ಹಿರೋ 200R ಬೈಕ್ ಆ್ಯಡ್ - ನಿಯಮ ಉಲ್ಲಂಘಿಸಿದ ಕೊಹ್ಲಿ! ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೀರೋ 200R ಬೈಕ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯದ ಈ ಬೈಕ್ ಜಾಹೀರಾತು ಇದೀದ ವಿವಾದಕ್ಕೆ ಕಾರಣವಾಗಿದೆ. ಇಲ್ಲಿದೆ ಹೆಚ್ಚಿನ ವಿವರ. ನವದೆಹಲಿ(ಮಾ.04):ಕಳೆದ ವರ್ಷ ಹಿರೋ ಮೋಟಾರ್ ಕಾರ್ಪ್ ನೂತನ ಹಿರೋ 200R ಬೈಕ್ ಬಿಡುಗಡೆ ಮಾಡಿತ್ತು. ಈ ಬೈಕ್ ಜಾಹೀರಾತಿನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಜಾಹೀರಾತಿನಲ್ಲಿ ವಿರಾಟ್ ಕೊಹ್ಲಿ ( ) ನಿಮಯ ಉಲ್ಲಂಘಿಸಿದ್ದಾರೆ. ಇದನ್ನೂ ಓದಿ:ಮಾರುತಿ ವ್ಯಾಗನ್ಆರ್ ಕಾರಿನ ಬೆಲೆ ಬಹಿರಂಗ! ಭಾರತದಲ್ಲಿ ಟಿವಿ ಜಾಹೀರಾತುಗಳ ಪ್ರಸಾರ ಸ್ವಯಂ ನಿಯಂತ್ರಣ ಸಂಸ್ಥೆ ಪ್ರಕಾರ ವಿರಾಟ್ ಕೊಹ್ಲಿ ಹಲವು ನಿಯಮ ಉಲ್ಲಂಘಿಸಿದ್ದಾರೆ. ಈ ಜಾಹೀರಾತಿನಲ್ಲಿ ಕೊಹ್ಲಿ ರೈಡ್ ಮಾಡಿದ್ದಾರೆ. ಜೊತೆ ಅಪಾಯಕಾರಿ ಸ್ಟಂಟ್‌ಗಳನ್ನೂ ಮಾಡಿದ್ದಾರೆ. ರಸ್ತೆಯಲ್ಲಿ ಇತರ ಬೈಕ್‌ಗಳ ಜೊತೆ ರೇಸ್ ಮಾಡಿದ್ದಾರೆ. ಪಾದಾಚಾರಿ ಸುರಕ್ಷೆತೆಯನ್ನ ಕಡೆಗಣಿಸಿದ್ದಾರೆ. ಇಷ್ಟೇ ಅಲ್ಲ ಎರಡು ಟ್ರಕ್‌ಗಳ ಮಧ್ಯೆ ಬೈಕ್ ಓಡಿಸಿದ್ದಾರೆ. ಈ ಮೂಲಕ ಹಲವು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ:ಹೆಲ್ಮೆಟ್ ಹಾಕದ ವೋಕ್ಸ್‌‌ವ್ಯಾಗನ್ ಕಾರು ಚಾಲಕನಿಗೆ ದಂಡ! ವಿರಾಟ್ ಕೊಹ್ಲಿ ಜಾಹೀರಾತಿನಲ್ಲಿ ಸೆಲೆಬ್ರೆಟಿ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಹೀರೋ ಮೋಟಾರ್ ಕಾರ್ಪ್‌ಗೆ ನೊಟೀಸ್ ನೀಡಿದೆ. ಇಷ್ಟೇ ಅಲ್ಲ ಈ ಜಾಹೀರಾತು ಬದಲಿಸಲು ಸೂಚಿಸಿದೆ. ಈ ಜಾಹೀರಾತಿನಲ್ಲಿ ಈ ಎಲ್ಲಾ ಸ್ಟಂಟ್ ಕೊಹ್ಲಿ ಮಾಡಿಲ್ಲ. ಆದರೆ ಸಂಪೂರ್ಣ ಜಾಹೀರಾತಿನಲ್ಲಿ ಕೊಹ್ಲಿ ಬೈಕ್ ರೈಡ್, ಸ್ಟಂಟ್ ಮಾಡಿರುವ ರೀತಿ ಬಂಬಿಸಲಾಗಿದೆ. ಸೆಲೆಬ್ರೆಟಿಗಳು ಈ ನಡೆ ಇತರ ಬೈಕ್ ರೈಡರ್‌ಗಳಿಗೆ ಉತ್ತೇಜನ ನೀಡುವಂತಿದೆ ಎಂದು ಹೇಳಿದೆ. ಇದು ರಸ್ತೆ ನಿಯಮ ಉಲ್ಲಂಘನೆಗೆ ಕಾರಣವಾಗುತ್ತೆ ಎಂದಿದೆ.