11 ಲಕ್ಷ ರೂಪಾಯಿ ದುಬಾರಿ ಬೈಕ್ ಖರೀದಿಸಿದ ಶಾಹಿದ್ ಕಪೂರ್! ಹಾರ್ಲೆ ಡೇವಿಡ್ಸನ್ ಬೈಕ್ ಸೇರಿದಂತೆ ಹಲವು ದುಬಾರಿ ಬೈಕ್ ಹೊಂದಿರುವ ಶಾಹಿದ್ ಕಪೂರ್ ಇದೀಗ ಮತ್ತೊಂದು ದುಬಾರಿ ಬೈಕ್ ಖರೀದಿಸಿದ್ದಾರೆ. ಶಾಹಿದ್ ಖರೀದಿಸಿದ ನೂತನ ಬೈಕ್ ಯಾವುದು? ಇದರ ವಿಶೇಷತೆ ಏನು? ಇಲ್ಲಿದೆ ವಿವರ. ಮುಂಬೈ(ಫೆ.03):ಬಾಲಿವುಡ್ ನಟರು ಬೈಕ್ ರೈಡ್ ಮಾಡೋದರಲ್ಲಿ ಮುಂದಿದ್ದಾರೆ. ಹೀಗಾಗಿಯೇ ದುಬಾರಿ ಬೈಕ್‌ಗಳನ್ನ ಖರೀದಿಸುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್ ನಟ ಶಾಹೀದ್ ಕಪೂರ್ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಖರೀದಿಸಿದ್ದಾರೆ. ನೂತನ ಬೈಕ್‌ನಲ್ಲಿ ಶಾಹಿದಿ ಮುಖಕ್ಕೆ ಮಾಸ್ಕ್ ಹಾಕಿ ಒಂದು ರೌಂಡ್ ಸುತ್ತಾಡಿದ್ದಾರೆ. ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಭಾರತದಲ್ಲಿ ಕಳೆದ ವರ್ಷ ಬಿಡುಗಡೆಯಾಗಿದೆ. ಶಾಹಿದ್ ಕಪೂರ್ ಖರೀದಿಸಿರುವ ಬೈಕ್ ಡುಕಾಟಿ ಸ್ಕ್ರಾಂಬ್ಲರ್ 1100 ಸ್ಪೆಷಲ್ ಎಡಿಶನ್. ಇದರ ಬೆಲೆ 11.12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಅಲ್ಯೂಮಿನಿಯಂ ಪಾರ್ಟ್ಸ್ ಮೂಲಕ ಗಮನಸೆಳೆದಿರುವ ಸ್ಪೆಷಲ್ ಎಡಿಶನ್ ಡುಕಾಟಿ ಬೈಕ್, ಇದೀಗ ಶಾಹೀದ್ ಕಪೂರ್ ಕೈಸೇರಿದೆ. , & - ' .. # @. SHAHID20 20% (@) 2, 2019 9:29pm 1,079cc, ಲಿಕ್ವಿಡ್ ಕೂಲ್‌ಡ್, ಟ್ವಿನ್ ಎಂಜಿನ್ ಹೊಂದಿರುವ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ 85 ಪವರ್ ಹಾಗೂ 88 ಟಾರ್ಕ್ ಉತ್ವಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ ಖರೀದಿಸಿದ ಶಾಹೀದ್ ಪುಟ್ಟ ಮಗಳೊಂದಿಗೆ ಸುತ್ತಾಡಿದ್ದಾರೆ. ಶಾಹಿದ್ ಕಪೂರ್ ಬಳಿ ಹಾರ್ಲೆ ಡೇವಿಡ್ಸನ್ ಬೈಕ್ ಕೂಡ ಇದೆ.