ಮಹೀಂದ್ರ 300 ಬಿಡುಗಡೆ- ಕಡಿಮೆ ಬೆಲೆಯ ಕಾರು! ಮಹೀಂದ್ರ ನೂತನ XUV300 ಕಾರು ಬಿಡುಗಡೆಯಾಗಿದೆ. ಮಾರುತಿ ಬ್ರಿಜಾ , ಟಾಟಾ ನೆಕ್ಸಾನ್, ಇಕೋ ಸ್ಪೋರ್ಟ್ ಸೇರಿದಂತೆ ಸಬ್ ಕಾಂಪಾಕ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿರುವ ಈ ಕಾರಿನ ವಿಶೇಷತೆ ಏನು? ಇದರ ಬೆಲೆ, ಮೈಲೇಜ್ ಎಷ್ಟು? ಇಲ್ಲಿದೆ ವಿವರ. ಮುಂಬೈ(ಫೆ.14):ಪ್ರೇಮಿಗಳ ದಿನ ಮಹೀಂದ್ರ ಸಂಸ್ಥೆಯ ಬಹುನಿರೀಕ್ಷಿತ 300 ಕಾರು ಬಿಡುಗಡೆಯಾಗಿದೆ. ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ನೂತನ 300 ಕಾರು ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಮಾರುತಿ ಬ್ರಿಜಾ, ಟಾಟಾ ನೆಕ್ಸಾನ್ ಹಾಗೂ ಫೋರ್ಡ್ ಇಕೋ ಸ್ಪೋರ್ಟ್ ಸೇರಿದಂತೆ ಸಬ್ ಕಾಂಪಾಕ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಇದನ್ನೂ ಓದಿ:ರಿವಿಯಾನ್ ಮೋಟಾರ್ಸ್ ಖರೀದಿಸಲು ಮುಂದಾದ ಅಮೇಜಾನ್! ನೂತನ ಮಹೀಂದ್ರ XUV300 ಕಾರಿನ ಬೆಲೆ 7.90 ಲಕ್ಷ ರೂಪಾಯಿಂದ ಆರಂಭವಾಗಲಿದೆ. ಟಾಪ್ ವೇರಿಯೆಂಟ್ ಬೆಲೆ 11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ಗಳಲ್ಲಿ ಮಹೀಂದ್ರ XUV300 ಕಾರು ಲಭ್ಯವಿದೆ. ಪೆಟ್ರೋಲ್ ವೇರಿಯೆಂಟ್ ಕಾರು ಗರಿಷ್ಠ 17 ಕಿ.ಮೀ ಪ್ರತಿ ಲೀಟರ್‌ಗೆ ನೀಡಿದರೆ, ಡೀಸೆಲ್ ವೇರಿಯೆಂಟ್ ಗರಿಷ್ಠ 20 ಕಿ.ಮೀ ಪ್ರತಿ ಲೀಟರ್‌ಗೆ ನೀಡಲಿದೆ. ಇದನ್ನೂ ಓದಿ:ಮೋದಿ ಸರ್ಕಾರದ ಹೊಸ ಯೋಜನೆ- ಎಲೆಕ್ಟ್ರಿಕ್ ವಾಹನಕ್ಕೆ ಸುಲಭ ಸಾಲ! ಮಹೀಂದ್ರXUV300 ಕಾರಿನ ಬೆಲೆ ಇದನ್ನೂ ಓದಿ:ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್!ಮಹೀಂದ್ರ XUV300 ಕಾರು 3990 ಉದ್ದ, 1820 ಅಗಲ ಹಾಗೂ 1620 ಎತ್ತರವಿದೆ. ಇನ್ನೂ ವೀಲ್ಹ್ ಬೇಸ್ 2620 ಹೊಂದಿದೆ. ನೂತನ XUV300 ಕಾರಿನ ಗ್ರೌಂಡ್ ಕ್ಲೀಯರೆನ್ಸ್ 180 ಮಿಲಿಮೀಟರ್ಸ್. ಆದರೆ ಮಾರುತಿ ಬ್ರಿಜಾ, ಟಾಟಾ ನೆಕ್ಸಾನ್ ಹಾಗೂ ಇಕೋಸ್ಪೋರ್ಟ್ ಕಾರಿನ ಗ್ರೌಂಡ್ ಕ್ಲೀಯರೆನ್ಸ್ 198 ಮಿಲಿಮೀಟರ್ಸ್‌ಗಿಂತ ಹೆಚ್ಚಿದೆ.