2019ರ ಬಜಾಜ್ ಡೊಮಿನಾರ್ 400 ಬೈಕ್ ಬೆಲೆ ಬಹಿರಂಗ! 2019 ಬಜಾಜ್ ಡೊಮಿನಾರ್ ಬೆಲೆ ಬಹಿರಂಗವಾಗಿದೆ. ಹೆಚ್ಚುವರಿ ಫೀಚರ್ಸ್, ಹೊಸ ಬಣ್ಣಗಳಲ್ಲಿ ನೂತನ ಬಜಾಜ್ ಡೊಮಿನಾರ್ ಲಭ್ಯವಿದೆ. ಹಿಂದಿನ ಡೊಮಿನಾರ್ ಹಾಗೂ ನೂತನ ಡೊಮಿನಾರ್ ಬೆಲೆ ಏನು? ಇಲ್ಲಿದೆ ವಿವರ. ನವದೆಹಲಿ(ಮಾ.31):ಬಹುನಿರೀಕ್ಷಿತ ಬಜಾಜ್ ಡೊಮಿನಾರ್ 400 ಬಿಡುಗಡೆಗೆ ಸಜ್ಜಾಗಿದೆ. ಬೈಕ್ ಮಾರುಕಟ್ಟೆ ಪ್ರವೇಶಿಸೋ ಮುನ್ನ ಡೊಮಿನಾರ್ ಬೈಕ್ ಬೆಲೆ ಬಹಿರಂಗವಾಗಿದೆ. ಬೈಕ್ ಈಗಾಗಲೇ ಡೀಲರ್‌ಗಳ ಕೈ ಸೇರಿದೆ. ಇದರ ಬೆನ್ನಲ್ಲೇ ಬೈಕ್ ಬೆಲೆ ಕೂಡ ಬಹಿರಂಗವಾಗಿದೆ. ಈ ಹಿಂದಿನ ಡೊಮಿನಾರ್ ಬೈಕ್ ಬೆಲೆಗಿಂತ ನೂತನ ಬೈಕ್ ಬೆಲೆ 10,000 ರೂಪಾಯಿ ಹೆಚ್ಚಳವಾಗಿದೆ. ಇದನ್ನೂ ಓದಿ: ವಿಕ್ಟರ್ ಬೈಕ್ ಬಿಡುಗಡೆ- ಬೆಲೆ ಎಷ್ಟು? 2019ರ ಬಜಾಜ್ ಡೊಮಿನಾರ್ 400 ಬೈಕ್ ಬೆಲೆ 1.73 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಹಿಂದಿನ ಡೊಮಿನಾರ್ ಬೈಕ್ ಬೆಲೆ 1.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 2019 ಬಜಾಜ್ ಡೊಮಿನಾರ್ 400 ಬೈಕ್‌ನಲ್ಲಿ ಎಂಜಿನ್ ಬದಲು ಎಂಜಿನ್ ಬಳಸಲಾಗಿದೆ. 35 ಪವರ್(@8000 ) 39 ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ:ಬಜಾಜ್‌ ಪ್ಲಾಟಿನಾ 100 ಬೈಕ್ ಬಿಡುಗಡೆ- ಬೆಲೆ ಎಷ್ಟು? ನೂತನ ಬಜಾಜ್ ಡೊಮಿನಾರ್ ಹಸಿರು ಬಣ್ಣದಲ್ಲೂ ಲಭ್ಯವಿದೆ. ನೂತನ ಡೊಮಿನಾರ್ ಬೈಕ್ ರಾಯಲ್ ಎನ್‌ಫೀಲ್ಡ್ 350, ಹೊಂಡಾ 300R, 250 ಡ್ಯೂಕ್, 310 , ಆಪಾಚೆ 310 ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.