ಪ್ರೇಮಿಗಳ ಮೋಡಿ ಮಾಡಿತು ಟಾಟಾ ನೆಕ್ಸಾನ್ ಹೊಸ ಜಾಹೀರಾತು! ಭಾರತದ ಗರಿಷ್ಠ ಸುರಕ್ಷತೆಯ ಕಾರು ಎಂದು ಗುರುತಿಸಿಕೊಂಡಿರುವ ಟಾಟಾ ನೆಕ್ಸಾನ್ ಕಾರು ಇದೀಗ ಪ್ರೇಮಿಗಳ ದಿನ ಹೊಸ ಜಾಹೀರಾತು ಬಿಡುಗಡೆ ಮಾಡಿದೆ. ಪ್ರೇಮಿಗಳನ್ನೂ ಮೋಡಿ ಮಾಡಿರುವ ಈ ಜಾಹೀರಾತು ಹೇಗಿದೆ? ಇಲ್ಲಿದೆ ವಿವರ. ಮುಂಬೈ(ಫೆ.14):ಟಾಟಾ ನೆಕ್ಸಾನ್ ಕಾರು ಹೊಸ ಜಾಹೀರಾತು ಬಿಡುಗಡೆ ಮಾಡಿದೆ. ಪ್ರೇಮಿಗಳ ದಿನ ಈ ಜಾಹೀರಾತು ಬಿಡುಗಡೆ ಮಾಡಿದ್ದು,ಪ್ರಣಯ ಹಕ್ಕಿಗಳನ್ನ ಮೋಡಿ ಮಾಡಿದೆ. ನಿಮ್ಮ ಪ್ರೀತಿಯ ಅತ್ಯುತ್ತಮ ರಕ್ಷಕ ಅನ್ನೋ ಹೊಸ ಜಾಹೀರಾತು ಟಾಟಾ ನೆಕ್ಸಾನ್ ಕಾರಿನ ಸುರಕ್ಷತೆ ಹಾಗೂ ಪ್ರೇಮಿಗಳಿಗೂ ಅನ್ವಯಿಸೋ ರೀತಿ ನೀಡಲಾಗಿದೆ. ಇದನ್ನೂ ಓದಿ:ಮಹೀಂದ್ರ 300 ಬಿಡುಗಡೆ- ಕಡಿಮೆ ಬೆಲೆಯ ಕಾರು! ಟಾಟಾ ನೆಕ್ಸಾನ್ ಕಾರು ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಗೆಗೆ ಪಾತ್ರವಾಗಿದೆ. ಕ್ರಾಶ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್ ಕಾರು 5 ಸ್ಟಾರ್ ಪಡೆದುಕೊಂಡಿದೆ. ಈ ಮೂಲಕ 5 ಸ್ಟಾರ್ ಪಡೆದ ಭಾರತದ ಮೊದಲ ಕಾರು ಎಂದೇ ಗುರುತಿಸಿಕೊಂಡಿದೆ. ಇದೀಗ ಇದೇ ಸುರಕ್ಷತಾ ವಿಚಾರವನ್ನ ಇಟ್ಟುಕೊಂಡು ಪ್ರೇಮಿಗಳಿಗೂ ಅನ್ವಯಿಸೋ ರೀತಿ ಹೊಸ ಜಾಹೀರಾತು ಬಿಡುಗಡೆ ಮಾಡಿದೆ. ಇದನ್ನೂ ಓದಿ:ಮಧ್ಯ ರಾತ್ರಿಯಲ್ಲೂ ಮಾರುತಿ ಕಾರು ಸರ್ವಿಸ್- 6 ನಗರಗಳಲ್ಲಿ 24*7 ಸರ್ವಿಸ್ ಆರಂಭ! ಟಾಟಾ ನೆಕ್ಸಾನ್ ಕಾರು ಅತ್ಯಂತ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ನೆಕ್ಸಾನ್ ಬೆಲೆ 6.31 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ. 1.2 ಟರ್ಬೋ ಪೆಟ್ರೋಲ್ ಎಂಜಿನ್ ಕಾರು, 108 -170 ಉತ್ವಾದಿಸಲಿದೆ. 1.5 ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಕಾರು 108 -260 ಉತ್ಪಾದಿಸಲಿದೆ. 6 ಸ್ವೀಡ್ ಮ್ಯಾನ್ಯುಯೆಲ್ ಟ್ರಾನ್ಸಮಿಶನ್ ಹಾಗೂ ಆಯ್ಕೆಯೂ ಲಭ್ಯವಿದೆ.