕಣ್ಣ ಕುಕ್ಕುವಂತೆ ಮಾಡಲಾಗಿದೆ. ಬರೋಬ್ಬರಿ 20 ಲಕ್ಷ ಸ್ಫಟಿಕದಿಂದ ಕಾರನ್ನು ಮಾಡಿಫೈ ಮಾಡಲಾಗಿದೆ. ಝಗಮಗಿಸುತ್ತಿರುವ ಈ ಕಾರು ಇದೀಗ ಯಾವುದೇ ರಸ್ತೆಯಲ್ಲಿ ಓಡಾಡಿದರೂ ಎಲ್ಲರ ಗಮನಸೆಳೆಯುತ್ತಿದೆ. ಇದನ್ನೂ ಓದಿ:2018-19ರಲ್ಲಿ ಗರಿಷ್ಠ ಮಾರಾಟ - ಮಾರುತಿ ಸುಜುಕಿಯದ್ದೇ 'ಕಾರು'ಬಾರು! ಲ್ಯಾಂಬೋರ್ಗಿನಿ ಅವೆಂಟಡೂರ್ ಕಾರಿನ ಗರಿಷ್ಠ ಬೆಲೆ 6.25 ಕೋಟಿ ರೂಪಾಯಿ. ಈ ಕಾರನ್ನು ಖರೀದಿಸಿದ ರಷ್ಯಾದ ಮೂಲದ ಇನ್‌ಸ್ಟಾಗ್ರಾಂ ಸೆಲೆಬ್ರೆಟಿ ದಾರಿಯಾ ರಾಡಿಯೋನೊವಾ, ಬಳಿಕ ಕಾರಿನ ಬಣ್ಣ ಬದಲಾಯಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ 20 ಲಕ್ಷ ಸ್ಫಟಿಕವನ್ನು ಬಳಸಲಾಗಿದೆ. ಹೀಗಾಗಿ ಬಣ್ಣ ಬದಲಾಯಿಸಲು 10 ಕೋಟಿ ರೂಪಾಯಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದಾಳೆ. 🙌🏻 💎 ❤️❤️❤️❤️ # # # #dar11a #ba11byy #amazingcars247 # # # #cars247 # # # # # # # # (@) 11, 2019 3:56am ಸೆಲೆಬ್ರೆಟಿ ಬಹುನಿರೀಕ್ಷಿತ ಕಾರಿಗೆ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಾರಿನ ಬಣ್ಣ ಸರಿಯಾಗಿಲ್ಲ, ಹೊಂದುತ್ತಿಲ್ಲ, ಸಾಧರಣ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ಬದಲು ಮಕ್ಕಳ ಆರೋಗ್ಯ, ಶಿಕ್ಷಣ, ಬಡವರಿಗೆ ನೆರವು ನೀಡಲು ಈ ಹಣ ಉಪಯೋಗಿಸಬಹುತ್ತಿತ್ತು ಎಂದಿದ್ದಾರೆ. ಒಂದು ಗ್ರಾಮನ್ನು ದತ್ತು ತೆಗೆದು ನೆರವಾಗಬಹುದಿತ್ತು ಎಂದಿದ್ದಾರೆ. 💣💣💣💣💣 🖤🖤🖤 🐆 # # # # # # #dar11a #ba11byy # (@) 12, 2019 9:31am