ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿ- ಬರುತ್ತಿದೆ ಟೊಯೊಟಾ ಕಾರು! ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಟೊಯೊಟಾ ಕಾರು ಬಿಡುಗಡೆಯಾಗುತ್ತಿದೆ ಕಾಂಪಾಕ್ಟ್ ಕ್ರಾಸ್‌ಓವರ್ ಕಾರು ಪ್ರೀಯರನ್ನು ಮೋಡಿ ಮಾಡಲಿದೆ. ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ. ನವದೆಹಲಿ(ಮಾ.17):ಹ್ಯುಂಡೈ ಕ್ರೆಟಾ ಭಾರತದಲ್ಲಿ ಕಾರು ಪ್ರೀಯರನ್ನ ಮೋಡಿ ಮಾಡಿದೆ. ಕಾರು ವಿಭಾಗದಲ್ಲಿ ಕ್ರೆಟಾ ಅತ್ಯುತ್ತಮ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಟೊಯೊಟಾ ಕಾರು ಬಿಡುಗಡೆ ಮಾಡುತ್ತಿದೆ. ಇದನ್ನೂ ಓದಿ:ಮಾರುತಿ ಸುಜುಕಿ ಎಸ್ಟೀಮ್ ಕಾರಿಗೆ ಹೊಸ ಲುಕ್ - ಸಂಕಷ್ಟದಲ್ಲಿ ಮಾಲೀಕ! ಕಾಂಪಾಕ್ಟ್ ಕ್ರಾಸ್ಓವರ್ ಕಾರು ಉತ್ಪಾದನೆ ಮಾಡಲು ಟೊಯೊಟಾ ತಯಾರಿ ಆರಂಭಿಸಿದೆ. 1.2-ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಹಾಗೂ 1.8 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ವೇರಿಯೆಂಟ್‌ನಲ್ಲಿ ನೂತನ ಕಾರು ಬಿಡುಗಡೆಯಾಗಲಿದೆ. ಇದನ್ನೂ ಓದಿ:ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು! 2020ಕ್ಕೆ ಟೊಯೊಟಾ ನೂತನ ಕಾರು ಬಿಡುಗಡೆಯಾಗಲಿದೆ. ಮೊದಲು ಥಾಯ್‌ಲೆಂಡ್‌ನಲ್ಲಿ ಕಾರು ಬಿಡುಗಡೆಯಾಗಲಿದ್ದು, ಬಳಿಕ ಭಾರತದ ರಸ್ತೆಗಿಳಿಯಲಿದೆ. ಸದ್ಯ ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿಯನ್ನು ಕಂಪನಿ ಬಹಿರಂಗ ಪಡಿಸಿಲ್ಲ.