ಹೊಂಡಾ ಟೊಮೊ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ! ಹೊಂಡಾ ಟೊಮೊ ಎಲೆಕ್ಟ್ರಿಕ್ ಕಾರು ಅನಾವರಣಗೊಳ್ಳುತ್ತಿದೆ. ಆಕರ್ಷಕ ವಿನ್ಯಾಸ ಹೊಂದಿರುವ ಈ ಕಾರು, ಎಲೆಕ್ಟ್ರಿಕ್ ವಿಭಾಗದಲ್ಲಿ ಸಂಚನಲ ಮೂಡಿಸಲಿದೆ. ಈ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. ಜಿನೆವಾ(ಫೆ.13): ಹೊಂಡಾ ಮೋಟಾರ್ಸ್ ನೂತನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಮಾರ್ಚ್ 7 ರಿಂದ 17ರ ವರೆಗೆ ನಡೆಯಲಿರುವ ಜಿನೆವಾ ಮೋಟಾರ್ ಶೋನಲ್ಲಿ ಹೊಂಡಾ ಕಂಪೆನಿ ಟೊಮೊ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಲಿದೆ. ಇದನ್ನೂ ಓದಿ:ನೆಲಕ್ಕೆ ಬಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ಸುಲಭವಾಗಿ ಎತ್ತಲು ಇಲ್ಲಿದೆ ಟಿಪ್ಸ್! ಹೊಂಡಾ ಹಾಗೂ ಇಸ್ಟಿಟ್ಯೂಟೋ ಯುರೋಪಿಯೋ ಡಿ ಡಿಸೈನ್ ಸೇರಿ ನೂತನ ಕಾರಿನ ವಿನ್ಯಾಸ ರೂಪಿಸಿದೆ. ಟೊರಿನೋದ ಮಾಸ್ಟರ್ ಡಿಸೈನ್ ಸಂಸ್ಥೆಯ 13 ವಿದ್ಯಾರ್ಥಿಗಳು ಈ ಟೊಮೊ ಡಿಸೈನ್ ಥೀಸಿಸ್ ಮಂಡಿಸಿದ್ದರು. ಈ ಡಿಸೈನ್‌ನಿಂದ ಪ್ರಭಾವಿಗೊಂಡ ಹೊಂಡಾ, ಹೆಚ್ಚಿನ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಸೂಚಿಸಿತ್ತು. ಇದೀಗ ವಿದ್ಯಾರ್ಥಿಗಳಿಂದಲೇ ರೂಪಿಸಲಾದ ಟೊಮೊ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರನ್ನ ಹೊಂಡಾ ಅನಾವರಣ ಮಾಡಲಿದೆ. ಇದನ್ನೂ ಓದಿ:ಮೋದಿ ಸರ್ಕಾರದ ಹೊಸ ಯೋಜನೆ- ಎಲೆಕ್ಟ್ರಿಕ್ ವಾಹನಕ್ಕೆ ಸುಲಭ ಸಾಲ! ಟೊಮೊ ಎಲೆಕ್ಟ್ರಿಕ್ ಕಾರು 3997 ಉದ್ದ, 1893 ಅಗಲ ಹಾಗೂ 1556 ಎತ್ತರವಿದೆ. ವೀಲ್ಹ್ ಬೇಸ್ 2690 ಹೊಂದಿದೆ. ಮಿನಿ ಕಾರು ಹಾಗೂ ಪಿಕ್ ರೀತಿಯಲ್ಲಿರುವ ನೂತನ ಹೊಂಡಾ ಟೊಮೊ ಆಕರ್ಷಕ ವಿನ್ಯಾಸ ಹೊಂದಿದೆ. ಸದ್ಯ ಈ ಕಾರಿನ ವಿನ್ಯಾಸ ಬಿಡುಗಡೆ ಮಾಡಿರುವ ಹೊಂಡಾ, ಇತರ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ.