ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳಿಗೆ 20 ಲಕ್ಷ ರೂ ಡಿಸ್ಕೌಂಟ್! ಟಾಟಾ ಒಡೆತನ ಜಾಗ್ವಾರ್ ಲ್ಯಾಂಡ್ ರೋವರ್ ಕಾರು ಕಂಪೆನಿ ಗ್ರಾಹರಿಗೆ ಭರ್ಜರಿ ಆಫರ್ ನೀಡಿದೆ. ಕಾರು ಖರೀದಿಸೋ ಗ್ರಾಹರಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ವರೆಗಿನ ಡಿಸ್ಕೌಂಟ್ ಘೋಷಿಸಿದೆ. ಇಲ್ಲಿದೆ ಆಫರ್ ಕುರಿತ ಹೆಚ್ಚಿನ ವಿವರ. ನವದೆಹಲಿ(ಫೆ.21):ಟಾಟಾ ಒಡೆತನ ಬ್ರಿಟೀಷ್ ಕಂಪನಿ ಜಾಗ್ವಾರ್ ಲ್ಯಾಂಡ್ ರೋವರ್ ತನ್ನ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳಿಗೆ ಗರಿಷ್ಠ 20 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಮೂಲಕ ಸ್ಟಾಕ್ ಕ್ಲೀಯರ್ ಮಾಡಲು ಪ್ರತಿಷ್ಠಿತ ಜಾಗ್ವಾರ್ ಲ್ಯಾಂಡ್ ರೋವರ್ ಮುಂದಾಗಿದೆ. ಇದನ್ನೂ ಓದಿ:ಭಾರತೀಯ ಸೇನೆಗೆ ಬೇಕಿದೆ ಆಡ್‌ಆರ್ಮರ್ ಬುಲೆಟ್‌ಫ್ರೂಫ್ ವಾಹನ! ಕಾರುಗಳಿಗೆ ಕನಿಷ್ಠ 7 ಲಕ್ಷ ರೂಪಾಯಿಂದ ಗರಿಷ್ಠ 20 ಲಕ್ಷ ರೂಪಾಯಿವರೆಗೆ ರಿಯಾಯಿತಿ ನೀಡಲಾಗಿದೆ. ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರುಗಳಿಗೆ 7 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದ್ದರೆ, ಜಾಗ್ವರ್ ಸೆಡಾನ್ ಕಾರಿಗೆ 20 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ನ್ಯೂ ಜೆನರೇಶನ್ ಡಿಸ್ಕವರಿ ಕಾರಿಗೆ 12 ಲಕ್ಷ ರೂಪಾಯಿ, ಜಾಗ್ವಾರ್ ಸೆಡಾನ್ ಕಾರಿಗೆ 8 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ಇದನ್ನೂ ಓದಿ:ಕೆಟ್ಟು ನಿಂತ ಭಾರತದ ಅತಿ ವೇಗದ ರೈಲು: ಏನಾಗಿತ್ತು? ಈ ಆಫರ್ ಕೆಲ ನಿರ್ದಿಷ್ಟ ಕಾರುಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಕಂಪನಿ ಹೇಳಿದೆ. 2018ರ ಜನವರಿಯಿಂದ ಆಗಸ್ಟ್ ವರೆಗೆ ತಯಾರಾದ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳಿಗೆ ಈ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಈ ಮೂಲಕ ಜಾಗ್ವಾರ್ ಕಂಪೆನಿ ಮಾರಾಟದಲ್ಲಿ ಗಣನೀಯ ಏರಿಕೆ ದಾಖಲಿಸಲು ಭರ್ಜರಿ ಪ್ಲಾನ್ ಹಾಕಿಕೊಂಡಿದೆ.