1.71 ಕೋಟಿ ರೂ ಮೌಲ್ಯದ ಮರ್ಸಡಿಸ್ ಬೆಂಜ್ ಕಾರು ಖರೀದಿಸಿದ ಸೈನಾ ನೆಹ್ವಾಲ್! ಭಾರತದ ಬ್ಯಾಡ್ಮಿಂಟನ್ ಜೋಡಿಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ದುಬಾರಿ ಬೆಲೆಯ ಮರ್ಸಡಿಸ್ ಬೆಂಜ್ ಎಸ್‌ಯುವಿ ಕಾರು ಖರೀದಿಸಿದ್ದಾರೆ. ಕ್ರಿಕೆಟಿಗರು, ಕ್ರೀಡಾಪಟುಗಳು, ಸೆಲೆಬ್ರೆಟಿಗಳು ಹೆಚ್ಚಾಗಿ ಈ ಕಾರು ಖರೀದಿಸಲು ಕಾರಣವೇನು? ಭಾರತದ ಬ್ಯಾಡ್ಮಿಂಟನ್ ಜೋಡಿಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ದುಬಾರಿ ಬೆಲೆಯ ಮರ್ಸಡಿಸ್ ಬೆಂಜ್ ಎಸ್‌ಯುವಿ ಕಾರು ಖರೀದಿಸಿದ್ದಾರೆ. ಕ್ರಿಕೆಟಿಗರು, ಕ್ರೀಡಾಪಟುಗಳು, ಸೆಲೆಬ್ರೆಟಿಗಳು ಹೆಚ್ಚಾಗಿ ಈ ಕಾರು ಖರೀದಿಸಲು ಕಾರಣವೇನು? ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ ದಂಪತಿ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಈ ಬಾರಿ 1.71 ಕೋಟಿ ರೂಪಾಯಿ ಮೌಲ್ಯದ ಮರ್ಸಡಿಸ್ ಬೆಂಜ್ ಎಸ್‌ಯುವಿ ಕಾರು ಬ್ಯಾಡ್ಮಿಂಟನ್ ತಾರೆಯ ಅತಿಥಿಯಾಗಿದೆ. ಸೈನಾ ಹಾಗೂ ಕಶ್ಯಪ್ ದುಬಾರಿ ಮೌಲ್ಯದ ಐಷಾರಾಮಿ ಮರ್ಸಿಡೀಸ್ ಕಾರು ಖರೀದಿಸಿದ್ದಾರೆ. ಈ ಮೂಲಕ ಸೈನಾ ದುಬಾರಿ ಕಾರುಗಳ ಸಂಗ್ರಹ ಪಟ್ಟಿಗೆ ಮತ್ತೊಂದು ಸೇರಿಕೊಂಡಿದೆ. ಮರ್ಸಡಿಸ್ ಬೆಂಜ್ ಕಾರಿನ ಜೊತೆಗೆ ಸೈನಾ ನೆಹ್ವಾಲ್ ಬಳಿ X6, 3 ಸೀರಿಸ್, ಮಿನಿ ಕೂಪರ್, ಹ್ಯುಂಡೈ ಕ್ರೇಟಾ ಕಾರುಗಳನ್ನೂ ಹೊಂದಿದ್ದಾರೆ. ಮರ್ಸಡಿಸ್ ಬೆಂಜ್ ಕಾರು 21 ಆಲೋಯ್ ವೀಲ್, 12.3 ಇಂಚಿನ ಇನ್ಫೋಟೈನ್ಮೆಂಟ್ ಟಚ್‌ಸ್ಕ್ರೀನ್, 360 ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಸೀಟ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. 3.0 ಲೀಟರ್, 6 ಸಿಲಿಂಡರ್, ಟ್ವಿನ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ಮರ್ಸಡಿಸ್ ಬೆಂಜ್ ಕಾರು 435 ಪವರ್ ಹಾಗೂ 520 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 0-100 ಕಿ.ಮೀ ವೇಗವನ್ನು ಕೇವಲ 3.8 ಸೆಕೆಂಡ್‌ನಲ್ಲಿ ಪಡೆಯಲಿದೆ. ಇನ್ನು ಮರ್ಸಡಿಸ್ ಬೆಂಜ್ ಕಾರಿನ ಗರಿಷ್ಠ ವೇಗ 280 ಕಿಲೋಮೀಟರ್ ಪ್ರತಿ ಗಂಟೆಗೆ. ಗರಿಷ್ಠ ಸುರಕ್ಷತಾ ಫೀಚರ್ಸ್ ಹೊಂದಿದೆ. ಎಬಿಎಸ್, ಇಬಿಡಿ ಬ್ರೇಕ್, ಹಿಲ್ ಹೋಲ್ಡ್ ಅಸಿಸ್ಟ್, 7 ಏರ್‌ಬ್ಯಾಗ್, ಗ್ಲೋಬಲ್ ಎನ್‌ಕಾಪ್ ಕ್ರಾಶ್ ಟೆಸ್ಟ್ ರೇಟಿಂಗ್ಸ್ ಸೇರಿದಂತೆ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡಲಿದೆ. ಕ್ಲೈಮೇಟ್ ಕಂಟ್ರೋಲ್, 13 ಸ್ಪೀಕರ್, ವೆಂಟಿಲೇಟೆಡ್ ಸೀಟ್, 64 ವಿವಿಧ ಬಣ್ಣದ ಆ್ಯಂಬಿಯೆಂಟ್ ಲೈಟ್ ಸೇರಿದಂತೆ ಹಲವು ಫೀಚರ್ಸ್ ಈ ಮರ್ಸಡಿಸ್ ಬೆಂಜ್ ಕಾರಿನಲ್ಲಿದೆ.