ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ -ಬರುತ್ತಿದೆ ಬಜಾಜ್ ಬೈಕ್! ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಸ್ಪರ್ಧೆ ಹೆಚ್ಚಾಗ್ತಿದೆ. ಜಾವಾ ಬೈಕ್ ಬಳಿಕ ಇದೀಗ ಬಜಾಜ್ ಕೂಡ ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿ ನೀಡಲು ರೆಡಿಯಾಗಿದೆ. ಬಜಾಜ್ ಬಿಡುಗಡೆ ಮಾಡುತ್ತಿರುವ ನೂತನ ಬೈಕ್ ಯಾವುದು? ಇಲ್ಲಿದೆ ವಿವರ. ನವದೆಹಲಿ(ಮಾ.07):ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಈಗಾಗಲೇ ಜಾವಾ ಮೋಟಾರ್ ಬೈಕ್ ಪೈಪೋಟಿ ನೀಡುತ್ತಿದೆ. ಇದೀಗ ಬಜಾಜ್ ಪೈಪೋಟಿ ನೀಡಲು ಸಜ್ಜಾಗಿದೆ. ಬಜಾಜ್ ಟ್ವಿನ್ ಸಿಲಿಂಡರ್ ಎಂಜಿನ್ ಬೈಕ್ ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ 650 ಹಾಗೂ ಇಂಟರ್‌ಸೆಪ್ಟರ್ 650 ಬೈಕ್‌ಗೆ ಪೈಪೋಟಿ ನೀಡಲಿದೆ. ಇದನ್ನೂ ಓದಿ:ಹಿರೋ 200R ಬೈಕ್ ಆ್ಯಡ್ - ನಿಯಮ ಉಲ್ಲಂಘಿಸಿದ ಕೊಹ್ಲಿ! ಕಳೆದ ವರ್ಷ ರಾಯಲ್‌ ಎನ್‌ಫೀಲ್ಡ್ ಟ್ವಿನ್ ಸಿಲಿಂಡರ್ ಬೈಕ್‌ಗಳಾದ ಕಾಂಟಿನೆಂಟಲ್ 650 ಹಾಗೂ ಇಂಟರ್‌ಸೆಪ್ಟರ್ 650 ಬಿಡುಗಡೆ ಮಾಡಿದೆ. ಇದು ಯಶಸ್ಸು ಕಂಡಿದೆ. ಟ್ವಿನ್ ಸಿಲಿಂಡರ್ ಬೈಕ್ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಬಜಾಜ್ ಕೂಡ ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ. ಇದನ್ನೂ ಓದಿ:ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬಿಡುಗಡೆ! ಹಾಗೂ ಬಜಾಜ್ ಸಹಯೋಗದಲ್ಲಿ 500cc ಟ್ವಿನ್ ಸಿಲಿಂಡರ್ ಬೈಕ್ ಬಿಡುಗಡೆಯಾಗಲಿದೆ. ಬೈಕ್ ಇದಾಗಿದ್ದು, ಬಜಾಜ್ ಬೈಕ್ ಘಟಕದಲ್ಲಿ ಈ ಬೈಕ್ ಉತ್ಪಾದನೆಯಾಗಲಿದೆ. ಇಷ್ಟೇ ಅಲ್ಲ ವಿದೇಶಗಳಿಗೂ ಭಾರತದಿಂದಲೇ ರಫ್ತಾಗಲಿದೆ. ಭಾರತದಲ್ಲಿ ಬೈಕ್ ಹೆಚ್ಚು ಪ್ರಸಿದ್ಧಿಯಾಗಿದೆ. 125, 200, 250, 390 ಬೈಕ್ ಯುವ ಜನತೆಯನ್ನು ಆಕರ್ಷಿಸಿದೆ. ಇದೀಗ ಟ್ವಿನ್ ಸಿಲಿಂಡರ್ 500 ಸಿಸಿ ಬೈಕ್ ಕೂಡ ಹೊಸ ಸಂಚಲನ ಮೂಡಿಸಲಿದೆ ಎಂದು ಕಂಪನಿ ಹೇಳಿದೆ.