ಹೊಸ ಅವತಾರದಲ್ಲಿ ಹೊಂಡಾ ಯುನಿಕಾರ್ನ್ ಬೈಕ್ ಬಿಡುಗಡೆ! ಹೊಸ ಅವತಾರದಲ್ಲಿ ಹೊಂಡಾ ಯುನಿಕಾರ್ನ್ ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ ಬೆಲೆ ಕೊಂಚ ಏರಿಕೆಯಾಗಿದೆ. ನೂತನ ಬೈಕ್ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ. ನವದೆಹಲಿ(ಮಾ.15):ಹೊಂಡಾ ಮೋಟರ್‌ಸೈಕಲ್ & ಸ್ಕೂಟರ್ ಇಂಡಿಯಾ() ಯುನಿಕಾರ್ನ್ 150 ಬೈಕ್ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಅಳವಡಿಸಿ ನೂತನ ಹೊಂಡಾ ಯುನಿಕಾರ್ನ್ ಬೈಕ್ ಬಿಡುಗಡೆಯಾಗಿದೆ. ಇದನ್ನೂ ಓದಿ:ಯಮಹಾ -15 ಬೈಕ್ ಬಿಡುಗಡೆ- ಡ್ಯೂಕ್, ಅಪಾಚೆಗೆ ಪೈಪೋಟಿ! ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿರುವ ನೂತನ ಹೊಂಡಾ ಯುನಿಕಾರ್ನ್ ಬೈಕ್ ಬೆಲೆ 78,815 ರೂಪಾಯಿ(ಎಕ್ಸ್ ಶೋ ರೂಂ). 149.2 2cc, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 12.91bhp ಪವರ್(@ 8,000rpm) ಹಾಗೂ 12.80Nm ಟಾರ್ಕ್(@ 5,500rpm)ಟಾರ್ಕ್ ಉತ್ಪಾದಿಸಲಿದೆ. ಇದನ್ನೂ ಓದಿ:ಬಜಾಜ್ ಪಲ್ಸಾರ್ 180F ಬಿಡುಗಡೆ - ಪೈಪೋಟಿ ಶುರು! ಫ್ರಂಟ್ 260mm ಡಿಸ್ಕ್ ಹಾಗೂ 130mm ರೇರ್ ಡ್ರಮ್ ಬೇಕ್ ಹೊಂದಿದೆ. 18 ಇಂಚಿನ ಅಲೋಯ್ ವೀಲ್ಹ್ ಹೊಂದಿದೆ. ಬಜಾಜ್ ಪಲ್ಸರ್ 150 ಬೈಕ್‌ಗೆ ಪ್ರತಿಸ್ಪರ್ಧಿಯಾಗಿರುವ ಈ ಬೈಕ್ ಇದೀಗ ಮೂಲಕವೂ ಪೈಪೋಟಿ ನೀಡಲಿದೆ.