ಸಣ್ಣ ಕಾರಿಗೆ ಪ್ರತಿಸ್ಪರ್ಧಿ- ಬಜಾಜ್ ಕ್ಯೂಟ್ ಕಾರಿನ ಬೆಲೆ ಬಹಿರಂಗ! ಬಜಾಜ್ ಕಂಪನಿಯ ಕ್ಯೂಟ್ ಕಾರಿನ ಬೆಲೆ ಬಹಿರಂಗವಾಗಿದೆ. ನೂತನ ಕಾರು 2 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಎರಡು ಕಾರುಗಳ ಬೆಲೆ ಬಹಿರಂಗವಾಗಿದೆ. ಇಲ್ಲಿದೆ ಹೆಚ್ಚಿನ ವಿವರ. ಮುಂಬೈ(ಮಾ.24):ಬಜಾಜ್ ಕಂಪನಿಯ ನೂತನ ಕ್ಯೂಟ್ ಕ್ವಾರ್ಡ್ರಿಸೈಕಲ್ ಬೆಲೆ ಬಹಿರಂಗಗೊಂಡಿದೆ. ಸಣ್ಣ ಕಾರಿನ ರೂಪದಲ್ಲಿರುವ ಬಜಾಜ್ ಕ್ಯೂಟ್ ಇದೀಗ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. 2018ರ ನವೆಂಬರ್‌ನಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆಯಿಂದ ಪರವಾನಗಿ ಪಡೆದಿರುವ ಬಜಾಜ್ ಕ್ಯೂಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಇದನ್ನೂ ಓದಿ:ಟಾಟಾ ನ್ಯಾನೋ ಬದಲು ಬರುತ್ತಿದೆ ಹೊಸ ಸಬ್-ಟಿಯಾಗೋ ಕಾರು! ನೂತನ ಬಜಾಜ್ ಕ್ಯೂಟ್ ಬೆಲೆ 2.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದರಲ್ಲಿ ವೇರಿಯೆಂಟ್ ಕೂಡ ಲಭ್ಯವಿದೆ. ಇದರ ಬೆಲೆ 2.83 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇದು ಇಂಧನ ವೇರಿಯೆಂಟ್ ಕ್ಯೂಟ್ ಕಾರಿಗಿಂತ 20,000 ರೂಪಾಯಿ ಹೆಚ್ಚಾಗಲಿದೆ. ಇದನ್ನೂ ಓದಿ:ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು! ಭಾರತದ 20 ರಾಜ್ಯಗಳಲ್ಲಿ ಬಜಾಜ್ ಕ್ಯೂಟ್ ಕಮರ್ಶಿಯಲ್ ಬಳಕೆ ಮಾಡಲು ಅನುಮತಿ ಸಿಕ್ಕಿದೆ. ಇನ್ನ 15 ರಾಜ್ಯಗಳಲ್ಲಿ ಖಾಸಗಿ ಬಳಕೆಗೆ ಬಜಾಜ್ ಕ್ಯೂಟ್ ಬಳಕೆ ಮಾಡಲು ಅನುಮತಿ ಸಿಕ್ಕಿದೆ. ಈ ಕಾರಿನ ತೂಕ 425 . 216cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. 13.2 ಪವರ್(@ 5,500 )ಹಾಗೂ 18.9 ಟಾರ್ಕ್(@4,000 ) ಉತ್ಪಾದಿಸಲಿದೆ.