ಮರ್ಸಡೀಸ್ ಬೆಂಝ್ ಕಾರು ಖರೀದಿಸಿದ ಬಾಲಿವುಡ್ ನಟ! ಬಾಲಿವುಡ್ ನಟ ನೂತನ ಮರ್ಸಡೀಸ್ ಬೆಂಝ್ ಕಾರು ಖರೀದಿಸಿದ್ದಾರೆ. ಐಷಾರಾಮಿ ಹಾಗೂ ಗರಿಷ್ಠ ಭದ್ರತೆಯ ಈ ಕಾರಿನ ವಿಶೇಷತೆ ಏನು? ಈ ಕಾರನ್ನು ಖರೀದಿಸಿ ನಟ ಯಾರು? ಇಲ್ಲಿದೆ ವಿವರ. ಮುಂಬೈ(ಮಾ.15):ಬಾಲಿವುಡ್ ಸೆಲೆಬ್ರೆಟಿಗಳು, ಸ್ಯಾಂಡಲ್‌ವುಡ್ ನಟ-ನಟಿಯರು ಹೆಚ್ಚಾಗಿ ಮರ್ಸಡೀಸ್ ಬೆಂಝ್ ಕಾರಿನ ಮೊರೆ ಹೋಗುತ್ತಾರೆ. ಸುಖಕರ, ಆರಾಮದಾಯ ಹಾಗೂ ಗರಿಷ್ಠ ಭದ್ರತೆ ಹೊಂದಿರುವ ಮರ್ಸಡೀಸ್ ಬೆಂಜ್ ಕಾರು ರಾಜಕಾರಣಿಗಳಿಗೂ ಅಚ್ಚು ಮೆಚ್ಚು. ಇದೀಗ ಬಾಲಿವುಡ್ ನಟ ರನ್‌ದೀಪ್ ಹೂಡ ಮರ್ಸಡೀಸ್ ಬೆಂಝ್ ಕಾರು ಖರೀದಿಸಿದ್ದಾರೆ. ಇದನ್ನೂ ಓದಿ:2 ತಿಂಗಳಲ್ಲಿ 13 ಸಾವಿರ ಮಹೀಂದ್ರ XUV300 ಕಾರು ಬುಕ್- ಬ್ರಿಜಾಗೆ ಪೈಪೋಟಿ! ಮರ್ಸಡೀಸ್ ಬೆಂಝ್ ಕಾರಿನ ಬೆಲೆ 85.57 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕಾರಿನಲ್ಲಿ ಎರಡು ವೇರಿಯೆಂಟ್ ಲಭ್ಯವಿದೆ. ಮರ್ಸಡೀಸ್ ಬೆಂಝ್ 350d ಹಾಗೂ ಮರ್ಸಡೀಸ್ ಬೆಂಝ್ 400 ಕಾರು ಹೆಚ್ಚು ಜನಪ್ರಿಯವಾಗಿದೆ. # # @ # # @ घूम्मण चाल्लैगा ? (@) 12, 2019 6:58am ಇದನ್ನೂ ಓದಿ:ಪ್ರಚಾರದಲ್ಲಿ ರೋಡ್ ಶೋ, ಬೈಕ್ ರ‍್ಯಾಲಿ ನಿಷೇಧ- ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ!350d ಮರ್ಸಡೀಸ್ ಬೆಂಝ್ ಕಾರು 3.0-ಲೀಟರ್ ಟರ್ಬೋಚಾರ್ಜರ್ V6 ಡೀಸೆಲ್ ಎಂಜಿನ್, 225 ಪವರ್ ಹಾಗೂ 620 ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿಗದೆ. ಇನ್ನು ಪೆಟ್ರೋಲ್ ಎಂಜಿನ್ ಕಾರು 3.0 ಲೀಟರ್ V6 ಪೆಟ್ರೋಲ್ ಎಂಜಿನ್, 329 ಪವರ್ ಹಾಗೂ 480 ಪೀಕ್ ಟಾರ್ಕ್ 9 ಸ್ಪೀಡ್ ಆಟೋಮ್ಯಾಟಿಕ್ ಟ್ಸಾನ್ಸಮಿಶನ್ ಹೊಂದಿದೆ.