ವಿಶ್ವದ ಸ್ಟೈಲೀಶ್ ಬೈಕ್ - ಟ್ರಿಯಂಪ್ ರಾಕೆಟ್ ಅನಾವರಣ! ಅತ್ಯಂತ ಆಕರ್ಷಕ ವಿನ್ಯಾಸದ ಟ್ರಿಯಂಪ್ ರಾಕೆಡ್ ಲಿಮಿಟೆಡ್ ಎಡಿಶನ್ ಬೈಕ್ ಅನಾವರಣವಾಗಿದೆ. ವಿಶೇಷ ಅಂದರೆ ಈ ಬೈಕ್ ಭಾರತದಲ್ಲೂ ಬಿಡುಗಡೆಯಾಗುತ್ತಿದೆ. ಈ ಬೈಕ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. ಲಂಡನ್(ಜ.25):ಬ್ರಿಟೀಷ್ ಮೂಲದ ಟ್ರಿಯಂಪ್() ಮೋಟಾರ್ ಸೈಕಲ್ ಇದೀಗ ನೂತನ ಲಿಮಿಟೆಡ್ ಎಡಿಶನ್ ಟ್ರಿಯಂಪ್ ಫ್ಯಾಕ್ಟರಿ ಕಸ್ಟಮ್() ಕಾನ್ಸೆಪ್ಟ್ ಬೈಕ್ ಅನಾವರಣ ಮಾಡಿದೆ. 2019ರ ಟ್ರಿಯಂಪ್ ಪವರ್ ಬೈಕ್ ಇದೇ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಇದನ್ನೂ ಓದಿ:ಡ್ರೈವರ್,ಪೆಟ್ರೋಲ್, ಡೀಸೆಲ್ ಯಾವುದು ಬೇಡ-15 ಲಕ್ಷ ರೂ.ಗೆ ಸೋಲಾರ್ ಬಸ್! 2.3 ಲೀಟರ್ ಎಂಜಿನ್ ಹೊಂದಿರುವ ಟ್ರಿಯಂಪ್ ರಾಕೆಟ್ ಹೆಚ್ಚುವರಿ ಫೀಚರ್ಸ್ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ. 2004ರಲ್ಲಿ ಬಿಡುಗಡೆಯಾದ ಎಂಜಿನ್ ಅಪ್‌ಗ್ರೇಡ್ ಮೂಲಕ ರಸ್ತೆಗಿಳಿಯಲಿದೆ. ಇದನ್ನೂ ಓದಿ:ಲ್ಯಾಂಬೋರ್ಗಿನಿ ಅವೆಂಟಡೊರ್ ಕಾರು ಬಿಡುಗಡೆ- ಬೆಂಗಳೂರಲ್ಲಿ ಮೊದಲ ಖರೀದಿ! ನೂತನ ಬೈಕ್ ಎಂಜಿನ್ 180 ಪವರ್ ಹಾಗೂ 230 ಪೀಕ್ ಟಾರ್ಕ್ ಉತ್ವಾದಿಸಬಲ್ಲ ಸಾಮಾರ್ಥ್ಯಹೊಂದಿದೆ. ಈ ಲಿಮಿಟೆಡ್ ಎಡಿಶನ್ ಬೈಕ್ 2 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ವಿಶೇಷ ಅಂದರೆ ಈ ಬೈಕ್ 2019ರ ಅಂತ್ಯದಲ್ಲಿ ಭಾರದಲ್ಲೂ ಬಿಡುಗಡೆಯಾಗಲಿದೆ. ಆದರೆ ಇದರ ಬೆಲೆ ಕುರಿತು ಯಾವುದೇ ಮಾಹಿತಿಯನ್ನ ಕಂಪನಿ ಬಹಿರಂಗ ಪಡಿಸಿಲ್ಲ.