ಕಡಿಮೆ ಬೆಲೆಗೆ ಯಮಹಾ ಫ್ಯಾಸಿನೋ ಡಾರ್ಕ್ ನೈಟ್ ಸ್ಕೂಟರ್ ಬಿಡುಗಡೆ! ಯಮಹಾ ಸ್ಕೂಟರ್ ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಫ್ಯಾಸಿನೋ ಹೊಸ ಫೀಚರ್ಸ್ ಹಾಗೂ ಹೊಸ ಬಣ್ಣದಲ್ಲಿ ಫ್ಯಾಸಿನೋ ರಸ್ತೆಗಿಳಿದಿದೆ. ಇದರ ಬೆಲೆ ಹಾಗೂ ಇತರ ವಿಶೇಷತೆ ಇಲ್ಲಿದೆ. ನವದೆಹಲಿ(ಮಾ.11):ಯಮಹಾ ಸ್ಕೂಟರ್ ವಿಭಾಗದಲ್ಲಿ ಫ್ಯಾಸಿನೋ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದೀಗ ಯಮಹಾ ಫ್ಯಾಸಿನೋ ಡಾರ್ಕ್ ನೈಟ್ ಎಡಿಶನ್ ಸ್ಕೂಟರ್ ಬಿಡುಗಡೆಯಾಗಿದೆ. ಹೊಸ ಫೀಚರ್ಸ್ ಹಾಗೂ ಅತ್ಯಾಕರ್ಷಕ ಲುಕ್‌ನಲ್ಲಿ ಈ ಸ್ಕೂಟರ್ ಮತ್ತೆ ಗ್ರಾಹಕರನ್ನ ಮೋಡಿ ಮಾಡೋ ವಿಶ್ವಾಸದಲ್ಲಿದೆ. ಇದನ್ನೂ ಓದಿ:ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ -ಬರುತ್ತಿದೆ ಬಜಾಜ್ ಬೈಕ್! ಡಾರ್ಕ್ ನೈಟ್ ಎಡಿಶನ್ ಸ್ಕೂಟರ್ ಡಾರ್ಕ್ ಬ್ಲಾಕ್ ಹಾಗೂ ಮರೂನ್ ಸೀಟ್ ಹೊಂದಿದೆ. ಯುನಿಫೈಡ್ ಬ್ರೇಕಿಂಗ್ ಸಿಸ್ಟಮ್() ಇದು ಹೊಂಡಾದ ಕಾಂಬಿ ಬ್ರೇಕಿಂಗ್ ಸಿಸ್ಟಮ್() ಸರಿಸಮವಾಗಿದೆ. ಇನ್ನು ಎಂಜಿನ್‍ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದನ್ನೂ ಓದಿ:ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು! 113 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್, 7 ಪವರ್ ಹಾಗೂ 8.1 ಪೀಕ್ ಪವರ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ನೂತನ ಫ್ಯಾಸಿನೋ ಡಾರ್ಕ್ ನೈಟ್ ಎಡಿಶನ್ ಸ್ಕೂಟರ್ ಬೆಲೆ 56,793 ರೂಪಾಯಿ(ಎಕ್ಸ್ ಶೋ ರೂಂ).